Advertisement

ಖಾಲಿ ಇರುವ ಗ್ರಾಪಂ ಸ್ಥಾನಗಳಿಗೆ ಉಪಚುನಾವಣೆ

01:56 PM May 01, 2022 | Team Udayavani |

ಮಂಡ್ಯ: ರಾಜ್ಯ ಚುನಾವಣಾ ಆಯೋಗ 2021ರಲ್ಲಿ ಮಂಡ್ಯ ಜಿಲ್ಲೆಯ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನ ಭರ್ತಿ ಮಾಡಲು ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌. ಅಶ್ವತಿ ಆದೇಶ ಹೊರಡಿಸಿದ್ದಾರೆ.

Advertisement

ಮೇ 5ರಿಂದ 10ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳ ಪರಿಶೀಲನೆ 11ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು 13 ಕೊನೇ ದಿನವಾಗಿದೆ. ಮತದಾನ ಅವಶ್ಯಕತೆ ಇದ್ದರೆ 20ರ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ನಡೆಯಲಿದೆ.ತಾಲೂಕು ಕೇಂದ್ರಗಳಲ್ಲಿ 22ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಸಿಬ್ಬಂದಿ ನೇಮಕ: ಚುನಾವಣಾ ಕಾರ್ಯಕ್ಕೆ 9 ಚುನಾವಣಾಧಿಕಾರಿಗಳು, 9 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು- 18 ಸಿಬ್ಬಂದಿಯನ್ನು ನೇಮಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಮೇ 5ರಿಂದ 22ರವರೆಗೆ ಜಾರಿಯಲ್ಲಿರುತ್ತದೆ. ಗ್ರಾಪಂನ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯದ ಸಂದರ್ಭದಲ್ಲಿ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದ್ದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ನಿಂತು ಹೋಗುತ್ತದೆ. ನೀತಿ ಸಂಹಿತೆ ಪಪಂ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಗ್ರಾಪಂ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದೆ.

ನೋಟಾಗೆ ಅವಕಾಶವಿಲ್ಲ: ಸದರಿ ಗ್ರಾಪಂ ಉಪ ಚುನಾವಣೆ ಮತಪತ್ರಗಳ ಮೂಲಕ ನಡೆಯಲಿದ್ದು, ಮತಪತ್ರದಲ್ಲಿ ನೋಟಾಗೆ ಅವಕಾಶವಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿ ಮತ್ತು ಮದ್ಯ ತಯಾರಿಕ ಘಟಕಗಳನ್ನು ಅದರ ಮಾಲಿಕರು, ಅದಿಭೋಗದಾರರು ಸಂದರ್ಭಾನುಸಾರ ಅದರ ವ್ಯವಸ್ಥಾಪಕರು ಮುಚ್ಚಬೇಕು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಂಡು ಮತಚಲಾಯಿಸಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ನಡೆಯಲಿರುವ ಗ್ರಾಪಂಗಳು : ಉಪ ಚುನಾವಣೆ ಮಂಡ್ಯ ತಾಲೂಕಿನ ಮುದಗಂದೂರು ಗ್ರಾಪಂ 1 ಸಾಮಾನ್ಯ ವರ್ಗ ಸ್ಥಾನ, ದುದ್ದ ಗ್ರಾಪಂ ಸೌದೇನಹಳ್ಳಿ ಕ್ಷೇತ್ರದ ಹಿಂದುಳಿದ ವರ್ಗ-ಅ 1 ಸ್ಥಾನ, ಮಂಡ್ಯ ಗ್ರಾಮಾಂತರ ಗ್ರಾಪಂ ತಂಡಸನಹಳ್ಳಿ ಕ್ಷೇತ್ರದ ಹಿಂದುಳಿದ ವರ್ಗ-ಅ 1 ಸ್ಥಾನ, ಮದ್ದೂರು ತಾಲೂಕಿನ ಕೊಪ್ಪ ಗ್ರಾಪಂನ ಕೊಪ್ಪ ಕ್ಷೇತ್ರದ ಹಿಂದುಳಿದ ವರ್ಗ-ಅ 1 ಸ್ಥಾನ, ಕದಲೂರು ಗ್ರಾಪಂನ ಕದಲೂರು ಕ್ಷೇತ್ರದ ಸಾಮಾನ್ಯ ವರ್ಗದ ಪುರುಷ ಹಾಗೂ ಮಹಿಳಾ ಮೀಸಲಿನ ತಲಾ 1 ಸ್ಥಾನ, ಅಣ್ಣೂರು ಗ್ರಾಪಂನ ಅಣ್ಣೂರು ಕ್ಷೇತ್ರದ ಹಿಂದುಳಿದ ವರ್ಗ-ಅ 1 ಸ್ಥಾನ, ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಪಂನ ಕುರಹಟ್ಟಿ ಕ್ಷೇತ್ರದ ಅನುಸೂಚಿತ ಪಂಗಡ ಮಹಿಳಾ ಮೀಸಲು 1 ಸ್ಥಾನ, ಟಿ.ಎಸ್‌.ಛತ್ರ ಗ್ರಾಪಂನ ತಿರುಮಲಾಪುರ ಕ್ಷೇತ್ರದ ಹಿಂದುಳಿದ ವರ್ಗ-ಅ 1 ಸ್ಥಾನ, ಕೆ.ಆರ್‌.ಪೇಟೆ ತಾಲೂಕಿನ ಅಕ್ಕಿಹೆಬ್ಟಾಳು ಗ್ರಾಪಂನ ಹೊಸದಡದಹಳ್ಳಿ ಕ್ಷೇತ್ರದ ಅನುಸೂಚಿತ ಜಾತಿ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next