Advertisement

ಭೀಮಾ ತೀರದಲ್ಲಿ ಮತ್ತೊಂದು ಮರ್ಡರ್‌;ಗ್ರಾ.ಪಂ ಅಧ್ಯಕ್ಷನ ಬರ್ಬರ ಹತ್ಯೆ

04:19 PM Oct 10, 2018 | Team Udayavani |

ಸಿಂದಗಿ : ಭೀಮಾ ತೀರದಲ್ಲಿ  ಮತ್ತೊಂದು ಹತ್ಯೆ ನಡೆದಿದ್ದು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ಯುವ ರಾಜಕಾರಣಿಯೊಬ್ಬರನ್ನು ಬುಧವಾರ ಹಾಡಹಗಲೇ ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. 

Advertisement

ಸಂಗಠಾಣಾ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿರುವ 26 ವರ್ಷದ ಗೊಲ್ಲಾಳಪ್ಪ ಬಸವಂತರಾಯ ಹದಗಲ್‌ ಅವರು ಹತ್ಯೆಗೀಡಾವರು. 

ಖಾನಾವಳಿಯಲ್ಲಿ ಊಟ ಮುಗಿಸಿ ಬರುತ್ತಿದ್ದ ವೇಳೆ ಬಸವೇಶ್ವರ ಸರ್ಕಲ್‌ನಲ್ಲಿ ಹೊಂಚು ಹಾಕಿ ಕುಳಿತಿದ್ದ ನಾಲ್ವರು ದುಷ್ಕರ್ಮಿಗಳ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ಸ್ಥಳದಲ್ಲೇ ಗೊಲ್ಲಾಳಪ್ಪ ಕೊನೆಯುಸಿರೆಳೆದಿದ್ದಾರೆ. 

ಗೊಲ್ಲಾಳಪ್ಪ 2 ನೇ ಬಾರಿ ಪಂಚಾಯತ್‌ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ. 

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ. 

Advertisement

ಸಿಂದಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next