ದೇವನಹಳ್ಳಿ: ಮೊದಲನೇ ಹಂತದ ಚುನಾವಣೆ ನಾಮಪತ್ರ ಮುಗಿದಿದ್ದು, 2ನೇ ಹಂತದ ಗ್ರಾಪಂ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ ಗ್ರಾಪಂ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಅದೃಷ್ಟದ ಚಿಹ್ನೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯ ಚುನಾವಣಾ ಆಯೋಗ 194 ಮುಕ್ತ ಚಿಹ್ನೆಗಳ
ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಟ್ರ್ಯಾಕ್ಟರ್, ಕುಕ್ಕರ್, ವಜ್ರ, ಕ್ಯಾಮೆರಾ, ಗ್ಯಾಸ್, ತೆಂಗಿನ ತೋಟ, ರೈತನ ನೇಗಿಲು, ಬ್ಯಾಟರಿ, ಟೆಲಿಪೋನ್, ಉಂಗುರ, ಟಿವಿ, ಆಟೋ ರಿಕ್ಷಾ, ಬಾಲ್, ಕಹಳೆ ಊದುತ್ತಿರುವ ಸೇರಿದಂತೆ ಇನ್ನೂ ಕೆಲವು ಗುರುತುಗಳ ಚಿಹ್ನೆಗಳು ಹೆಚ್ಚು ಪ್ರಚಲಿತವಾಗಿವೆ. ಗ್ರಾಪಂ ಚುನಾವಣೆ ರಾಜಕೀಯ ಪಕ್ಷದ ಬೆಂಬಲದ ಜತೆಗೆ ಸ್ಥಳೀಯವಾಗಿ ಸಂಬಂಧ ನೆಂಟಸ್ತಿಕೆ, ಜನಪರತೆ ಆಧಾರದ ಮೇಲೆ ಸೋಲು-ಗೆಲುವು ನಿರ್ಧರಿಸಿರುತ್ತದೆ. ಇದರಲ್ಲಿ ಚಿಹ್ನೆಯ ಪಾತ್ರವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಚಿಹ್ನೆ, ಜನಪ್ರಿಯತೆ ಮತ್ತು ಆಕರ್ಷಕವಾಗಿದ್ದರೆ, ಮತ್ತಷ್ಟು ಗೆಲುವು ಇನ್ನಷ್ಟು ಸುಲಭವಾಗಲಿದೆ ಎಂಬುವುದು ಹಲವಾರರಿಗೆ ನಂಬಿಕೆಯಾಗಿದೆ. ಕಳೆದ ಹೊಸಕೋಟೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ ಅವರ ಕುಕ್ಕರ್ ಚಿಹ್ನೆ ಅವರಿಗೆಗೆಲುವು ತಂದು ಕೊಟ್ಟಿದ್ದರಿಂದ ಕೆಲವರು ಕುಕ್ಕರ್ ಚಿಹ್ನೆಗೆ ಬೇಡಿಕೆ ಹಾಗೂ ಕುಕ್ಕರ್‌ವಿಷಿಲ್ ಸೌಂಡ್ ಜಿಲ್ಲೆಯಲ್ಲಿ ಮನೆ ಮಾಡಿದೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆಯಿಂದ ಗೆಲುವು ಸಾಧಿಸಿದ್ದರು. ಅದೇ ಗೆಲುವಿನ ಅದೃಷ್ಟ ತಮಗೂ ಬರಲಿದೆ ಎಂದುಕೊಂಡು ಆ ಚಿಹ್ನೆ ಕೇಳಲು ಮುಂದಾಗಿದ್ದಾರೆ.
ವಿವಿಧ ಮೂರು ಪಕ್ಷಗಳು ಯಾವ ಚಿಹ್ನೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಪಂ ಚುನಾವಣೆಯಲ್ಲಿ ಯಾವ ಚಿಹ್ನೆಯನ್ನು ತೆಗೆದುಕೊಂಡರೆ, ತಮಗೆ ಅದೃಷ್ಟ ಹಾಗೂ ಗೆಲುವು ಸುಲಭ ವಾಗಿ ಪಡೆಯಬಹುದೆಂಬು ಆಲೋಚನೆ ಯಲ್ಲಿ ತೊಡಗಿದ್ದಾರೆ. ಒಂದೆಡೆಜೋತಿಷಿಗಳ ಮೊರೆ ಹೋಗಿ ಯಾವ ಚಿಹ್ನೆ ಪಡೆದರೆ ಅದೃಷ್ಟ ಫಲಿಸಲಿದೆ ಎಂಬುವುದು ಸಹ ಲೆಕ್ಕಾಚಾರ ನಡೆಯುತ್ತಿದೆ.
ಗ್ರಾಪಂ ಸ್ಥಳೀಯ ಸರ್ಕಾರವಾಗಿದ್ದು, ಗ್ರಾಮಗಳಲ್ಲಿ ಹಳ್ಳಿಫೈಟ್‌ಜೋರಾಗಿಯೇನಡೆಯುತ್ತಿದೆ.ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ, ಒದೊಂದು ಮತವೂ ಸಹ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಮತದಾರರು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗು ವಂತೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಚಿಹ್ನೆಗಳನ್ನೇ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಗುರ್ತಿಸಿದ್ದಾರೆ. ಉಮೇದುದಾರಿಕೆ ಸಲ್ಲಿಸಿರುವ ಆಕಾಂಕ್ಷಿಗಳು ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.