ಬೇತಮಂಗಲ: ಕೆಜಿಎಫ್ ತಾಲೂಕಿನ 16 ಗ್ರಾಪಂಗಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟಗೊಳ್ಳುತ್ತಿದ್ದಂತೆ, ಆಕಾಂಕ್ಷಿತರು ಸದ್ದಿಲ್ಲದೆ ತಮ್ಮ ಮುಖಂಡರೊಂದಿಗೆ ಲಾಭಿ ನಡೆಸುತ್ತಿದ್ದು, ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಗಲ್ಲಿ ಗಲ್ಲಿಯಲ್ಲೂ ತಮ್ಮ ಪಂಚಾಯಿತಿಗಳ ದರ್ಬಾರ್ ಗಳದ್ದೆ ಬಿಸಿ ಬಿಸಿ ಚರ್ಚೆಯಾಗಿದೆ.
ತಾಲೂಕಿನಲ್ಲೇ ಅತಿ ಹೆಚ್ಚು (27) ಸದಸ್ಯರ ನ್ನೊಳಗೊಂಡಿರುವ ಬೇತಮಂಗಲ ಗ್ರಾಪಂಗೆ ಅಧ್ಯಕ್ಷ ಸ್ಥಾನವು 20 ವರ್ಷಗಳ ನಂತರ ಸಾಮಾನ್ಯ ಮೀಸಲು ಪ್ರಕಟಗೊಂಡಿದ್ದು, ತಾಲೂಕಿನಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿ ಸೇರಿದಂತೆ ಹಿಂದೆ ವಿಧಾನ ಸಭಾ ಕ್ಷೇತ್ರವಾ ಗಿದ್ದ ಬೇತಮಂಗಲವು 10 ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಬೇಕಿತ್ತು. ಗ್ರಾಪಂನ ಬಹುತೇಕ ಸದಸ್ಯರು ಕಾಂಗ್ರೆಸ್ಸಿಗರು: 2021ರ ಅವಧಿಯಲ್ಲಿ ಗೆದ್ದ ಗ್ರಾಪಂ ಸದಸ್ಯರಲ್ಲಿ ಬಹುತೇಕ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿದ್ದು, ಗ್ರಾಪಂ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಬಿಜೆಪಿ ಅಧ್ಯಕ್ಷರೇ ಆಯ್ಕೆಯಾಗಿದ್ದರು. ಆದರೆ, ಎರಡೂವರೆ ವರ್ಷದ ನಂತರ ನೂತನ ಅಧ್ಯಕ್ಷ ಗಾದಿಯನ್ನು ಕಾಂಗ್ರೆಸ್ ಬೆಂಬಲತರೇ ಆಯ್ಕೆಯಾಗುವುದಲ್ಲಿ ಸಂಶಯವಿಲ್ಲ.ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುತೇಕ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ವರದಾನ.
ಮೀಸಲು ಪ್ರಕಟಗೊಳ್ಳುತ್ತಿದ್ದಂತೆ ಲೆಕ್ಕಾಚಾರ ಶುರು: ಬೇತಮಂಗಲ ಗ್ರಾಪಂಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮೀಸಲಾತಿ ಪ್ರಕಟಗೊಂ ಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಡೇರಿ ಮಂಜುನಾಥ್, ವಿನೂ ಕಾರ್ತಿಕ್, ಇನಾಯತ್ ವುಲ್ಲಾ, ಏಜಾಜ್ ಪಾಷ, ಸುರೇಂದ್ರಗೌಡ ನಡುವೇ ಸ್ಫರ್ಧೆಗೆ ಪೈಪೋಟಿ ಏರ್ಪಟ್ಟಿದ್ದು, ಶಾಸಕಿ ಎಂ. ರೂಪಕಲಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಒಲವು ಯಾರ ಕಡೆ ಎಂಬುದು ನಿಗೂಢವಾಗಿದೆ. ಈಗಾಗಲೇ ಆಕಾಂಕ್ಷಿ ತರು ತಮ್ಮನ್ನೇ ಆಯ್ಕೆ ಮಾಡಬೇಕೆಂದು ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.
ಗ್ರಾಪಂ ಸದಸ್ಯರಾದ ಡೇರಿ ಮಂಜುನಾಥ್ ಸತತ ವಾಗಿ 4 ಬಾರಿಗೆ ಆಯ್ಕೆಯಾಗಿದ್ದು, ಹಿರಿಯ ಸದಸ್ಯರಾಗಿದ್ದು, ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಕಳೆದ ಜಿಪಂ-ತಾಪಂ ಚುನಾವಣೆಯಲ್ಲಿ ತಾಪಂಗೆ ಭಿ.ಫಾರಂ ಕೇಳಿದ್ದರು, ಆದರೆ ಅವಕಾಶ ದೊರಕಿಲ್ಲ ಈ ಬಾರಿ ಗ್ರಾಪಂ ಅಧ್ಯಕ್ಷರನ್ನಾಗಿ ಪಕ್ಷ ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ.
ಆಕಾಂಕ್ಷಿಗಳಿಂದ ಮುಖಂಡರಿಗೆ ಮನವಿ: ಗ್ರಾಪಂ ಸದಸ್ಯ ವಿನೂ ಕಾರ್ತಿ ಸತತವಾಗಿ 2ಬಾರಿಗೆ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಬೂತ್ ಮಟ್ಟದಿಂದ ಶ್ರಮಿಸಿದ್ದೇನೆ. ವಿಧಾನ ಸಭಾ ಚುನಾವಣೆಯಲ್ಲಿಯೂ ಸಹ ಶಾಸಕರ ಪರವಾಗಿ ಕ್ಷೇತ್ರದ್ಯಾಂತ ಪಕ್ಷ ಸಂಘಟಿಸಿ ಬಡವರ ಶ್ರಮಿಕರ ಪರವಾಗಿ ದುಡಿದಿದ್ದೇನೆ. ಯುವಕನಾಗಿ, ವಿದ್ಯಾವಂತ ನಾಗಿ ಬೇತಮಂಗಲ ಗ್ರಾಪಂನ್ನು ಮಾದರಿ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಗ್ರಾಪಂ ಇನಾಯತ್ ವುಲ್ಲಾ, ಹಿಂದೆ ಜಿಪಂ ಉಪಾಧ್ಯಕ್ಷರಾಗಿ, ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ, ಹಿರಿಯ ಸದಸ್ಯನಾಗಿ ತಮಗೆ ಮತ್ತೂಮ್ಮೆ ಅವಕಾಶ ಕಲ್ಪಿಸಿದರೆ ಬೇತಮಂಗಲವನ್ನು ಪಟ್ಟಣ ಪಂಚಾಯಿತಿಯಾಗಿ ಮಾಡಲು ಪ್ರಾಮಾಣಿಕ ವಾಗಿ ಶ್ರಮಿಸುತ್ತೇನೆ ಎಂದು ಮುಖಂಡರಿಗೆ ಮನವಿ ಮಾಡಿದ್ದಾರೆ.
ಬೇತಮಂಗಲದಲ್ಲಿ ಹೆಚ್ಚು ತೆರಿಗೆ ವಸೂಲಿ ಸೇರಿದಂತೆ ಹಲವು ಹಣ ಸಂಗ್ರಹ ಮೂಲಗಳಿದ್ದು, ಕೈಗಾರಿಕೆಗಳು, ವಸತಿ ಸೌಕರ್ಯಗಳು, ಕಸ ವಿಲೇವಾರಿ ಘಟಕ ಸೇರಿ ಹಲವು ಮೂಲ ಸೌಕರ್ಯಗಳನ್ನು ಈಡೇರಿ ಸುವವರು ಅಧ್ಯಕ್ಷರಾಗಬೇಕೆಂದು ಗ್ರಾಮಸ್ಥರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೆಜಿಎಫ್ ತಾಲೂಕಿನ ಒಟ್ಟು 16 ಎಲ್ಲಾ ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತರೇ ಮೇಲುಗೈ ಸಾಧಿಸಲಿದ್ದಾರೆ. ರಾಜ್ಯದಲ್ಲಿ ಯೂ ನಮ್ಮದೇ ಸರ್ಕಾರವಿದ್ದು ಮತ್ತಷ್ಟು ಶಕ್ತಿ ಬಂದಿದೆ. ಆಕಾಂಕ್ಷಿತರೆಲ್ಲರೂ ಒಗ್ಗಟ್ಟಿ ನಿಂದ ಇದ್ದು, ಪಕ್ಷದ, ಮುಖಂಡರು, ಶಾಸಕರ ತಿರ್ಮಾನ ದಂತೆ ನಡೆದುಕೊಳ್ಳಲು ಸೂಚಿಸಲಾಗುವುದು.
-ರಾಧಾಕೃಷ್ಣ ರೆಡ್ಡಿ, ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
-ಆರ್.ಪುರುಷೋತ್ತಮ ರೆಡ್ಡಿ