Advertisement

ವಿಮಾನ ನಿಲಾಣ ಕಾಮಗಾರಿಗೆ ಅನುದಾನ

09:42 AM Nov 24, 2017 | |

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಬರುವ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹೆಚ್ಚುವರಿ ಕಾಮಗಾರಿಗಳಿಗೆ ಎಚ್‌.ಕೆ.ಆರ್‌.ಡಿ.ಬಿ.ನೀಡುವ ಅನುದಾನ ಬಳಕೆ ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಹಾಗೂ ಎಚ್‌.ಕೆ.ಆರ್‌.ಡಿ.ಬಿ.ಕಾರ್ಯದರ್ಶಿ ಹರ್ಷ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಷ್ಕೃತ 167 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಅನುಗುಣವಾಗಿ ಎಚ್‌.
ಕೆ.ಆರ್‌.ಡಿ.ಬಿ. ಪಾಲು ಅಂದಾಜು 55 ಕೋಟಿ ರೂ. ನೀಡಬೇಕಾಗುತ್ತದೆ. ಈಗಾಗಲೇ 35 ಕೋಟಿ ರೂ. ನೀಡಲಾಗಿದೆ. ಇನ್ನುಳಿದ 20ಕೋಟಿ ರೂ.ಗಳನ್ನು ತಕ್ಷಣ ನೀಡಲಾಗುವುದು ಎಂದರು. 

ರನ್‌ ವೇ ಕೊನೆಯಲ್ಲಿ 8.9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗುತ್ತಿರುವ 270 ಮೀಟರ್‌ ರೈಸಾ ಕಾಮಗಾರಿ, ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ 9.7 ಕೋಟಿ ರೂ. ವೆಚ್ಚದ ಎಚ್‌.ಟಿ.ಲೈನ್‌ ವಿದ್ಯುತ್‌ ಕಾಮಗಾರಿ ಹಾಗೂ 4.5 ಕೋಟಿ ರೂ.ಗಳ ನೀರು ಸರಬರಾಜು ಕಾಮಗಾರಿಗಳು ಹೆಚ್ಚುವರಿಯಾಗಿ ಕೈಗೊಳ್ಳಬೇಕಾಗಿದೆ. ಈ ಕಾಮಗಾರಿಗಳಿಗೆ ಎಚ್‌. ಕೆ.ಆರ್‌.ಡಿ.ಬಿ. ಪಾಲಿನ ಹಣದಲ್ಲಿ ಅಲ್ಪಾವಧಿ ಟೆಂಡರ್‌ ಕರೆದು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಮಾತನಾಡಿ, ಮೂಲಸೌಕರ್ಯಾಭಿವೃದ್ಧಿ ಇಲಾಖೆಯಿಂದ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ನಾಗಾರ್ಜುನ ಕನ್ಸ್‌ಟ್ರಕ್ಷನ್‌ ಅವರಿಗೆ 2.1 ಕೋಟಿ ರೂ.ಗಳ ಬಾಕಿ ಬಿಲ್ಲು ಹಾಗೂ ಸಾಧನ ಸಲಕರಣೆಗಳನ್ನು ಕ್ರೋಢಿಕರಿಸಲು 1.47
ಕೋಟಿ ರೂ.ಗಳನ್ನು ನೀಡಬೇಕಾಗಿದೆ. ಈ ಹಣವನ್ನು ತಕ್ಷಣ ನೀಡಲಾಗುವುದು. 

ಪ್ರತಿ ತಿಂಗಳು ಕಾಮಗಾರಿಗೆ ಅವಶ್ಯಕವಿರುವ ಅನುದಾನ ಬಿಡುಗಡೆ ಮಾಡಲು ಮೂಲಸೌಕರ್ಯಾಭಿವೃದ್ಧಿ ಇಲಾಖೆಗೆ
ತಿಳಿಸಲಾಗಿದೆ. ಗುತ್ತಿಗೆದಾರರು ಪ್ರತಿ ತಿಂಗಳು ಕೈಗೊಳ್ಳುವ ಕಾಮಗಾರಿಯ ಬಿಲ್ಲನ್ನು ಸಲ್ಲಿಸಿದಲ್ಲಿ ತಕ್ಷಣ ಪಾವತಿಸಲಾಗುವುದು. ಹಣದ ಯಾವುದೇ ಕೊರತೆ ಇಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.

Advertisement

ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅಜಿಜುದ್ದೀನ್‌ ಮಾತನಾಡಿ, ಈಗಾಗಲೇ 3.27 ಕಿ.ಮಿ. ಉದ್ದದ ರನ್‌ ವೆ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಮುಂದಿನ 45 ದಿನಗಳಲ್ಲಿ ಅಂತಿಮ ಬಿಟುಮಿನಸ್‌ ಲೇಯರ್‌ ಹಾಕಲಾಗುವುದು. 15.91 ಕೋಟಿ ರೂ.ಗಳ ಮೂರನೇ ಪ್ಯಾಕೇಜ್‌ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. ಇದರಲ್ಲಿರುವ ಸಾಧನ ಸಲಕರಣೆಗಳನ್ನು ಸರಬರಾಜು ಮಾಡುವ ಸೂಕ್ತ ಗುತ್ತಿಗೆದಾರರು ಸಿಗದ ಕಾರಣ ಅಲ್ಪಾವಧಿ ಮರು ಟೆಂಡರ್‌ ಕರೆದು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಸಹಾಯಕ ಆಯುಕ್ತ ರಾಚಪ್ಪ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಸಭೆ 
ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮೂಲ ಸೌಕರ್ಯಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಂದೀಪ ದವೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ರೈಟ್ಸ್‌ ಅವರೊಂದಿಗೆ ಎಂ.ಒ.ಯು. ಮಾಡಿಕೊಳ್ಳಲಾಗುವುದು. ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ಎಲ್ಲ ಕಟ್ಟಡಗಳ ಹಾಗೂ ಅವಶ್ಯಕ ಉಪಕರಣಗಳ ಮಾಹಿತಿ ಮತ್ತು ನೀಲ ನಕ್ಷೆ ಪಡೆದುಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಅಗ್ನಿಶಾಮಕ ದಳದ ವ್ಯವಸ್ಥೆಯ ಮಾಹಿತಿ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. 
 ಹರ್ಷ ಗುಪ್ತಾ, ಪ್ರಾದೇಶಿಕ ಆಯುಕ

Advertisement

Udayavani is now on Telegram. Click here to join our channel and stay updated with the latest news.

Next