Advertisement

ಮತಗಟ್ಟೆ ಬಳಿಯೇ ರಾಜರೋಷವಾಗಿ ಹಣ ಹಂಚಿದ ಗ್ರಾ.ಪಂ ಚುನಾವಣಾ ಅಭ್ಯರ್ಥಿ

06:40 PM Dec 27, 2020 | Mithun PG |

ಮೈಸೂರು: ತಾಲೂಕಿನ ಧನಗಳ್ಳಿ ಗ್ರಾ.ಪಂ ವ್ಯಾಪ್ತಿಯ ಡಿ. ಸಾಲುಂಡಿ ಗ್ರಾಮದ ಅಭ್ಯರ್ಥಿ ಮತಗಟ್ಟೆ ಬಳಿ ಹಣ ನೀಡಿ ಮತ ಹಾಕುವಂತೆ ಮತದಾರರನ್ನು ಓಲೈಸಿದ್ದು ಕಂಡು ಬಂದಿದೆ.

Advertisement

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮತದಾನದ ವೇಳೆ ಡಿ. ಸಾಲುಂಡಿ ಗ್ರಾಮದಲ್ಲಿನ ಮತಗಟ್ಟೆ ಬಳಿಯೇ ಮತದಾರರನ್ನು ಓಲೈಸುವ ಸಲುವಾಗಿ ಬಿ. ಬಸವರಾಜು ಎಂಬ ಅಭ್ಯರ್ಥಿ ಕ್ರಮ ಸಂಖ್ಯೆ 03 ಆಟೋ ಚಿಹ್ನೆಗೆ ಮತ ಹಾಕುವಂತೆ ಹಣ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿವೆ.

ಮತಗಟ್ಟೆ ಬಳಿಯೇ ರಾಜರೋಷವಾಗಿ ಹಣ ಹಂಚುತ್ತಿರುವ ಅಭ್ಯರ್ಥಿ ಬಿ.ಬಸವರಾಜು ಅವರ ನಡೆಗೆ ಪ್ರತಿಸ್ಪರ್ಧಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗುಳೇ ಹೋದವರಿಗೆ ರಾಜಮರ್ಯಾದೆ: ಐಶಾರಾಮಿ ಬಸ್ ಮೂಲಕ ಗ್ರಾಮಕ್ಕೆ ಕರೆಸಿದ ಗ್ರಾ.ಪಂ ಅಭ್ಯರ್ಥಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next