ಕೋಲಾರ: ಜಿಲ್ಲೆಯ 156 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ,ಮಾಲೂರು ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿಡಿ.22 ಮತ್ತು ಮುಳಬಾಗಿಲು, ಬಂಗಾರಪೇಟೆ,ಕೆಜಿಎಫ್ ತಾಲೂಕಿನಲ್ಲಿ 27ರಂದು ಮತದಾನ ನಡೆಯಲಿದೆ.ಡಿ.30ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು
ಮೊದಲ ಹಂತದ ಚುನಾವಣೆ ಡಿ.11 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಹಿಂಪಡೆಯಲು 14ಕೊನೆಯ ದಿನವಾಗಿದೆ, ಎರಡನೆ ಹಂತದ ಚುನಾವಣೆಗೆ ಡಿ.16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಹಾಗೂ ಡಿ 19 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ ಇಂದಿನಿಂದ ಜಿಲ್ಲೆಯ ಗ್ರಾಮೀಣಪ್ರದೇಶಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದರು.
ಡಿ. 7 ರಂದು ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. 2789 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. 2ನೇ ಹಂತದಲ್ಲಿ 67 ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ 44,1885 ಪುರುಷರು 43,6851 ಮಹಿಳೆಯರು 52 ಇತರೆ ಸೇರಿದಂತೆ ಒಟ್ಟು 8,78,788 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವರು ಎಂದರು. ಜಿಲ್ಲೆಯಲ್ಲಿ ಎರಡೂ ಹಂತದಲ್ಲಿ ಚುನಾವಣೆ ನಡೆಸಲು 156 ಗ್ರಾಪಂಗಳಿಗೆ 156 ಚುನಾವಣಾಧಿಕಾರಿಗಳನ್ನು ಹಾಗೂ 160 ಸಹಾಯಕ ಚುನಾವಣಾಧಿಕಾರಿಗಳನ್ನುನೇಮಿಸಲಾಗಿದ್ದು, ಆಯಾ ಗ್ರಾಪಂ ಕಚೇರಿಗಳಲ್ಲಿ ನಾಮಪತ್ರಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ 1,573ಮತಗಟ್ಟೆಗಳಿಗೆ7ಸಾವಿರಮಂದಿಮತದಾನದ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು.
ಕೋವಿಡ್ ಸಂದರ್ಭವಾಗಿರುವ ಕಾರಣ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗುವುದು.ಪಕ್ಷದ ಚಿಹ್ನೆಗಳು ಇರುವುದಿಲ್ಲ, ನೋಟಾ ಮತದಾನಕ್ಕೆಅವಕಾಶವಿಲ್ಲ, ಯಾವುದಾದರೂ ದೂರುಗಳು ಇದ್ದರೆ ಅಯಾ ಭಾಗದ ತಹಶೀಲ್ದಾರ್ ಕಚೇರಿಯಲ್ಲಿ ದೂರು ಸಲ್ಲಿಬಹುದು ಎಂದರು.