Advertisement

ಗ್ರಾಮ ಪಂಚಾಯತ್‌ ಪ್ರಥಮ ಹಂತದ ಚುನಾವಣೆ: ದ.ಕ.: 3,854, ಉಡುಪಿ: 2,349 ಅಭ್ಯರ್ಥಿಗಳು

11:37 PM Dec 15, 2020 | mahesh |

ಮಂಗಳೂರು/ಉಡುಪಿ: ಗ್ರಾಮ ಪಂಚಾಯತ್‌ಗೆ ಡಿ. 22ರಂದು ನಡೆಯುವ ಪ್ರಥಮ ಹಂತದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,058 ಸಾಮಾನ್ಯ ಹಾಗೂ 1,796 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 3,854 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,241 ಸಾಮಾನ್ಯ ಮತ್ತು 1,108 ಮಹಿಳೆಯರು ಸೇರಿದಂತೆ 2,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

ಪ್ರಥಮ ಹಂತದಲ್ಲಿ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕುಗಳ 106 ಗ್ರಾ.ಪಂ.ಗಳ 1,681 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಇದರಲ್ಲಿ 50 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದಂತೆ 1,631 ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದು. ಉಡುಪಿ, ಹೆಬ್ರಿ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳ 67 ಗ್ರಾ.ಪಂ.ಗಳ 1,122 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ 63 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದಂತೆ 1,047 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮಂಗಳೂರು ತಾಲೂಕಿನಲ್ಲಿ 37 ಗ್ರಾ.ಪಂ.ಗಳ 651 ಸ್ಥಾನಗಳ ಪೈಕಿ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು 623 ಸ್ಥಾನಗಳಿಗೆ ಚುನಾವಣೆ ಜರಗಲಿರುವುದು. ಮೂಡುಬಿದಿರೆಯ 12 ಗ್ರಾ.ಪಂ.ಗಳ 193 ಸ್ಥಾನಗಳಲ್ಲಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು 186 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ 837 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಅವಿರೋಧ ಆಯ್ಕೆಗೊಂಡಿದ್ದು 822 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಉಡುಪಿ ತಾಲೂಕಿನ 16 ಗ್ರಾ.ಪಂ.ಗಳ
329 ಸ್ಥಾನಗಳಲ್ಲಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು 320 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೆಬ್ರಿ ತಾಲೂಕಿನ 9 ಗ್ರಾ.ಪಂ.ಗಳ 122 ಸ್ಥಾನಗಳಲ್ಲಿ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು 115 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳ 259 ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು 251 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬ್ರಹ್ಮಾವರ ತಾಲೂಕಿನ 27 ಗ್ರಾ.ಪಂ.ಗಳ 412 ಸ್ಥಾನ ಗಳಲ್ಲಿ 39 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು 361 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ದ.ಕ. ಜಿಲ್ಲೆಯಲ್ಲಿ ಅನುಸೂಚಿತ ಜಾತಿ
ಯಲ್ಲಿ 238, ಅನುಸೂಚಿತ ಪಂಗಡದಲ್ಲಿ 215 ಹಾಗೂ ಹಿಂದುಳಿದ ಅ ವರ್ಗದಲ್ಲಿ 958, ಹಿಂದುಳಿದ ಬಿ ವರ್ಗದಲ್ಲಿ 226 ಹಾಗೂ ಸಾಮಾನ್ಯದಲ್ಲಿ 2,217 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅನುಸೂಚಿತ ಜಾತಿಯಲ್ಲಿ 149, ಅನುಸೂಚಿತ ಪಂಗಡದಲ್ಲಿ 182, ಹಿಂದುಳಿದ ಅ ವರ್ಗದಲ್ಲಿ 543, ಹಿಂದುಳಿದ ಬ ವರ್ಗದಲ್ಲಿ 132, ಸಾಮಾನ್ಯದಲ್ಲಿ 1,343 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

2015ರಲ್ಲಿ 78 ಮಂದಿ ಆವಿರೋಧ ಆಯ್ಕೆ
2015ರ ಗ್ರಾ.ಪಂ. ಚುನಾವಣೆಯಲ್ಲಿ ಮೂಡಬಿದಿರೆಯನ್ನೊಳಗೊಂಡ ಮಂಗಳೂರು ತಾಲೂಕಿನಲ್ಲಿ 44 ಹಾಗೂ ಹಾಗೂ ಬಂಟ್ವಾಳ ತಾಲೂಕಿನಲ್ಲಿ 34 ಸೇರಿ ಒಟ್ಟು 78 ಮಂದಿ ಅವಿರೋಧ ಆಯ್ಕೆಯಾಗಿದ್ದರು. ಬ್ರಹ್ಮಾವರ ತಾಲೂಕಿನ 12 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next