ಮಾಗಡಿ: ಕಳೆದ 20 ವರ್ಷಗಳಿಂದ ಕೈ ಭದ್ರ ಕೋಟೆಯಾಗಿದ್ದ ಚಿಕ್ಕಮುದಿಗೆರೆ ಗ್ರಾಪಂ ನಿರೀಕ್ಷೆಯಂತೆ ಮತ್ತೆ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಕೆ.ಆರ್.ರವಿಕುಮಾರ್ ಮತ್ತು ಉಪಾಧ್ಯಕ್ಷ ರಾಗಿ ಪ್ರೇಮಾವತಿ ಅವಿರೋಧ ಆಯ್ಕೆಯಾದರು. ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ ಮಾತ ನಾಡಿ,\ ಚಿಕ್ಕಮುದಿಗೆರೆ ಗ್ರಾಪಂ ಕಳೆದ 20 ವರ್ಷ ಗಳಿಂದಲೂ ಮಾಜಿ ಶಾಸಕ ಎಚ್.ಸಿ.ಬಾಲಕೃÐ ಅ¡ ವರ ಹಿಡಿತದಲ್ಲಿದೆ. ಪೈಕಿ 11 ಸ್ಥಾನ ಕಾಂಗ್ರೆಸ್ ಬೆಂಬ ಲಿತರ ಪಾಲಾಗಿದೆ.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್, ಜಿಪಂ ಅಧ್ಯಕ ಎ Ò ಚ್.ಎನ್.ಅಶೋಕ್ ಅವರ ಜನಪರ ಕಾರ್ಯಕ್ರಮಗಳಿಂದ ಚಿಕ್ಕಮುದಿಗೆರೆ ಗ್ರಾಪಂ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದೆ. ನೂತನ ಅಧ್ಯಕ್ಷ ಕೆ.ಆರ್. ರವಿಕುಮಾರ್ ಉತ್ತಮ ವ್ಯಕ್ತಿಯಾಗಿದ್ದು, ಗ್ರಾಪಂ ಅಭಿವೃದ್ಧಿಪಡಿಸುವ ವಿಶ್ವಾಸವಿದೆ ಎಂದರು.
ಮತದಾರರ ಋಣ ನನ್ನ ಮೇಲಿದೆ: ನೂತನ ಅಧ್ಯಕ್ಷ ಕೆ.ಆರ್.ರವಿಕುಮಾರ್ ಮಾತನಾಡಿ, ಮತದಾರರ ಋಣ ನನ್ನ ಮೇಲಿದೆ. ಪಕ್ಷದ ಮುಖಂಡರ ಮಾರ್ಗ ದರ್ಶನದಲ್ಲಿ ಪಂಚಾಯ್ತಿಯನ್ನು ರಾಜ್ಯದಲ್ಲಿ ಮಾದರಿ ಯ ನ್ನಾ ಗಿ ಸುವ ಗುರಿಯಿದೆ. ಅಧ್ಯಕ್ಷ ಸ್ಥಾನದ ಆಯ್ಕೆಗೆ ಶ್ರಮಿಸಿದ ಗ್ರಾಪಂ ಸದಸ್ಯರು, ಕಾಂಗ್ರೆಸ್‌ನ ಮುಖಂ ಡರು, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ತಾಪಂ ಮಾಜಿ ಅಧ್ಯಕ್ಷ ಕೆ.ಎಚ್.ಶಿವರಾಜು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ನೂತನ ಅಧ್ಯಕ್ಷ ಕೆ.ಆರ್.ರವಿಕುಮಾರ್, ಉಪಾಧ್ಯಕ್ಷೆ ಪ್ರೇಮಾವತಿ ಅವರನ್ನು ಗ್ರಾಪಂ ಸದಸ್ಯರು, ಮುಖಂಡರು, ಅಭಿಮಾನಿಗಳು ಅಭಿನಂದಿಸಿದರು.
ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್, ತಾಪಂ ಮಾಜಿ ಅಧ್ಯಕ್ಷ ಕೆ.ಎಚ್.ಶಿವರಾಜು, ಸದಸ್ಯರಾದ ಟಿ.ಪಿ.ರಾಜಣ್ಣ, ಪಾರ್ವತಮ್ಮ, ಗೋವಿಂದಯ್ಯ, ಗಂಗಾಧರಯ್ಯ, ಗಂಗ ರಾಜು, ವೆಂಕಟೇಶ್, ರವೀಶ್, ರಾಜುಗೌಡ, ಹೇಮಂತ್, ಹುಚ್ಚೇಗೌಡ, ಪುಟ್ಟ, ವಿನೋದ್, ಹನು ಮಂತ ರಾಜು, ಚಂದ್ರಪ್ಪ, ಇದ್ದರು.