Advertisement

Grant Relese: ಕುಂದಾಪ್ರ ಕನ್ನಡ ಆಧ್ಯಯನ ಪೀಠ; ಸಮಗ್ರ ಕಾರ್ಯಾರಂಭಕ್ಕೆ ಮುಹೂರ್ತ

12:07 AM Jul 29, 2024 | Team Udayavani |

ಕೋಟ: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಕುಂದಾಪ್ರ ಕನ್ನಡದ ಸಮಗ್ರ ದಾಖಲೀಕರಣ, ಅಧ್ಯಯನ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ಘೋಷಿಸಿರುವ ಬೆನ್ನಲ್ಲೇ ಕೊನೆಗೂ ಪೀಠ ಸಮಗ್ರವಾಗಿ ಕಾರ್ಯಾರಂಭ ಮಾಡಲು ಮುಹೂರ್ತ ಕೂಡಿ ಬಂದಿದೆ.

Advertisement

ಕುಂದಾಪ್ರ ಕನ್ನಡ ದಿನಾಚರಣೆ ಆರಂಭವಾದ ದಿನದಿಂದ ಕುಂದ ಗನ್ನಡ ಅಧ್ಯಯನ ಪೀಠಕ್ಕೆ ಬೇಡಿಕೆ ಬಲಗೊಂಡಿತ್ತು. ವಿವಿಧ ಸಂಘಟನೆಗಳು, ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರೂ ಇದಕ್ಕೆ ಧ್ವನಿಗೂಡಿಸಿದ್ದರು. ಸಾಕಷ್ಟು ಹೋರಾಟದ ಬಳಿಕ ಈಗ ಸರಕಾರದ ಅನುದಾನ ಕೈ ಸೇರಿದೆ.

ಸಂಘ ಸಂಸ್ಥೆಗಳಿಗೆ ಬೈಲಾ ರಚಿಸುವಂತೆ ಅಧ್ಯಯನ ಪೀಠದ ಸಂರಚನೆ ಕುರಿತು ನೀತಿ ನಿಯಮಾವಳಿ ನಿರೂಪಣೆ, ಪೀಠದ ಸಂಯೋಜಕರ ನೇಮಕ, ಆಡಳಿತ ಮಂಡಳಿ ರಚನೆ, ಸದಸ್ಯರ ನೇಮಕ ಎಲ್ಲವೂ ಆದ್ಯತೆ ಮೇಲೆ ನೇಮಕವಾಗಬೇಕಿದೆ.
ಬಳಿಕ ಪೀಠದ ಧ್ಯೇಯೋ ದ್ದೇಶಗಳಾದ ಭಾಷೆ ಹಾಗೂ ಪದಗಳ ಅಧ್ಯಯನ, ಕುಂದಗನ್ನಡ ಪ್ರದೇಶದ ಸಂಸ್ಕೃತಿ, ಆಚರಣೆ, ಇತಿಹಾಸದ ದಾಖಲೀಕರಣ, ಭಾಷೆಯ ಬೆಳವಣಿಗೆಗೆ ಪೂರಕ ವಾದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಿದೆ.

ವಿಸ್ತರಣೆಗೆ ಅವಕಾಶ
ಪೀಠದ ಕಾರ್ಯಚಟುವಟಿಕೆಗಾಗಿ 2 ಕೋಟಿ ರೂ ಅನುದಾನವನ್ನು ಸರಕಾರದಿಂದ ಕೋರಲಾಗಿದ್ದು, 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಎಲ್ಲ ಚಟುವಟಿಕೆ ಕೈಗೊಳ್ಳುವುದು ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಈ ಮೊತ್ತದಲ್ಲಿ ಒಂದಿಷ್ಟು ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡರೆ, ಕ್ರಮೇಣ ಸರಕಾರದಿಂದ ಇನ್ನಷ್ಟು ಅನುದಾನ ಪಡೆಯಲು ಸಾಧ್ಯ ಎಂಬುದು ಪರಿಣಿತರ ಅಭಿಪ್ರಾಯ.

ಅಧ್ಯಯನ ಪೀಠ ಘೋಷಣೆ ಯಾಗಿ ಎರಡು ವರ್ಷ ಕಳೆದಿದೆ. ಸರಕಾರಗಳ ಬದಲಾವಣೆ, ಚುನಾ ವಣೆ ಘೋಷಣೆ ಮೊದಲಾದ ಕಾರಣಗಳಿಂದ ಚಟುವಟಿಕೆ ಆರಂಭ ವಿಳಂಬವಾಗಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಪೀಠದ ಚಟುವಟಿಕೆಗಳ ಆರಂಭವಾಗಬೇಕು ಎಂಬುದು ಹಲವರ ಆಗ್ರಹ.

Advertisement

ಹಂತಹಂತವಾಗಿ ಕಾರ್ಯನಿರ್ವಹಣೆ
“ಅಧ್ಯಯನ ಪೀಠಕ್ಕೆ ಪ್ರಸ್ತುತ ಅನುದಾನ ದೊರೆತಿದೆ. ಮುಂದೆ ಪೀಠದ ಸಂರಚನೆ, ಸಂಯೋಜಕರ ನೇಮಕ, ಸದಸ್ಯರ ನೇಮಕ ಪ್ರಕ್ರಿಯೆಗಳೆಲ್ಲವೂ ಸರಕಾರದ ಮಾರ್ಗದರ್ಶನದಂತೆ ನಡೆಯಬೇಕಿದೆ. ಅನಂತರ ಒಂದಷ್ಟು ಕಾರ್ಯ ಚಟುವಟಿಕೆಯನ್ನು ಹಾಕಿಕೊಳ್ಳಲಾಗುವುದು.”  – ಕೆ. ರಾಜು ಮೊಗವೀರ, ರಿಜಿಸ್ಟ್ರಾರ್‌, ಮಂಗಳೂರು ವಿ.ವಿ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next