Advertisement

ಅಂತಿಮ ಕಣದಲ್ಲಿ 5,290 ಅಭ್ಯರ್ಥಿಗಳು

07:10 PM Dec 16, 2020 | Suhan S |

ಚಿಕ್ಕಮಗಳೂರು: ಗ್ರಾಪಂ ಚುನಾವಣೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ವಾಪಸ್‌ ಪಡೆದುಕೊಳ್ಳುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ ಡಿ.22ರಂದು ಒಂದೇ ಹಂತದಲ್ಲಿ ಗ್ರಾಪಂ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 5,290 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

Advertisement

209 ಗ್ರಾಪಂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 2139 ಸ್ಥಾನಗಳಲ್ಲಿ 107 ಸ್ಥಾನಗಳಿಗೆ ಅವಿರೋಧಆಯ್ಕೆ ನಡೆದಿದೆ. 1,893 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 5,290 ಜನರು ನಾಮಪತ್ರಗಳು ಸಿಂಧುಗೊಂಡಿದ್ದು ಚುನಾವಣೆ ಎದುರಿಸಲಿದ್ದಾರೆ. 110 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಕೊನೆಯ ದಿನ 1,176 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ಅಜ್ಜಂಪುರ ತಾಲೂಕಿನ 24 ಗ್ರಾಪಂಗಳಲ್ಲಿ 223 ಸ್ಥಾನಗಳಿಗೆ ಚುನಾವಣೆನಡೆಯುತ್ತಿದ್ದು, 37 ಸ್ಥಾನಗಳಿಗೆಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 185 ಸ್ಥಾನಗಳಿಗೆ ಚುನಾವಣೆನಡೆಯಲಿದೆ. 205 ನಾಮಪತ್ರಗಳನ್ನುಹಿಂತೆಗೆದುಕೊಳ್ಳಲಾಗಿದೆ. ಒಂದು ಸ್ಥಾನಕ್ಕೆಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಚಿಕ್ಕಮಗಳೂರು ತಾಲೂಕಿನ 41 ಗ್ರಾಪಂನ 432 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 14 ಸ್ಥಾನಗಳಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 348 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

137 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡಿದ್ದಾರೆ. 70 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಕಡೂರು ತಾಲೂಕಿನ 49 ಗ್ರಾಪಂಗಳ 497 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 34 ಸ್ಥಾನಗಳಿಗೆಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 460 ಸ್ಥಾನಗಳಿಗೆಚುನಾವಣೆ ನಡೆಯಲಿದೆ. ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 278 ನಾಮಪತ್ರಗಳನ್ನು ಕಡೆಯ ದಿನ ವಾಪಸ್‌ ತಗೆದುಕೊಳ್ಳಲಾಗಿದೆ. ಕೊಪ್ಪ ತಾಲೂಕಿನ 21 ಪಂಚಾಯತ್‌ 193 ಸ್ಥಾನಗಳಲ್ಲಿ 2 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು,189 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.97 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ 26 ಗ್ರಾಪಂಗಳ 281 ಸ್ಥಾನಗಳಲ್ಲಿ, 4 ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. 244 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು,8 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 185 ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್‌ ಪಡೆದಿದ್ದಾರೆ. ಎನ್‌.ಆರ್‌.ಪುರ ತಾಲೂಕಿನ 14 ಪಂಚಾಯತ್‌ಗಳ 154 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2 ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದ್ದು, 124 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 28 ಸ್ಥಾನಗಳಿಗೆ ಯವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 60 ಅಭ್ಯರ್ಥಿಗಳು ಕೊನೆಯ ದಿನ ಹಿಂದೆ ಸರಿದಿದ್ದಾರೆ.

Advertisement

ಶೃಂಗೇರಿ ತಾಲೂಕಿನ 9 ಪಂಚಾಯತ್‌ಗಳ86 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 86 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. 35 ಜನರು ಕಣದಿಂದ ಹಿಂದೆ ಸರಿದ ಕಾರಣ ನಾಮಪತ್ರ ವಾಪಸ್‌ ಪಡೆದಿದ್ದಾರೆ. ತರೀಕೆರೆ ತಾಲೂಕಿನ 25 ಪಂಚಾಯತ್‌ ಗಳ 273 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 257 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 179 ಜನರು ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಹಲವು ಗ್ರಾಪಂಗಳ 110 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಕಸ್ತೂರಿ ರಂಗನ್‌ ವರದಿ, ಹುಲಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಸಮಾಧಾನ ಉಂಟಾದ ಪರಿಣಾಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಗ್ರಾಪಂಚುನಾವಣೆ ಬಹಿಷ್ಕರಿಸಿದ ಹಿನ್ನೆಲೆ ಸೇರಿದಂತೆ ಜಿಲ್ಲೆಯ ಕಡೂರು, ತರೀಕೆರೆ ಭಾಗದಲ್ಲೂ ಕೆಲ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next