Advertisement

ಸಂಕಲಕರಿಯ: ಗ್ರಾಮ ಸೇವಕ್‌ ಕಚೇರಿ ಪ್ರಾರಂಭ

10:58 PM Jan 19, 2021 | Team Udayavani |

ಬೆಳ್ಮಣ್‌:  ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕೇಸರಿ ಶಾಲು ಧರಿಸಿ ಪ್ರಚಾರ ಹಾಗೂ ಬೂತ್‌ ಪ್ರಕ್ರಿಯೆಗಳನ್ನು ನಡೆಸಿ ಜಯ ಗಳಿಸಿ ಸುದ್ದಿಯಾಗಿದ್ದ  ಮುಂಡ್ಕೂರು ಗ್ರಾಮ ಪಂಚಾಯತ್‌ನ ಒಂದನೇ ವಾರ್ಡ್‌ನ ಮೂವರು ಸದಸ್ಯರು ಇದೀಗ ಗ್ರಾಮ ಸೇವಕ್‌ ಕಚೇರಿ ಪ್ರಾರಂಭಿಸಿ ಮತ್ತೆ ಪ್ರಚಾರದಲ್ಲಿದ್ದಾರೆ.

Advertisement

ಏನಿದು ಜನಸೇವಕ್‌…? :

ಸಂಕಲಕರಿಯ ವಾರ್ಡ್‌ನಲ್ಲಿ ಭರ್ಜರಿ ಜಯ ಗಳಿಸಿದ್ದ  ಆಶೋಕ್‌ ಶೆಟ್ಟಿ, ಸಶಿಕಲಾ ಸಾಲ್ಯಾನ್‌ ಹಾಗೂ ಪ್ರೇಮಾ ಜೆ.ಶೆಟ್ಟಿಯವರು ನಿರಂತರ ಜನ ಸಂಪರ್ಕಕ್ಕಾಗಿ ಸಮಕಲಕರಿಯದಲ್ಲಿ ಕಚೆೇರಿಯೊಂದನ್ನು ತೆರೆದಿದ್ದು ಆ ಕಚೇರಿಗೆ ಜನಸೇವಕ್‌ ಎಂಬ ಹೆಸರನ್ನಿರಿಸಿದ್ದಾರೆ. ಅಲ್ಲದೆ ಇದು ಪಕ್ಷದ ಕಛೇರಿಯಲ್ಲ ಬದಲಾಗಿ ಜನ ಸೇವಕರ ಕಛೇರಿ ಎಂಬ ಶಿರೋನಾಮೆಯನ್ನೂ ನೀಡಿ ಪಂಚಾಯತ್‌ ಸದಸ್ಯರು ಯಾವುದೇ ಪಕ್ಷದ ಪ್ರತಿನಿಧಿಗಳಲ್ಲ ಬದಲಾಗಿ ಜನರ ಸೇವೆಗಾಗಿ ಜನರಿಂದಲೇ ಆರಿಸಲ್ಪಟ್ಟವರು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ವಾರಕ್ಕೊಮ್ಮೆ ಮನೆ ಮನೆ ಭೇಟಿ :

ಸಂಕಲಕರಿಯ ವಾರ್ಡನ್ನು 4 ಭಾಗಗಳಾಗಿ ವಿಂಗಡಿಸಲಾಗಿ ಪ್ರತೀ ಮಂಗಳವಾರ ಆವರ್ತನ ಮಾದರಿಯಂತೆ ಪ್ರತೀ ಭಾಗಗಳಲ್ಲಿ ಮೂರೂ ಸದಸ್ಯರು ಇಡೀ ದಿನ ಒಟ್ಟಾಗಿ ಸೇರಿ ಸಾರ್ವಜನಿಕರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅಗತ್ಯ ಬಿದ್ದಲ್ಲಿ ಅರ್ಜಿಗಳನ್ನು ಉಚಿತವಾಗಿ ಬರೆದು ಸಂಬಂಧಪಟ್ಟವರಿಗೆ ಮುಟ್ಟಿಸುವ ಸಂಪೂರ್ಣ ವ್ಯವಸ್ಥೆ ಮಾಡಲಾಗುವುದು. ಪಂಚಾಯತ್‌ನ ಗ್ರಾಮ ಸಭೆಗೆ ಮುನ್ನ ವಾರ್ಡ್‌ ಸಭೆ ನಡೆಯುವಂತೆ ಈ ಮೂವರು ಸದಸ್ಯರು ಆಯಾ ಭಾಗಗಳಲ್ಲಿ ಸಭೆ ನಡೆಸಿ ಗ್ರಾಮ ಸಭೆಗಳಿಗೆ ಪೂರ್ವಭಾವಿ ತಯಾರಿ ಮಾಡಲಿದ್ದಾರೆ.

Advertisement

ಸಂಕಲಕರಿಯದ ಅಲಂಗಾರುಗುಡ್ಡೆ, ಗೋಕುಲನಗರ, ಉಗ್ಗೆಬೆಟ್ಟು, ಸಂಕಲಕರಿಯ ಭಾಗಗಳಲ್ಲಿ ಈ ಸಭೆ ಫೆಬ್ರವರಿ ಬಳಿಕ ಪ್ರತೀ ಮಂಗಳವಾರ ಅನುಕ್ರಮವಾಗಿ ನಡೆಯಲಿದೆ.

ಈ ವರೆಗೆ ಯಾವುದೇ ಗ್ರಾಮ ಪಂಚಾಯತ್‌ ಸದಸ್ಯರು ನಡೆಸದ ವಿಭಿನ್ನ ಪ್ರಯತ್ನದ ಈ ಗ್ರಾಮ ಸೇವಕ್‌ ಕಛೇರಿಯ ಉದ್ಘಾಟನೆ ಇತ್ತೀಚೆಗೆ ನಡೆದಿದೆ. ಫೆಬ್ರವರಿಯಲ್ಲಿ ಆಧಿಕೃತ ಸೇವೆ ನಡೆಯಲಿದೆ.

ಸಿಗುವ ಸೇವೆಗಳು :

ಈ ಹಿಂದೆ ಪಂಚಾಯತ್‌ ಸಹಿತ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದವರು ಸೋಲಲಿ ಗೆಲ್ಲಲಿ ಮತ್ತೆ ಮತದಾರರ ಬಳಿಗೆ ಹೋಗುವುದು 5 ವರ್ಷಗಳ ಬಳಿಕವೇ. ಆ ಸಂದರ್ಭ ಓಟ್‌ ಕೇಳಲು ಮನೆ ಬಾಗಿಲಿಗೆ ಹೋಗುವ ಅಭ್ಯರ್ಥಿಯ ಕಾರ್ಯಕರ್ತ ಹುಗ್ಗಾಮುಗ್ಗ ಬೈಗುಳ ತಿನ್ನ ಬೇಕಾಗುತ್ತದೆ. ಆದರೆ ಸಂಕಲಕರಿಯ ವಾರ್ಡ್‌ನ

ವಿಜೇತ ಸದಸ್ಯರು ಈ ಬಗ್ಗೆ ಮುಂದಾಲೋಚನೆಯಿಂದ ಈ ಕಚೇರಿ ಪ್ರಾರಂಭಿಸಿದ್ದಾರೆ. ವಾರ್ಡನ ಪ್ರತೀ ಮನೆಗಳ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಾರ್ವಜನಿಕರ ಪ್ರಮುಖ ಬೇಡಿಕೆಗಳಾದ ಪಡಿತರ, ಆಧಾರ್‌ ಕಾರ್ಡ್‌ಗಳ ವ್ಯವಸ್ಥೆ, ಸರಕಾರದ ಸಂಧ್ಯಾ ಸುರಕ್ಷಾ,  ವೃದ್ಧಾಪ್ಯ ವೇತನ ಸಹಿತ ವಿವಿಧ ಯೋಜನೆಗಳನ್ನು ಅಗತ್ಯ ಉಳ್ಳವರಿಗೆ ತಲುಪಿಸುವುದು ಈ ಕಚೇರಿಯ ಮುಖ್ಯ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next