Advertisement

ಶೇ.25 ಅನುದಾನ ಇತರೆ ಸೌಲಭ್ಯಕ್ಕೂ ಬಳಸಿ

12:09 PM Jul 31, 2018 | Team Udayavani |

ಸಕಲೇಶಪುರ/ಆಲೂರು: ಅಧಿಕಾರಿಗಳು ಯೋಜನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ತಲುಪಿಸಬೇಕೆಂದು ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಸಲಹೆ ನೀಡಿದರು.

Advertisement

ಆಲೂರು ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ, ಪಂಗಡ ಹಿತರಕ್ಷಣಾ ಸಮಿತಿ ತ್ತೈಮಾಸಿಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇ.25ರ ಅನುದಾನವನ್ನು ಕೇವಲ ಸೀಮಿತ ಕೆಲಸಗಳಿಗೆ ಮಾತ್ರ ವಿನಿಯೋಗಿಸದೇ, ಗ್ರಾಮೀಣ ಪ್ರದೇಶ ಗಳಲ್ಲಿರುವ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು ಉನ್ನತ ಶಿಕ್ಷಣ ಪಡೆಯವವರಿಗೆ, ಕ್ರೀಡಾಪಟುಗಳಿಗೆ ಬಳಸ ಬೇಕು. ಜೊತೆಗೆ ಶವ ಸಂಸ್ಕಾರಕ್ಕೆ ಕಂದಾಯ ಇಲಾಖೆ, ಗ್ರಾಪಂನಲ್ಲಿ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸಿಗದ ಕಾರಣ, ಬಯೋಮೆಟ್ರಿಕ್‌ ಪಡೆಯಲು ವಿನಾಯ್ತಿ ನೀಡಿ ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು. ಅಕ್ರಮ ಮದ್ಯ ಮಾರಾಟ, ಪೂರೈಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪಿಡಿಒಗಳು ಶೇ.100 ಕಂದಾಯ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ.ಸದಸ್ಯರಿಗೆ ಅಂಬೇಡ್ಕರ್‌ ಯೋಜನಯಡಿಯಲ್ಲಿ ಜನತಾ ಮನೆ ಕೊಡಲು ಪ್ರಥಮ ಪ್ರಾಶಸ್ತ ನೀಡಬೇಕು. ಹಾವು ಕಚ್ಚಿ ಮೃತ ಪಟವರಿಗೆ ಸಹಾಯಧನ ನೀಡಬೇಕು, ಶವ ಸಂಸ್ಕಾರಕ್ಕೆ ಹಲವು ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ, ಕೊಡಗಿಹಳ್ಳಿ ಗ್ರಾಮದಲ್ಲಿರುವ ದಲಿತರು ಸುಮಾರು ಒಂದು ಕಿ.ಮೀ. ದೂರದಿಂದ ಮನೆ ಬಳಕೆಗೆ ನೀರನ್ನು ತರುತ್ತಿದ್ದಾರೆ ಎಂದು ದಲಿತ ಮುಖಂಡ ಬಸವರಾಜು ಆರೋಪ ಮಾಡಿದರು.

ಮಡಬಲು ಗ್ರಾ.ಪಂ.ಗೆ ಒಳಪಡುವ ಮೇಕರವಳ್ಳಿ ಗ್ರಾಮದಲ್ಲಿ ವಿದ್ಯುತ್‌ ಸಂಪರ್ಕ ಹಲವು ದಿನಗಳಿಂದ ಕಡಿದು ಹೋಗಿದೆ. ಕಡದರವಳ್ಳಿ ಗ್ರಾಮದಲ್ಲಿ ಜೆಸಿಬಿ ಬಳಸಿ ಶೌಚಾಲಯ ಗುಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆ ಬಂದು ನೀರು ತುಂಬಿದೆ. ಮುಂದುವರಿದ ಕಾಮಗಾರಿಯಾಗಿಲ್ಲ. ಸಂಬಂಧಿಸಿದ ಬಿಲ್‌ ತಡೆಹಿಡಿಯಬೇಕು ಎಂದು ಜಿ.ಪಂ.ಸದಸ್ಯ ಲೋಕೇಶ್‌ ಹೇಳಿದರು.

Advertisement

ವರದಿ ಪಡೆಯಲಾಗಿದೆ: ತಾಲೂಕಾದ್ಯಂತ ಮಂಜೂ ರಾಗಿರುವ ಶೌಚಾಲಯಗಳ ಬಗ್ಗೆ ವರದಿ ಪಡೆಯಲಾಗಿದೆ. ಹಲವು ಫ‌ಲಾನುಭಗಳಿಗೆ ಮಂಜೂರಾಗಿರುವ ಮನೆ ಈವರೆಗೂ ನಿರ್ಮಾಣ ಮಾಡಿಲ್ಲ. ಅಂತಹವರು ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ತಾಪಂ ಇಒ ಚಂದ್ರಶೇಖರ್‌ ಮಾಹಿತಿ ನೀಡಿದರು.

ಹೊಸ ಪಡಿತರ ಕಾರ್ಡು ಪಡೆಯಲು ಫ‌ಲಾನು ಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮನೆಗೆ ಪಡಿತರ ಚೀಟಿ ತಲುಪಿಸಲಾಗುವುದು ಎಂದು ಆಹಾರ ನಿರೀಕ್ಷಕಿ ಬಿ.ಸಿ.ಚಂದ್ರಿಕಾ ತಿಳಿಸಿದರು.

ಟ್ಯಾಂಕರ್‌ ಖರೀದಿಗೆ ಅರ್ಜಿ: ನರೇಗಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಫ‌ಲಾನುಭವಿಗಳಿಗೆ ಅರ್ಜಿ ವಿತರಣೆಯನ್ನು ಈ ಕ್ಷಣದಿಂದಲೇ ಆರಂಭಿಸಲಾಗಿದೆ. ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. 2018-19ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ನೀರಿನ ಟ್ಯಾಂಕರ್‌ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್‌ ತಿಳಿಸಿದರು.

ಕೃಷಿ ಹೊಂಡ: ಫ‌ಲಾನುಭವಿಗಳು ಸೂಚಿಸಿದ ಜಾಗದಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗು ವುದು ಎಂದು ಕೃಷಿ ಇಲಾಖೆ ಸಹಾಯಕ ನಿದೇಶಕಿ ಶೈಲಜಾ ತಿಳಿಸಿದರು.

ಸಮರ್ಪಕವಾಗಿ ಬಳಸಿಕೊಳ್ಳಿ: ಸರಕಾರಿ ಇಲಾಖೆಗಳಿಂದ ಪರಿಶಿಷ್ಟ ಜಾತಿ, ಪಂಗಡದವರಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ದಲಿತ ಮುಖಂಡ ದೇವರಾಜು ಮನವಿ ಮಾಡಿಕೊಂಡರು. ಸಭೆಯಲ್ಲಿ ತಹಶೀಲ್ದಾರ್‌ ಡಾ. ಎನ್‌.ಕೆ.ಶಾರ ದಾಂಬ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನಕುಮಾರ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ವಿನಯ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next