ಮಣಿಪಾಲ: ಕುಷ್ಠ ರೋಗಿಗಳಿಗಾಗಿ ಜೀವನವನ್ನೇ ಮುಡಿಪಾಗಿರಿಸಿದ ಸಾಮಾಜಿಕ ಕಾರ್ಯಕರ್ತ ಡಿ.ಬಾಬಾ ಅಮ್ಟೆ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಷ್ಠರೋಗಿಗಳಿಗಾಗಿ ಆನಂದವನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ. ಬಾಬಾ ಅಮ್ಟೆ ಅವರ ಮೊಮ್ಮಗಳು ಡಾ.ಶೀತಲ್ ಅಮ್ಟೆ ಸೋಮವಾರ ಚಂದ್ರಪುರದ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ದೇಹಕ್ಕೆ ವಿಷದ ಇಂಜೆಕ್ಷನ್ ಅನ್ನು ಚುಚ್ಚಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಅವರು ಆಮ್ಟೆ ಸಮಿತಿಯಲ್ಲಿನ ಹಗರಣ ಬಗ್ಗೆ ಮಾತನಾಡಿದ್ದರು.
ಡಾ.ಶೀತಲ್ ಅಮ್ಟೆ ಅವರು ಎಂಪ್ರೆಸ್ ಸೇವಾ ಸಮಿತಿಯ ಸಿಇಒ ಆಗಿದ್ದರು. ಹಲವಾರು ವರ್ಷಗಳಿಂದ ಪತಿ ಮತ್ತು ಕುಟುಂಬದೊಂದಿಗೆ ಕುಷ್ಠರೋಗಿಗಳ ಸೇವೆ ಮಾಡುತ್ತಾ ಬಂದಿದ್ದಾರೆ. ಆದರೆ ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮೊದಲು, ಶೀತಲ್ ಸೋಷಿಯಲ್ ಮೀಡಿಯಾದಲ್ಲಿ ಒಂದು ವರ್ಣಚಿತ್ರವನ್ನು ಹಂಚಿಕೊಂಡಿದ್ದು “ಯುದ್ಧ ಮತ್ತು ಶಾಂತಿʼ ಎಂದು ಬರೆದಿದ್ದರು.
Related Articles
ಬಾಬಾ ಅಮ್ಟೆ ಅವರ ಕುಟುಂಬವು 72 ವರ್ಷಗಳಿಂದ ಚಂದ್ರಪುರ ಜಿಲ್ಲೆಯ ವರೋರಾ ತಹಸಿಲ್‌ನ ಆನಂದವನ್‌ನಲ್ಲಿ ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಆನಂದವನ್‌ನಲ್ಲಿ ನಡೆದ ಆರ್ಥಿಕ ಹಗರಣಗಳ ಬಗ್ಗೆ ಶೀತಲ್ ಫೇಸ್‌ಬುಕ್‌ನಲ್ಲಿ ಲೈವ್ ಚರ್ಚೆ ನಡೆಸಿದ್ದರು. ಇದು ವಿವಾದದ ಸ್ವರೂಪ ಪಡೆದ ಬಳಿಕ ಶೀತಲ್ ಅವರು ಫೇಸ್‌ಬುಕ್‌ನಿಂದ ವೀಡಿಯೋ ಪೋಸ್ಟ್ ಅನ್ನು ಅಳಿಸಿದ್ದಾರೆ. ಅಮ್ಟೆ ಕುಟುಂಬವು ಶೀತಲ್ ಅವರನ್ನು ಬಹಿರಂಗವಾಗಿ ವಿರೋಧಿಸಿತ್ತು. ಯಾರೂ ಶೀತಲ್ ಅವರಿಗೆ ತಪ್ಪು ಮಾಹಿತಿ ನೀಡಿತ್ತು ಎಂದು ಕುಟುಂಬ ಹೇಳಿಕೆ ನೀಡಿತ್ತು.