ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಾಸ್ತವವಾಗಿ ಆಯೋಗದ ನಿರ್ದೇಶನಕ್ಕೂ ಮುಂಚೆಯೇ ಯಾವುದೇ ಕ್ಷಣದಲ್ಲೂ ಗ್ರಾ.ಪಂ. ಚುನಾವಣೆ ನಡೆಯಬಹುದೆಂದು ಪ್ರಮುಖ ರಾಜಕೀಯ ಪಕ್ಷಗಳು ಚಟುವಟಿಕೆಗಳನ್ನು ನಡೆಸುತ್ತಲೇಬಂದಿವೆ.ಈಗ ಆಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿವೆ.ಕೋವಿಡ್ ಕಾರಣದಿಂದ ಜನ ಸಂದಣಿ ಸೇರ ಬಾರದು, ನೂರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಭೆ ನಡೆಸಬಾರದು ಎಂಬ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆ ಸೂಚಿಸಿದರೂ ರಾಜಕೀಯ ಪಕ್ಷಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
Advertisement
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದು ತಿಂಗಳಹಿಂದೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಭೆ ನಡೆಸಿದ್ದಾರೆ. ಗುಂಡ್ಲು ಪೇಟೆ ಚಾಮರಾಜನಗರ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಅವರು, ಚಾಮರಾಜನಗರದ ನಂದಿ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು. ಕೋವಿಡ್ ಸಾಂಕ್ರಾಮಿಕ ಹರಡುವ ಆತಂಕದ ನಡುವೆಯೂ ನೂರಾರುಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಲಾಗಿತ್ತು.
ತಿಳಿದವರಿಗೆ ಗೊತ್ತಿರದ ವಿಷಯವೇನಲ್ಲ. ಇನ್ನು, ಕಾಂಗ್ರೆಸ್ ಪಕ್ಷ ಸ್ವಾಮಿ ಕಾರ್ಯ ಸ್ವಕಾರ್ಯ ಎಂಬಂತೆ, ಕೋವಿಡ್ ತಪಾಸಣೆ
ಹೆಸರಿನಲ್ಲಿ ಅಭಯ ಹಸ್ತ ಎಂಬ ಕಾರ್ಯಕ್ರಮವನ್ನುಹಳ್ಳಿಹಳ್ಳಿಗಳಲ್ಲಿ ನಡೆಸುತ್ತಿದೆ. ಪಕ್ಷದ ಮುಖಂಡರು, ಗ್ರಾಮಗಳಿಗೆ ತೆರಳಿ ಜನರ ಹಣೆ ಮೇಲೆ ಜ್ವರ ಮಾಪಕ ಹಿಡಿಯುವುದೇ ಕೋವಿಡ್ ತಪಾಸಣೆ. ಶಾಸಕರು, ಪಕ್ಷದ ಅಧ್ಯಕ್ಷರು ಗ್ರಾಮಗಳಿಗೆ ತೆರಳಿ, ಜನರ ಗುಂಪು ಸೇರಿಸಿ ತಪಾಸಣೆನಡೆಸಿದ್ದಾರೆ.ಇದುಚುನಾವಣೆ ಉದ್ದೇಶವಿಟ್ಟುಕೊಂಡೇ ನಡೆಸಿದ ಕಾರ್ಯಕ್ರಮ ಎಂಬುದು ತಿಳಿಯದ ಸಂಗತಿಯಲ್ಲ. ಚುನಾವಣೆ ಕಾರಣಕ್ಕೇ ಪ್ರಮುಖ ಪಕ್ಷಗಳು ಕೋವಿಡ್ ನಂತಹ ಗಂಭೀರ ಸಮಸ್ಯೆ ನಡುವೆಯೂ ಈ
ಕಾರ್ಯಕ್ರಮಗಳನ್ನು ನಡೆಸಿವೆ.
Related Articles
Advertisement
ಗ್ರಾಪಂಗಳ ಅವಧಿ ಮುಗಿದು 3-4 ತಿಂಗಳಾಗಿರುವುದರಿಂದ ಹೊಸ ಪಂಚಾಯ್ತಿಗಳನ್ನು ರಚಿಸಲು ಚುನಾವಣೆ ನಡೆಸಬೇಕೆಂಬುದು ಸ್ಥಳೀಯ ಆಕಾಂಕ್ಷಿಗಳ ಒತ್ತಾಯ. ಇನ್ನು ಕೆಲವರು, ಕೋವಿಡ್ ಇದ್ದರೂ ಅನೇಕ ಚಟುವಟಿಕೆ ಅವ್ಯಾಹತವಾಗಿ ಸಾಗಿವೆ. ಚುನಾವಣಾ ಆಯೋಗ ಕೂಡ ಚುನಾವಣೆ ನಡೆಸುವ ಬಗ್ಗೆ ಒಲವು ತೋರುತ್ತಿರುವುದು ಚುನಾವಣೆ ಪರ ಇರುವವರಿಗೆಒತ್ತಾಸೆಯಾಗಿದೆ. ಚುನಾವಣೆ ಖಚಿತವಾದರೆ ಇನ್ನಷ್ಟು ರಾಜಕೀಯ ಬೆಳವಣಿಗೆ ಚುರುಕುಗೊಳ್ಳಲಿವೆ. ಇಡೀ ಜಿಲ್ಲೆಯಾದ್ಯಂತ ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಮಹಾಶಕ್ತಿ ಕೇಂದ್ರಗಳ ಸಭೆಗಳು ಆರಂಭವಾಗಿವೆ. ಗ್ರಾಮಗಳಲ್ಲಿ ಸಭೆ ಆರಂಭಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಗುರಿ ಹೊಂದಿದ್ದೇವೆ. ಚುನಾವಣಾ ಆಯೋಗದ ಸೂಚನೆ ಪಾಲಿಸಿ ಚುನಾವಣೆ ಎದುರಿಸುತ್ತೇವೆ. ಚುನಾವಣೆಗೆ ತಯಾರಾಗಿದ್ದೇವೆ.
– ಆರ್.ಸುಂದರ್, ಅಧ್ಯಕ್ಷ, ಜಿಲ್ಲಾ ಬಿಜೆಪಿ ಗ್ರಾಪಂ ಚುನಾವಣೆ ಎದುರಿಸಲು ಕಾಂಗ್ರೆಸ್ ಸದಾ ಸಿದ್ಧವಿದೆ. ಹೋಬಳಿ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ. ನಿನ್ನೆ ಸಹ
ಹರವೆ ಭಾಗದ ಸಭೆ ನಡೆಸಿದೆವು. ಅಲ್ಲದೇ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಚುನಾವಣೆಗೆ ಸಂಘಟನೆ ನಡೆಯುತ್ತಿದೆ.
– ಪಿ.ಮರಿಸ್ವಾಮಿ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್