Advertisement

ಫಲಾನುಭವಿಗಳಿಗೆ ಅನುದಾನ ತಲುಪಿಸಿ

02:38 PM Jul 18, 2017 | Girisha |

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯ ಸರ್ಕಾರದ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ರಾಜ್ಯ
ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು 2017-18ನೇ ಸಾಲಿನ ಜೂನ್‌-2017ರ ತಿಂಗಳ ಅಂತ್ಯದವರೆಗೆ ಸಾಧಿ ಸಿದ ಪ್ರಗತಿ ವರದಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಜಾನೆ-2 ಆರಂಭವಾದಾಗಿನಿಂದ ಸರ್ಕಾರದಅನುದಾನ ನೇರವಾಗಿ ತಾಲೂಕು ಪಂಚಾಯತ್‌ಗಳಿಗೆ ಬರುತ್ತದೆ. ಹೀಗಾಗಿ ತಾಪಂ ಇಒಗಳು ಅನುದಾನದ ಸರಿಯಾದ ಬಳಕೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಕಾಲಮಿತಿಯಲ್ಲಿ
ಅರ್ಹರಿಗೆ ಯೋಜನೆಯ ಲಾಭ ತಲುಪಿಸಿ ಎಂದು ಹೇಳಿದರು.

ಬೇಜವಾಬ್ದಾರಿಯಿಂದ ತಪ್ಪು ಮಾಹಿತಿ ಸಂಗ್ರಹಿಸುವುದು ಅಥವಾ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ, ಪ್ರತಿ ತಿಂಗಳು ಸಿಇಒ ಎಸ್‌ಸಿಪಿ-ಟಿಎಸ್‌ಪಿ ಕಾರ್ಯಕ್ರಮ ಪರಿಶೀಲಿಸುತ್ತಾರೆ. ಅಧಿಕಾರಿಗಳು ನಿಗದಪಡಿಸಿದ ಗುರಿ ತಲುಪಲು ಪ್ರಯತ್ನಿಸಿ ವೈಯಕ್ತಿಕ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಹಣಕಾಸು ವ್ಯವಹಾರ ಆಗಿರುವ ಕಾರಣ ಪ್ರತಿ ಇಲಾಖೆ ಹಣಕಾಸು ಸಂಬಂ ಧಿತ ವ್ಯವಹಾರಗಳ ಕುರಿತು ಅಕೌಂಟ್‌ ರಜಿಸ್ಟರ್‌ ಅನ್ನು ಕ್ರಮಾನುಸಾರ ನಿರ್ವಹಿಸಬೇಕು. ಯೋಜನೆ ಕುರಿತು ಮಾಹಿತಿ ಸಲ್ಲಿಸಬೇಕು ಎಂದರು.

ವಾರ್ಷಿಕ ಪೂರ್ಣ ಗುರಿ ಸಾಧನೆ ಮಾಡಿದ ಇಲಾಖೆಗಳು, ಭವಿಷ್ಯದಲ್ಲೂ ಶ್ರಮವಹಿಸಿ ಕೆಲಸ ಮಾಡಿ ಕಡ್ಡಾಯವಾಗಿ ನಿಗದಿತ ಗುರಿ ಸಾಧನೆ ಮಾಡಲೇಬೇಕು. ಇಲ್ಲದಿದ್ದರೆ ಬೇಜವಾಬ್ದಾರಿ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಯೋಜನೆಗಳು, ನೀರಾವರಿ ಸೌಲಭ್ಯಗಳು, ವಿವಿಧ ಅಭಿವೃದ್ಧಿ ನಿಗಮಗಳು, ಮೀನುಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಹೆಸ್ಕಾಂ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿಗದಿತ ಗುರಿ ಸಾಧಿ ಸಬೇಕೆಂದು ಹೇಳಿದರು. ಸಭೆಯಲ್ಲಿ ಜಿಪಂ ಸಿಇಒ ಎಂ.ಸುಂದರೇಶಬಾಬು, ಪಾಲಿಕೆ ಆಯುಕ್ತ ಹರ್ಷಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next