ರಾಣಿಬೆನ್ನೂರ: ತಾಲೂಕಿನತುಮ್ಮಿನಕಟ್ಟಿ, ಮಾಳನಾಯಕನಹಳ್ಳಿ,ಜೋಯಿಸರಹರಳಳ್ಳಿ, ಸುಣಕಲ್ಲ ಬಿದರಿ,ಕುಪ್ಪೇಲೂರು, ಅಂತರವಳ್ಳಿಯ 6ಗ್ರಾಪಂಗಳ 81 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಿದ್ದ 200 ಅಭ್ಯರ್ಥಿಗಳಿಗೆ ಸೋಮವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ತಾಲೂಕಿನಾದ್ಯಂತ ಸಂಜೆ 4ಗಂಟೆಯ ಸುಮಾರಿಗೆ ಒಟ್ಟು ಶೇ 60ಕ್ಕೂ ಅಧಿಕ ಸರಾಸರಿ ಮತದಾನವಾಗಿದೆ ಎಂದು ಪ್ರಥಮ ಹಂತದ ಮಾಹಿತಿಯಿಂದ ಅಂದಾಜಿಸಲಾಗಿದೆ. ಅತೀ ಕುತೂಹಲ ಮೂಡಿಸಿದ್ದ ಈಗ್ರಾಪಂ ಚುನಾವಣೆಗಳು ಬಹುತೇಕ ಗ್ರಾಮಗಳಲ್ಲಿ ಬೆಳಿಗ್ಗೆ ಮತಗಟ್ಟೆಗೆಪೂಜೆ ಸಲ್ಲಿಸಿ ಮತದಾನ ಮಾಡಿದ್ದು ಸಾಮಾನ್ಯವಾಗಿತ್ತು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಕೊಂಚ ನಿಧಾನವಾಗಿತ್ತು.9 ಗಂಟೆಯ ವೇಳೆಗೆ ತಾಲೂಕಿನಲ್ಲಿಒಟ್ಟಾರೆ ಸರಾಸರಿ 15 ರಷ್ಟುಮತದಾನವಾಗಿತ್ತು. ಅನಂತರ ಮತದಾನ ಸ್ವಲ್ಪ ಚುರುಕು ಗೊಂಡು ಬೆಳಿಗ್ಗೆ 11 ಗಂಟೆಯ ಸುಮಾರಿಗೆ30 ರಿಂದ 40 ಸರಾಸರಿಯಷ್ಟು ಮತದಾನವಾಗಿದ್ದು ಚುನಾವಣಾಮೂಲಗಳಿಂದ ಅಂದಾಜಿಸಲಾಗಿತ್ತು. ಮದ್ಯಾಹ್ನ 12-30ರಿಂದ 3 ಗಂಟೆಯವರೆಗೆ ಮತದಾನ ಬಹಳಷ್ಟು ಮಂದಗತಿಯಲ್ಲಿ ಸಾಗಿದ್ದು ಕಂಡು ಬಂದಿತು.
ಅನಂತರ ಮತ್ತೆ ಚುರುಕಾದ ಮತದಾನ ಸಂಜೆ 4 ರ ವೇಳೆಗೆಅಂದಾಜು ಶೇ 60 ಸರಾಸರಿಯಷ್ಟು ಮತದಾನವಾಗಿದ್ದು ಕಂಡು ಬಂದಿತು.ತಾಲೂಕಿನಲ್ಲಿ ಒಟ್ಟು 40ಮತಗಟ್ಟೆಗಳಿದ್ದು ಪೈಕಿ 10 ಕ್ರಿಟಿಕಲ್ ಹಾಗೂ 30 ನಾನಕ್ರಿಟಿಕಲ್‌ಮತಗಟ್ಟೆಗಳಿವೆ. ಒಟ್ಟು ಮತಗಟ್ಟೆಗಳಿಗೆ 44 ಪಿಆರ್‌ಒ, 44 ಎಪಿಆರ್‌ಒ ಸೇರಿದಂತೆ 176 ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಿದರು. 3 ಸೆಕ್ಟರ್ ಅಧಿಕಾರಿಗಳ ಸಂಚಾರಿ ದಳ ಎಲ್ಲ ಮತಗಟ್ಟೆಗಳಿಗೂ ಸಂಚರಿಸಿ ಚುನಾವಣ ಉಸ್ತುವಾರಿ ನೋಡಿಕೊಳ್ಳಲಾಯಿತು.
ಮತದಾನದ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಡಿವೈಎಸ್‌ಪಿ,1 ಸಿಪಿಐ, 4 ಪಿಎಸ್‌ಐ, 8 ಎಎಸ್‌ಐ,78 ಎಚ್‌ಸಿ, ಪೇದೆ ಹಾಗೂ 2 ಡಿಆರ್ ವ್ಯಾನ್ ನಿಯೋಜನೆ ಮಾಡಲಾಗಿತ್ತು.