Advertisement

ವೇಣೂರು, ಆರಂಬೋಡಿ ಗ್ರಾ.ಪಂ. ಚುನಾವಣೆ : ಮೊದಲ ದಿನ ಯಾರಿಂದಲೂ ಸಲ್ಲಿಕೆಯಾಗದ ನಾಮಪತ್ರ

10:14 PM Mar 15, 2021 | Team Udayavani |

ವೇಣೂರು: ಬಾಕಿ ಉಳಿದಿದ್ದ ವೇಣೂರು ಹಾಗೂ ಆರಂಬೋಡಿ ಗ್ರಾ.ಪಂ.ನ ಚುನಾವಣೆ ಮಾ. 29ರಂದು ನಡೆಯಲಿದ್ದು, ಸರಕಾರ ಈಗಾಗಲೇ ಗ್ರಾ.ಪಂ.ಗಳಿಗೆ ವಾರ್ಡ್‌ವಾರು ಅಭ್ಯರ್ಥಿಗಳ ಮೀಸಲಾತಿ ನಿಗ ಪಡಿಸಿದೆ. ಸೋಮವಾರದಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಗೊಂಡಿದೆ. ವೇಣೂರು ಗ್ರಾಮ ಪಂಚಾಯತ್‌ ಹಾಗೂ ಆರಂಬೋಡಿ ಗ್ರಾಮ ಪಂಚಾಯತ್‌ ಚುನಾವಣೆಗೆ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

Advertisement

ವೇಣೂರು ಗ್ರಾ.ಪಂ.: ವಾರ್ಡ್‌ವಾರು ಮೀಸಲಾತಿ
24 ಸದಸ್ಯ ಸ್ಥಾನಗಳನ್ನು ಹೊಂದಿರುವ ವೇಣೂರು ಗ್ರಾ.ಪಂ.ನ ವಾರ್ಡ್‌ 1ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ, ಹಿಂದುಳಿದ ವರ್ಗ ಬಿ ಮಹಿಳೆ, ಸಾಮಾನ್ಯ ಮಹಿಳೆ, ವಾರ್ಡ್‌ 2ರಲ್ಲಿ ಅನುಸೂಚಿತ ಜಾತಿ (ಮಹಿಳೆ), ಸಾಮಾನ್ಯ, ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿದೆ.

ಬಜಿರೆ ವಾರ್ಡ್‌ 1ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ (ಮಹಿಳೆ), ವಾರ್ಡ್‌ 2ರಲ್ಲಿ ಅನುಸೂಚಿತ ಜಾತಿ (ಮಹಿಳೆ), ಹಿಂದುಳಿದ ವರ್ಗ ಎ ಮೀಸಲಾತಿ, ಕರಿಮಣೇಲು ವಾರ್ಡ್‌ 1ರಲ್ಲಿ ಸಾಮಾನ್ಯ, ಸಾಮಾನ್ಯ (ಮಹಿಳೆ), ವಾರ್ಡ್‌ 2ರಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ (ಮಹಿಳೆ) ಮತ್ತು ಸಾಮಾನ್ಯ. ಮೂಡುಕೋಡಿ ವಾರ್ಡ್‌ 1ರಲ್ಲಿ ಹಿಂದುಳಿದ ವರ್ಗ ಬಿ, ಸಾಮಾನ್ಯ ಹಾಗೂ ವಾರ್ಡ್‌2ರಲ್ಲಿ ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಎ (ಮಹಿಳೆ) ಮತ್ತು ಸಾಮಾನ್ಯ ಅಭ್ಯರ್ಥಿಗೆ ಮೀಸಲಾತಿ ನಿಗಧಿಯಾಗಿದೆ.

ಆರಂಬೋಡಿ ಗ್ರಾ.ಪಂ.: ವಾರ್ಡ್‌ವಾರು ಮೀಸಲಾತಿ
12 ಸದಸ್ಯ ಸ್ಥಾನಗಳನ್ನು ಹೊಂದಿರುವ ಆರಂಬೋಡಿ ಗ್ರಾ.ಪಂ.ನ ವಾರ್ಡ್‌1ರಲ್ಲಿ ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಎ (ಮಹಿಳೆ) ಹಾಗೂ ಸಾಮಾನ್ಯ, ವಾರ್ಡ್‌ 2ರಲ್ಲಿ ಅನುಸೂಚಿತ ಜಾತಿ (ಮಹಿಳೆ), ಅನುಸೂಚಿತ ಪಂಗಡ (ಮಹಿಳೆ), ಸಾಮಾನ್ಯ. ಗುಂಡೂರಿ ವಾರ್ಡ್‌ 1ರಲ್ಲಿ ಹಿಂದುಳಿದ ವರ್ಗ ಎ (ಮಹಿಳೆ), ಹಿಂದುಳಿದ ವರ್ಗ ಬಿ ಹಾಗೂ ಸಾಮಾನ್ಯ ಮಹಿಳೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮೀಸಲಾತಿ ನಿಗದಿಯಾಗಿದೆ.

ಸಾಮತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ವಾಗುತ್ತಿದ್ದಂತೆ ಪಕ್ಷದ ವರಿಷ್ಠರು, ಕಾರ್ಯ ಕರ್ತರು ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ದಲ್ಲಿದ್ದು, ಗ್ರಾಮ ರಾಜಕೀಯದ ಕಣ ಬಿಸಿಯೇರತೊಡಗಿದೆ.
ಚುನಾವಣಾ ನೀತಿ ಸಂಹಿತೆಯು ಮಾ. 15ರಂದು ಜಾರಿಯಾಗಿದ್ದು, ಮಾ. 31ರವರೆಗೆ ಜಾರಿಯಲ್ಲಿರಲಿದೆ.

Advertisement

ಮದ್ಯದಂಗಡಿಗಳು ಬಂದ್‌
ಮತದಾನ ನಡೆಯುವ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಮಾ. 27ರಿಂದ ಮಾ.29ರ ಮತದಾನ ಮುಗಿಯುವವರಿಗೆ ಎಲ್ಲ ಮದ್ಯದಂಗಡಿಗಳು ಬಂದ್‌ ಆಗಲಿದೆ. ಈ ಸಮಯದಲ್ಲಿ ಯಾರಾದರೂ ಮದ್ಯವನ್ನು ದಾಸ್ತಾನು ಇರಿಸಿದರೆ ಅಥವಾ ಮದ್ಯ ಸೇವಿಸಿ ರಂಪ ಮಾಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಗಿಯುವವರಿಗೆ ಅವರನ್ನು ಕಸ್ಟಡಿಯಲ್ಲಿ ಇಡಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಒಟ್ಟು ಮತದಾರರು
ವೇಣೂರು ಗ್ರಾ.ಪಂ. ವ್ಯಾಪ್ತಿ ಯಲ್ಲಿ 8,074 ಮತದಾರರಿದ್ದು, ಇದರಲ್ಲಿ 4,034 ಪುರುಷರು ಹಾಗೂ 4,040 ಮಹಿಳಾ ಮತದಾರರಾಗಿದ್ದಾರೆ. ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 3,945 ಮಂದಿ ಮತದಾರರಿದ್ದು, 1,965 ಪುರುಷರು ಹಾಗೂ 1,980 ಮಹಿಳಾ ಮತದಾರರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next