Advertisement

ಮಗ-ಸೊಸೆಯ ಮಗುವಿಗೆ ಬಾಡಿಗೆ ತಾಯಿಯಾದ 56 ವರ್ಷದ ಮಹಿಳೆ!

07:48 PM Nov 05, 2022 | Team Udayavani |

ನ್ಯೂಯಾರ್ಕ್: ಆಕೆಯ ವಯಸ್ಸು 56. ಮೊಮ್ಮಕ್ಕಳೊಂದಿಗೆ ಆಡುವ ವಯಸ್ಸು. ಆದರೆ ಆಕೆ ತನ್ನ ಮಗ – ಸೊಸೆಯ ಮಗುವಿಗೆ ಜನ್ಮ ನೀಡಿದ್ದಾರೆ.!

Advertisement

ಓದಲು ಅಶ್ಚರ್ಯವೆನ್ನಿಸಿದರೂ ಇದು ಅಮೆರಿಕಾದ ಉತಾಹ್ ಪ್ರದೇಶದಲ್ಲಿ ನಡೆದ ನೈಜ ಘಟನೆ. ಜೆಫ್ ಹಾಕ್ ಹಾಗೂ ಕ್ಯಾಂಬ್ರಿಯಾ ಇಬ್ಬರದು ಕಾಲೇಜಿನಲ್ಲಿ ಮೂಡಿದ ಪ್ರೇಮ ಡಿಸೆಂಬರ್‌ 2012 ರಂದು ಕುಟುಂಬದ ಸಮ್ಮುಖದಲ್ಲಿ ಇಬ್ಬರೂ ಮದುವೆಯಾಗುತ್ತಾರೆ. ವರ್ಷದ ಬಳಿಕ ಅವರಿಬ್ಬರೂ ಸಂತಸದ ಸುದ್ದಿಗಾಗಿ ಕಾಯುತ್ತಿದ್ದರು. ಆದರೆ ಆ ಕುಟುಂಬಕ್ಕೆ ಸಂತಸದ ಸುದ್ದಿ ಕೇಳಲು ಆಗಲಿಲ್ಲ. ಕಾರಣ ಕ್ಯಾಂಬ್ರಿಯಾ ಅವರಿಗೆ ಮಗುವಾಗುವುದಿಲ್ಲ. ಆಕೆ ನಾನಾ ವೈದ್ಯಕೀಯ ಪರೀಕ್ಷೆ ಮಾಡಿದ ಬಳಿಕ ಆಕೆಗೆ ಮಗುವಾಗುವುದಿಲ್ಲ ಎಂದು ವೈದ್ಯಕೀಯ ವರದಿ ಬಂದಿತ್ತು.

ಕ್ಯಾಂಬ್ರಿಯಾ ನಾಲ್ಕು ವರ್ಷಗಳ ಕಾಲ ಐವಿಎಫ್  (ಪ್ರನಾಳೀಯ ಫಲೀಕರಣ) ಚಿಕಿತ್ಸೆ ಪಡೆದ ಬಳಿಕ ಎರಡು ಅವಳಿ ಜವಳಿ ಮಕ್ಕಳನ್ನು ಪಡೆಯುತ್ತಾರೆ ( ಐವಿಎಫ್ ಎಂದರೆ: ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಗರ್ಭಧಾರಣೆ ಮಾಡವ ವಿಧಾನ. ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ )

ಜೆಫ್ ಹಾಕ್ ಹಾಗೂ ಕ್ಯಾಂಬ್ರಿಯಾ ದಂಪತಿಗೆ ಎರಡನೇ ಸಲವೂ ( ಕಳೆದ ವರ್ಷ) ಐವಿಎಫ್ ಮೂಲಕ ಅವಳಿ – ಜವಳಿ ಮಕ್ಕಳೇ ಆಗುತ್ತದೆ.

ಅವಳಿ ಮಕ್ಕಳು ಜನಿಸಿದ ಬಳಿಕ ಕ್ಯಾಂಬ್ರಿಯಾ ಅವರಿಗೆ ತೀವ್ರವಾದ ನೋವು ,ರಕ್ತಸ್ರಾವವಾಗುತ್ತದೆ, ವೈದ್ಯರು ಪರೀಕ್ಷಿಸಿದ ಬಳಿಕ ಕ್ಯಾಂಬ್ರಿಯಾ ಅವರಿಗೆ ಗರ್ಭಕಂಠ ಸಮಸ್ಯೆ  ( ಗರ್ಭಕೋಶದ ಕಂಠದ ಭಾಗದಲ್ಲಿ ಈ ಕ್ಯಾನ್ಸರ್‌ ಬೆಳೆಯುವ ಕ್ಯಾನ್ಸರ್)‌ ( Hysterectomy) ಇರುವುದು ಗೊತ್ತಾಗುತ್ತದೆ. ತಕ್ಷಣ ಆಪರೇಷನ್‌ ಮಾಡಿ ಗರ್ಭಾಶಯದ ಆ ಭಾಗವನ್ನು ತೆಗೆದು ಹಾಕುತ್ತಾರೆ.

Advertisement

ತಮ್ಮ ಕುಟುಂಬದ ಸಂಖ್ಯೆಯನ್ನು ಹೆಚ್ಚಿಸಬೇಕೆನ್ನುವ ಆಸೆಯನ್ನು ಹೊಂದಿದ್ದ ಕ್ಯಾಂಬ್ರಿಯಾ ದಂಪತಿಗೆ ಅದು ಸಾಧ್ಯವಾಗದಿದ್ದಾಗ. ಮಗನ ಹಾಗೂ ಸೊಸೆಯ ಬಳಿ ಅತ್ತೆ ನ್ಯಾನ್ಸಿ ಹಾಕ್ ಬಾಡಿಗೆ ತಾಯಿಯಾಗಿ ನಿಮ್ಮ ಮಗುವಿಗೆ ಜನ್ಮ ನೀಡುತ್ತೇನೆ ಎನ್ನುತ್ತಾರೆ.

ಅಮ್ಮನ ಮಾತನ್ನು ಕೇಳಿದ ಮಗನಿಗೆ ಒಂದು ಘಳಿಗೆ ಅಚ್ಚರಿಯಾಗುತ್ತದೆ. ಬಳಿಕ ತನ್ನ ಹೆಂಡತಿಯೊಂದಿಗೆ ಈ ಬಗ್ಗೆ ಚರ್ಚಿಸಿ ವೈದ್ಯರ ಬಳಿ ಹೇಳುವಾಗ, ವೈದ್ಯರು ಮಹಿಳೆ ಆರೋಗ್ಯವಾಗಿದ್ದಾರೆ ಖಂಡಿತ ಇದು ಸಾಧ್ಯವೆನ್ನುತ್ತಾರೆ.

ಇದಾದ ಬಳಿಕ ನ್ಯಾನ್ಸಿ ಹಾಕ್ ಬಾಡಿಗೆ ತಾಯಿಯಾಗಿ ತನ್ನ ಮಗ – ಸೊಸೆಯ ಮಗುವನ್ನು ಹೊತ್ತು ಒಂಬತ್ತು ತಿಂಗಳು ಕಾಲ ಕಳೆಯುತ್ತಾರೆ. ಇತ್ತೀಚೆಗೆ ನವೆಂಬರ್‌ 2 ( ಬುಧವಾರ) ರಂದು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ.

ದಂಪತಿಗಳ ಮುಖದಲ್ಲಿ ಮತ್ತೆ ನಗು ತಂದದಕ್ಕಾಗಿ ಅಜ್ಜಿಗೆ ಗೌರವ ಕೊಡುವುದಕ್ಕೆ ಮಗುವಿಗೆ “ಹನ್ನಾ” ಎಂದು ಹೆಸರಿಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next