ಕೊಲ್ಲಾಪುರ: ಮುಂಬಯಿ, ಪುಣೆ, ಹಿಂಜೇವಾಡಿಯಂತೆ ಕೊಲ್ಲಾಪುರದಲ್ಲಿಯೂ 100 ಎಕ್ರೆ ಜಮೀನಿನಲ್ಲಿ ಭವ್ಯವಾದ ಐಟಿಪಾರ್ಕ್ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಹೇಳಿದ್ದಾರೆ.
ಕೆನ್ವಾಡೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಅನ್ನಪೂರ್ಣ ಸಕ್ಕರೆ ಮತ್ತು ಬೆಲ್ಲ ವರ್ಕ್ಸ್ ಲಿಮಿಟೆಡ್ ರಾಸಾಯನಿಕ ಮುಕ್ತ ಸಕ್ಕರೆ ಮತ್ತು ಬೆಲ್ಲ ಪುಡಿ ಕಾರ್ಖಾನೆಯನ್ನು ಸುಭಾಷ್ ದೇಸಾಯಿ ಉದ್ಘಾಟಿಸಿ ಮಾತನಾಡಿದರು.
ಮಹಾವಿಕಾಸ್ ಅಘಾಡಿ ಸರಕಾರವು ಹೂಡಿಕೆ ಮಾಡುವಂತಹ ಕೈಗಾರಿಕೆಗಳಿಗೆ ಖಂಡಿತವಾಗಿಯೂ ಆದ್ಯತೆ ನೀಡುತ್ತಿದೆ. ಉತ್ತಮ ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ಉದ್ಯಮಿಗಳು ಮಹಾರಾಷ್ಟ್ರದ ಕಡೆಗೆ ತಮ್ಮಒಲವು ತೋರುತ್ತಿದ್ದಾರೆ. ಇದರಿಂದ ರಾಜ್ಯದಆದಾಯವನ್ನು ಹೆಚ್ಚಿಸುವುದು, ರಾಜ್ಯದಲ್ಲಿಯ ಲಕ್ಷಾಂತರ ಯುವಜನರಿಗೆ ಉದ್ಯೋಗದೊರೆತಿರುವುದಕ್ಕಿಂತ ಹೆಚ್ಚು ಸಂತೋಷವಾಗುತ್ತಿದೆ ಎಂದು ಸಚಿವ ಸುಭಾಷ್ ದೇಸಾಯಿ ಹೇಳಿದ್ದಾರೆ.
ಅಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲಿಹೂಡಿಕೆ ಮಾಡಲಾಗುತ್ತಿದೆ.ಸಾಕಷ್ಟು ಹೂಡಿಕೆ ಸಿಗುತ್ತಿದೆ. ಹಲವಾರು ಕೈಗಾರಿಕೆ ಉದ್ಯಮಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ವಿಶೇಷ ಐಟಿಪಾರ್ಕ್ ಬಗ್ಗೆ ಉದ್ಯಮಿಗಳು ಉತ್ಸುಕರಾಗಿದ್ದಾರೆ. ಇಲ್ಲಿನ ನೂರು ಎಕ್ರೆ ಜಮೀನಿನಲ್ಲಿ ಉದ್ಯಮಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳಸಭೆಯೂ ನಡೆಯಲಿದೆ. ರಾಜ್ಯ ಸರಕಾರದ ಕೈಗಾರಿಕಾ ನೀತಿಯಿಂದ ಅನ್ನಪೂರ್ಣ ಸಕ್ಕರೆಕಾರ್ಖಾನೆಗೆ ನೆರವಾಗಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಕಾರ್ಖಾನೆಯ ಅಧ್ಯಕ್ಷ, ಮಾಜಿ ಶಾಸಕ ಸಂಜಯ್ ಸಿಂಗ್ ಜಯಸಿಂಗ್ ಘಾಟ್ಗೆ ತಮ್ಮ ಪರಿಚಯಾತ್ಮಕ ಭಾಷಣದಲ್ಲಿ 25 ವರ್ಷಗಳ ಹೋರಾಟದ ಬಳಿಕ ಕಾರ್ಖಾನೆ ಅಸ್ತಿತ್ವಕ್ಕೆ ಬಂದಿದೆ. ಇದರ ಪರಿಣಾಮವಾಗಿ ಈ ಪ್ರದೇಶದ ಕಬ್ಬು ಬೆಳೆಗಾರ ರೈತರಿಗೆ ಹಕ್ಕಿನ ಕಾರ್ಖಾನೆ ದೊರೆತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪರಿಷತ್ ಸದಸ್ಯ ಅಂಬರೀಶ್ ಸಿಂಗ್ ಘಾಟ್ಗೆ ಸ್ವಾಗತಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್, ಶಾಸಕ ಪಿ. ಎನ್. ಪಾಟೀಲ್, ಸಂಸದ ಸಂಜಯ್ ಮಾಂಡ್ಲಿಕ್, ಶಾಸಕ ಪ್ರಕಾಶ್ ಅಬಿಟ್ಕರ್, ಶಿವಸೇನೆ ಸಂಪರ್ಕ ಮುಖ್ಯಸ್ಥ ಅರುಣ್‌ದುಧ್ವಾಡ್ಕರ್, ಜಿಲ್ಲಾ ಮುಖ್ಯಸ್ಥ ವಿಜಯ್ ದೇವ್ನೆ, ಮಾಜಿ ಶಾಸಕ ಸುರೇಶ್ ಹಲ್ವಾಂಕರ್, ಅರುಣ್ ಇಂಗ್ವಾಲೆ ಮತ್ತಿತರರು ಉಪಸ್ಥಿತರಿದ್ದರು.