Advertisement

ಪರಮಾನತ್ಮನ ಸಾಕ್ಷಾತ್ಕಾರದಿಂದ ಮನುಷ್ಯ ಜನ್ಮಕ್ಕೆ ಧನ್ಯತಾ ಭಾವ: ಸ್ವರ್ಣವಲ್ಲೀ ಶ್ರೀ

07:32 PM Jul 06, 2023 | Team Udayavani |

ಶಿರಸಿ: ಮನುಷ್ಯನಾದವನಿಗೆ ಅವನ ಇಡೀ ಜೀವತ ಅವಧಿಯ ಬಗ್ಗೆ ಧನ್ಯತಾ ಭಾವ ಬರಬೇಕು. ಅದು ಬರುವದು ಪರಮಾತ್ಮನಲ್ಲಿ ಭಕ್ತಿ ಇಟ್ಟಾಗ ಹಾಗೂ ಅದು ಬೆಳೆದು ಬೆಳೆದು ಪರಮಾತ್ಮನ ಸಾಕ್ಷಾತ್ಕಾರ ಆದಾಗ. ಆಗ ಧನ್ಯತಾ ಭಾವ ಬರುತ್ತದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.

Advertisement

ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಸುತ್ತಿರುವ 33 ನೇ ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಗುರುವಾರ ತಾಲೂಕಿನ ಬನವಾಸಿ, ತವನಂದಿ ಹಾಗೂ ಬದನಗೋಡು ಭಾಗದ ಶಿಷ್ಯರು ಸಲ್ಲಿಸಿದ ಸೇವೆ, ಭಿಕ್ಷೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಧನ್ಯತೆ ಪಡೆಯಬೇಕು. ಸಾರ್ಥಕತೆ, ಕೃತಜ್ಞತೆ ಪಡೆಯಬೇಕು ಎಂಬುದು ಇರುತ್ತದೆ. ಎಲ್ಲರೂ ಇದನ್ನು ಅಪೇಕ್ಷೆ ಪಡುತ್ತಾರೆ. ಧನ್ಯತೆ ಎಂದರೆ ಏನು? ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದಾಗ ಈ ಭಾವ ಬರುತ್ತದೆ. ಮನುಷ್ಯುನಾಗಿ ಹುಟ್ಟಿ ಮಾಡಬೇಕಾದ ಕೆಲಸ ಮಾಡಿದಾಗ ಏನು ಆತ್ಮ ಸಂತೋಷ, ಸಂತೃಪ್ತಿ ಸಿಗುತ್ತದೋ ಅದೇ ಅದೇ ಧನ್ಯುತೆ. ಕರ್ತವ್ಯ ಪೂರ್ಣವಾಗಿ ಮುಗಿಸಿದಾಗ ಸಂತೋಷ ಆಗುತ್ತದೆ. ಅದೇ ಧನ್ಯತೆ ಎಂದರು.

ಮದ್ಯಮ ವರ್ಗದಲ್ಲಿ ಮಗಳ ಮದುವೆ ಆದಾಗ, ಮನೆ ಕಟ್ಟಿ ಮುಗಿದಾಗ ಈ ಭಾವ ಸಹಜವಾಗಿ ಅಲ್ಲಲ್ಲಿ ಬರುತ್ತದೆ. ಆದರೆ, ನಾಔಉ ಹೇಳುವದು ಇಷ್ಟೇ ಅಲ್ಲ, ಇನ್ನೂ ಮುಂದೆ ಹೋಗಿ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕತೆ ಆಯಿತು ಎಂಬ ಭಾವನೆ ಬೇಕು. ಅದು ಪರಮಾತ್ಮನಲ್ಲಿನ ಭಕ್ತಿ, ಅದು ಬೆಳೆದಯು ಸಾಕ್ಷಾತ್ಕಾರ ಆದಾಗ ಧನ್ಯತೆ ಬರುತ್ತದೆ. ಆಗ ಆ ಭಾವ ಬರುತ್ತದೆ ಎಂದು ಹೇಳಿದರು.
ಪರಮಾಣತ್ಮನ ಕಡೆ ಭಕ್ತಿ ಬೆಳೆದು ಮನುಷ್ಯನಿಗೆ ಸಾಕ್ಷಾತ್ಕಾರ ಆದರೆ, ಮುಕ್ತಿಯ ದಾರಿ ತೆರೆದುಕೊಳ್ಳುತ್ತದೆ. ಸಂಸಾರದ ಬಂಧ ಕಳೆದು ಆನಂದ ಬರುತ್ತದೆ. ಆ ಧನ್ಯತೆ ಭಾವ ಪಡೆಯುವ ಪ್ರಯತ್ನದಲ್ಲಿ ನಿರತರಾಗಬೇಕು. ಆಗ ಮರಣದ ಭಯ ಇರುವದಿಲ್ಲ. ಅದನ್ನು ಪಡೆಯದೇ ಇದ್ದವರಿಗೆರ ಮರಣದ ಭಯ ಬರುತ್ತದೆ ಎಂದೂ ವಿಶ್ಲೇಷಿಸಿದದರು.

ಪರಿಪೂರ್ಣತೆ ಕೃತಜ್ಞತೆ ಇದ್ದರೆ, ಪರಮಾತ್ಮನ ಸಾಕ್ಷಾತ್ಕಾರ ಆದವರು ಮರಣವನ್ನು ದ್ವೇಷ ಮಾಡದೇ ಆತ್ಮೀಯರಂತೆ ಕಾಣುತ್ತಾನೆ. ಇದು ಬಹಳ ವಿಶೇಷ. ಅತಿಥಿಯಂತೆ ಮರಣವನ್ನು ಸ್ವಾಗತಿಸುತ್ತಾನೆ. ಹೆಚ್ಚಿನವರಿಗೆ ಪರಮಾತ್ಮನ ಸಾಕ್ಷಾತ್ಕಾರ ಇರದೇ ಇದ್ದರೆ ಹೆದರುತ್ತಾನೆ ಎಂದ ಶ್ರೀಗಳು ನಾನು ಶರೀರವಲ್ಲ, ಶರೀರದ ಒಳಗೆ ಇದ್ದವನು ಎಂಬ ಅರಿವಾಗುತ್ತದೆ. ಶರೀರಕ್ಕಿಂತ ಬೇರೆ ಎಂಬುದು ಗೊತ್ತಾಗುತ್ತದೆ. ಸಂಸಾರದ ಬಗ್ಗೆ ಮಮಕಾರ ಪ್ರೀತಿ ಇದ್ದರೆ ಆತ್ಮ ಶರೀರಕ್ಕೆ ಅಂಟಿಕೊಳ್ಳುತ್ತದೆ. ಆದರೆ, ನಾವು ಅಂಟಿಕೊಂಡು ಮರಣಕ್ಕೆ ಭಯ ಪಡುತ್ತೇವೆ ಎಂದೂ ಹೇಳಿದರು.
ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗ ಮಾಡಬೇಕು. ಭಕ್ತಿಗಾಗಿ ಪೂಜೆ, ಜಪ ಮಾಡಬೇಕು. ಶಾಸ್ತ್ರೀಯ ಕರ್ಮ ಮಾಡಿ, ದೇವರಿಗೆ ಅರ್ಪಿಸಬೇಕು. ಆಸಾನ, ಪ್ರಾಣಾಯಾಮ ನಿತ್ಯವೂ ಅನುಷ್ಠಾನ ಮಾಡಬೇಕು ಎಂದರು.

Advertisement

ಇದಕ್ಕೂ ಮುನ್ನ ಆರ್.ಎಸ್.ಹೆಗಡೆ ಭೈರುಂಬೆ ಮಠದ ಕಾರ್ಯಚಟುವಟಿಕೆ ಮಾಹಿತಿ ನೀಡಿದರು.

ಬ್ರಾಹ್ಮೀ ಮುಹೂರ್ತದಲ್ಲಿ ಜಪ, ಧ್ಯಾನ, ದೇವರ ಪೂಜೆ, ಯೋಗಾಸನ ಎಲ್ಲ ಮಾಡಬೇಕು. ಈಚೆಗೆ ಈ ಸುಂದರ ಮನೆಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಅವು ಹೆಚ್ಚಳವಾಗಬೇಕು. -ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next