Advertisement

ಡಿಸೆಂಬರ್‌ನೊಳಗೆ ಗ್ರಾ.ಪಂ. ಚುನಾವಣೆ?

12:18 AM Oct 14, 2020 | mahesh |

ಬೆಂಗಳೂರು: ಕೋವಿಡ್ ಕಾರಣದಿಂದ ಗ್ರಾಮ ಪಂಚಾಯತ್‌ಗಳ ಚುನಾವಣೆಯನ್ನು ಮುಂದೂಡುವ ರಾಜ್ಯ ಸರಕಾರದ ಯತ್ನ ವಿಫ‌ಲ
ವಾಗಿದ್ದು, ಡಿಸೆಂಬರ್‌ನೊಳಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.  ರಾಜ್ಯ ಚುನಾವಣ ಆಯೋಗದ ಅಧೀನ ಕಾರ್ಯ
ದರ್ಶಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಚುನಾವಣೆ ಮುಂದೂಡಿಕೆ ಅಸಾಧ್ಯ ಎಂದಿದ್ದಾರಲ್ಲದೆ ಹೈಕೋರ್ಟ್‌ನ ಆದೇಶವನ್ನೂ ನೆನಪಿಸಿದ್ದಾರೆ.

Advertisement

ಪತ್ರದಲ್ಲೇನಿದೆ?
ಆಯೋಗವು ಸಾರ್ವತ್ರಿಕ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂ. ರಾಜ್‌ ಕಾಯ್ದೆ 1993ರ ಕಲಂ 8 (2)ರ ಪ್ರಕಾರ ಆಡಳಿತಾಧಿಕಾರಿಗಳು ನೇಮಕಗೊಂಡ 6 ತಿಂಗಳ ಒಳಗಾಗಿ ಗ್ರಾ.ಪಂ.ಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂದಿದ್ದಾರೆ.

2021ರಲ್ಲಿ ಕಷ್ಟ
ರಾಜ್ಯದ ಜಿಲ್ಲಾ ಮತ್ತು ತಾ.ಪಂ.ಗಳ ಅವಧಿಯೂ 2021ರ ಮೇ ಮತ್ತು ಜೂನ್‌ನಲ್ಲಿ ಅಂತ್ಯವಾಗಲಿದೆ. ರಾಜ್ಯ ಸರಕಾರವು ಹೊಸದಾಗಿ ಕೆಲವು ತಾಲೂಕುಗಳನ್ನು ರಚಿಸಿದೆ. ಇವುಗಳಿಗೆ ಚುನಾವಣೆ ನಡೆಸಲು ಡಿಸೆಂಬರ್‌ನಿಂದಲೇ ಸಿದ್ಧತೆ ಆರಂಭಿಸಬೇಕಾಗಿದೆ. ಅಲ್ಲದೆ ಬಿಬಿಎಂಪಿ, ಮೇಯಲ್ಲಿ ಅಂತ್ಯವಾಗಲಿರುವ 55 ನಗರ ಸ್ಥಳೀಯ ಸಂಸ್ಥೆಗಳ ಚುವಾವಣೆ ನಡೆಸಬೇಕಾಗಿರುವುದರಿಂದ ಈಗಲೇ ಚುನಾವಣೆ ನಡೆಸುವುದು ಸೂಕ್ತ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುನ್ನೆಚ್ಚರಿಕೆ ಪಾಲನೆ
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಗರಿಷ್ಠ ಐವರು ಬೆಂಬಲಿಗ ರೊಂದಿಗೆ ಮಾತ್ರ ಪ್ರಚಾರ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಗ್ರಾಮಾಂತರ ಮತದಾರರು ಭಾಗವಹಿಸುವ ಗ್ರಾ.ಪಂ. ಚುನಾವಣೆಯನ್ನು ಪ್ರತೀ ಹಂತದಲ್ಲೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸುವುದು ಸೂಕ್ತ ಎಂದು ರಾಜ್ಯ ಚುನಾವಣ ಆಯೋಗದ ಅಧೀನ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next