Advertisement

ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಆಗ್ರಹ

03:11 PM Dec 18, 2019 | Suhan S |

ಕನಕಪುರ: ಗ್ರಾಮ ಪಂಚಾಯ್ತಿ ಏಳಿಗೆಗಾಗಿ ದುಡಿಯುತ್ತಿರುವ ಪಂಚಾಯ್ತಿ ನೌಕರರಿಗೆ ಸರ್ಕಾರ ಕನಿಷ್ಠ ಕೂಲಿ ನಿಗದಿ ಮಾಡಿದ್ದರೂ, ಸರಿಯಾಗಿ ವೇತನ ನೀಡದಿರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಮಂಗಳವಾರ ಗ್ರಾಮ ಪಂಚಾಯ್ತಿ ನೌಕರರು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ 43 ಗ್ರಾಮ ಪಂಚಾಯ್ತಿಯಿಂದ ಸುಮಾರು 400 ಕ್ಕೂ ಹೆಚ್ಚು ನೌಕರರು ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಮೆರವಣೆಗೆ ಹೊರಟು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಿವೃತ್ತಿಯಾದ ಸಬ್ಬಂದಿಗೆ ತಕ್ಷಣ ಉಪ ಧನ ನೀಡಬೇಕು 2016 ರ ಸರ್ಕಾರದ ನಿಯಮದ ಪ್ರಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಮತ್ತು ಡಿಎ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯ್ತಿಗಳು ತಕ್ಷಣ ಬಾಕಿ ವೇತನ ನೀಡಬೇಕು. ಅನುಮೋದನೆಯಾಗದೇ ಉಳಿದಿರುವ ಕೂಡಲೆ ಸಿಬ್ಬಂದಿಯನ್ನುಅನುಮೋದನೆ ಮಾಡಬೇಕು. ಗ್ರಾಪಂ ಸಿಬ್ಬಂದಿಗೆ ಸೇವಾ ಪುಸ್ತಕವನ್ನು ತೆರೆದು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಆದೇಶದಂತೆ 14ನೇ ಹಣಕಾಸು ಯೋಜನೆಯ ನಿಧಿಯಲ್ಲಿ ಶೇ.10 ರಷ್ಟು ಮತ್ತು ಸ್ಥಳೀಯ ತೆರಿಗೆ ಸಂಗ್ರಹ ಹಣದಲ್ಲಿ ಶೇ.40 ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕೆ ಉಪಯೋಗಿಸಬೇಕು ಇ.ಎಫ್.ಎಮ್‌.ಎಸ್‌. ಆದವರಿಗೆ ಸರ್ಕಾರ ಬಿಡುಗಡೆ ಮಾಡಿದ ಸಿಬ್ಬಂದಿ ವೇತನದಿಂದ ಆಗದವರಿಗೆ ಗ್ರಾಮ ಪಂಚಾಯಿತಿ ನಿಧಿಯಿಂದ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ನೌಕರರಿಗೆ ಕೊಟ್ಟಿರುವ ಬಿಪಿಎಲ್‌ ಕಾರ್ಡುಗಳನ್ನು ಮರು ಪರಿಶೀಲನೆ ಮಾಡಬೇಕು. ಬಿಲ್‌ ಕಲೆಕ್ಟರ್‌ ಹುದ್ಧೆಯಿಂದ ಗ್ರೇಡ್‌ 2 ಕಾರ್ಯದರ್ಶಿ ಹುದ್ಧೆಗೆ ಬಡ್ತಿ ನೀಡಬೇಕು. ಕಂಪ್ಯೂಟರ್‌ ಆಪರೇಟರ್‌ಗಳಿಗೆ ಬಡ್ತಿ ನೀಡಬೇಕು. ನಮಗೆ ಸರ್ಕಾರ ಕನಿಷ್ಠ ಕೂಲಿ ನಿಗದಿ ಮಾಡಿದ್ದರೂ, ಸಹ ಪಂಚಾಯಿತಿಗಳಲ್ಲಿ ವೇತನವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ನಮ್ಮ ವೇತನವು ನಿಗದಿತ ಸಮಯಕ್ಕೆ ನಮ್ಮ ಕೈ ಸೇರದ ಕಾರಣ ಸಾಲ ಮಾಡಿಕೊಂಡು ತೊಂದರೆ ಅನುಭಸುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

Advertisement

ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್‌. ಬಿ. ಮಹದೇವು ಸೇರಿದಂತೆ 43 ಪಂಚಾಯಿತಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next