ಸಿರುಗುಪ್ಪ: ಡಿ. 22ರಂದು ನಡೆದ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ 26ಗ್ರಾಮಪಂಚಾಯಿತಿಗಳ 365 ಸ್ಥಾನಗಳಿಗೆ ನಡೆದಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಪ್ರತಿಗ್ರಾಮಗಳಲ್ಲಿ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ. ಯಾರು ಸೋಲುತ್ತಾರೆ ಎನ್ನುವುದೇ ಪ್ರತಿ ಗ್ರಾಮದ ಹೋಟೆಲ್, ದೇವಸ್ಥಾನದ ಕಟ್ಟೆಗಳ ಮೇಲೆ ಕುಳಿತು ಚರ್ಚಿಸುತ್ತಿರುವುದು ಸಾಮಾನ್ಯವಾಗಿದೆ.
ತಾಲೂಕಿನ 26 ಗ್ರಾಪಂಗಳ 489 ಸದಸ್ಯ ಸ್ಥಾನಗಳಿದ್ದು, ಈಗಾಗಲೇ 93 ಸದಸ್ಯರು ವಿವಿಧ ಗ್ರಾಪಂಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ ನಿಶ್ಚಿಂತೆಯಲ್ಲಿದ್ದಾರೆ. ಆದರೆ ಜಿದ್ದಾಜಿದ್ದಿನಚುನಾವಣೆಯಲ್ಲಿ 365 ಸ್ಥಾನಗಳಿಗೆ765 ಅಭ್ಯರ್ಥಿಗಳು ಸ್ಪ ರ್ಧಿಸಿ ಚುನಾವಣೆಎದುರಿಸಿ ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆಕಾಯುತ್ತಿದ್ದು, ಈಗಾಗಲೇ ಅಭ್ಯರ್ಥಿಗಳಭವಿಷ್ಯವನ್ನು ಮತದಾರರು ನಿರ್ಧರಿಸಿಯಾಗಿದೆ.
ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ತಾಲೂಕು ಆಡಳಿತವು ಡಿ. 30ರಂದು ಮತ ಎಣಿಕೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದು, ತೀವ್ರ ಪೈಪೋಟಿ ಒಡ್ಡಿದ ಅಭ್ಯರ್ಥಿಗಳು ಮತ್ತು ಅವಬೆಂಬಲಿಗರು ಇದೀಗ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವುದರ ಬಗ್ಗೆ5 ಸಾವಿರದಿಂದ 2 ಲಕ್ಷದ ವರೆಗೆ ಬೆಟ್ಟಿಂಗ್ ಕೂಡ ಅಲ್ಲಲ್ಲಿ ನಡೆಯುತ್ತಿರುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಬೆಂಬಲಿಗರು, ತಮ್ಮ ಅಭ್ಯರ್ಥಿಗಳಗೆಲುವಿಗಾಗಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಿದ್ದೇವೆ. ನಮ್ಮ ಬೆಂಬಲಿತ ಅಭ್ಯರ್ಥಿ ಗೆಲುವು ಖಚಿತವೇಎನ್ನುವುದನ್ನು ಪ್ರತಿ ದಿನ ಲೆಕ್ಕಾಚಾರ ಮಾಡುತ್ತಡಿ. 30ರಂದು ಹೊರಬೀಳಲಿರುವ ಫಲಿತಾಂಶದನಿರೀಕ್ಷೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ.
ಹಾಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮತ್ತುಮಾಜಿ ಶಾಸಕ ಬಿ.ಎಂ. ನಾಗರಾಜ ಹಾಗೂ ರಾಜಕೀಯಪಕ್ಷಗಳ ಮುಖಂಡರು ಗ್ರಾಪಂ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪ್ರತಿ ಗ್ರಾಮಕ್ಕೆ ತೆರಳಿ ಅಬ್ಬರದ ಪ್ರಚಾರ ನಡೆಸಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು, ಎಲ್ಲ ಗ್ರಾಪಂಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆಂದು ಹೇಳಿಕೊಳ್ಳುತ್ತಾ ಬಂದಿದ್ದು ಇವರ ಲೆಕ್ಕಾಚಾರವೂಕೂಡ ಚುನಾವಣೆಯ ಫಲಿತಾಂಶದ ದಿನದಂದು ಬಹಿರಂಗವಾಗಲಿದೆ.
ವಿವಿಧ ರಾಜಕೀಯ ಪಕ್ಷಗಳ ಮುಖಂಡರುತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಯಾವಯಾವ ಪಂಚಾಯಿತಿಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳುಗೆಲ್ಲಲಿದ್ದಾರೆ. ಯಾವ ಪಂಚಾಯಿತಿ ನಮ್ಮ ಪಕ್ಷದಸುಪರ್ದಿಗೆ ಬರುತ್ತದೆ ಎನ್ನುವುದರ ಬಗ್ಗೆ ತಮ್ಮಪಕ್ಷದ ಮುಖಂಡರ ಮತ್ತು ಕಾರ್ಯಕರ್ತರೊಂದಿಗೆಚರ್ಚಿಸುತ್ತ ಚುನಾವಣೆ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
-ಆರ್.ಬಸವರೆಡ್ಡಿ ಕರೂರು