Advertisement

ಬಾಕಿ ವೇತನಕ್ಕೆ ಗ್ರಾಪಂ ನೌಕರರ ಆಗ್ರಹ

06:40 AM Jun 21, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಪಂ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡಿ ಜೊತೆಗೆ ಪ್ರತಿ ತಿಂಗಳು ನಿಗದಿಪಡಿಸಿ ತುಟ್ಟಿ ಭತ್ಯೆಯೊಂದಿಗೆ ಇಎಫ್ ಎಂಎಸ್‌ ಮುಖಾಂತರ ನೀಡುವಂತೆ ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶನಿವಾರ ಜಿಲ್ಲೆಯ ಗ್ರಾಪಂ ನೌಕರರು ಜಿಪಂ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದ ಜಿಲ್ಲೆಯ ಗ್ರಾಪಂ ನೌಕರರ ಸಂಘ  (ಸಿಐಟಿಯು) ಸದಸ್ಯರು ಕೊರೊನಾ ಸಂಕಷ್ಟದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಸಮರ್ಪಕವಾಗಿ ವೇತನ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಾಕಿ ವೇತನ ಶೀಘ್ರ ವಿತರಿಸ ಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ನಿವೃತ್ತಿ  ಹಾಗೂ ಮರಣ ಹೊಂದಿದ ನೌಕರರಿಗೆ ಬಾಕಿ ಇರುವ ಉಪಧನ ನೀಡಬೇಕು,

ಗ್ರಾಪಂ ನೌಕರರ ವೇತ ನಕ್ಕೆ 14, 15ನೇ ಹಣಕಾಸು ಯೋಜನೆಯ ಶೇ.10 ರಷ್ಟು ಹಾಗೂ ಕರವಸೂಲಿಯ ಶೇ.40 ರಷ್ಟು ಹಣ ಮೀಸಲಿಡ ಬೇಕೆಂದು ಪ್ರತಿಭಟನೆಯ ನೇತೃತ್ವ  ವಹಿಸಿದ್ದ ಗ್ರಾಪಂ ನೌಕ ರರ ಸಂಘ ಜಿಲ್ಲಾಧ್ಯಕ್ಷ ಜಿ.ಸಿದ್ದಗಂಗಪ್ಪ ಆಗ್ರಹಿಸಿದರು. 2009 ರಿಂದ ಕರವಸೂಲಿ ಹಾಗೂ ಗುಮಾಸ್ತರಿಗೆ ಗ್ರೇಡ್‌-2 ಕಾರ್ಯದರ್ಶಿ ಹುದ್ದೆಗೆ ಭರ್ತಿ ನೀಡಬೇಕು, ಈಗಾಗಲೇ ಗುರುತಿಸಲಾಗಿರುವ ಜಿಲ್ಲೆಯ 61 ಗ್ರಾಪಂ  ಗಳನ್ನು ಗ್ರೇಡ್‌-1 ಗ್ರಾಪಂಗಳಾಗಿ ಮೇಲ್ದಜೇìಗೇರಿಸ  ಬೇಕೆಂದು ಆಗ್ರಹಿಸಿದರು.

ಸಮಸ್ಯೆಗೆ ಸ್ಪಂದಿಸುವ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌, ಮನವಿ ಪತ್ರ ಸ್ವೀಕರಿಸಿ ತಮ್ಮ ಹಂತದಲ್ಲಿ ಬಗೆಹರಿ ಯುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.  ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾಯಾ ಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಸುದರ್ಶನ್‌, ಗೋವಿಂದರೆಡ್ಡಿ, ಆಂಜ ನೇಯರೆಡ್ಡಿ, ನಾರಾಯಣಸ್ವಾಮಿ, ರಾಮಾಂಜಿ, ಕೃಷ್ಣಪ್ಪ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next