Advertisement

ಹಳ್ಳಿ ಕಟ್ಟೆಗಳಲ್ಲಿ ಪಂಚಾಯತ್‌ ಚುನಾವಣೆ ಚರ್ಚೆ

07:14 PM Dec 11, 2020 | Suhan S |

ತರೀಕೆರೆ: ಇತ್ತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಖಾಡ ಸಿದ್ಧಗೊಳ್ಳುತ್ತಿದ್ದಂತೆ, ಚುನಾವಣೆಯಲ್ಲಿ ತಮ್ಮ ಭವಿಷ್ಯ ಪರೀಕ್ಷಿಸಲು ಸಿದ್ಧರಾಗುತ್ತಿದ್ದಾರೆ. ಗ್ರಾಪಂಗಳಲ್ಲಿ ನಾಮಪತ್ರ ಸಲ್ಲಿಸುವ ಭರಾಟೆ ಜೋರಾಗಿ ನಡೆಯುತ್ತಿದೆ. ಚುನಾವಣೆಯಲ್ಲಿ ಯಾರು ಸ್ಪ ರ್ಧಿಸಿದರೆ ಗೆಲ್ಲುತ್ತಾರೆ ಎನ್ನುವ ಲೆಕ್ಕಚಾರಗಳು ಹಳ್ಳಿಗಳಪಂಚಾಯತಿ ಕಟ್ಟೆಗಳಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

Advertisement

ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಗೆಲ್ಲಬೇಕು ಎನ್ನುವ ಹುಮ್ಮಸ್ಸಿನಲ್ಲಿ ಅಭ್ಯರ್ಥಿಗಳುಈಗಾಗಲೇ ಮತದಾರರ ಮನವೊಲಿಸುವಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಹಂತದಲ್ಲಿ ಮಂಕಾದಂತೆ ಕಂಡ ಚುನಾವಣಾಕಣ ಈಗ ರಂಗೇರುತ್ತಿದೆ. ಜಾತಿ ಸಮೀಕರಣ,ರಾಜಕೀಯ ಪಕ್ಷದೊಳಗಿನ ಒಡನಾಟ ಎಲ್ಲವೂಸದ್ದಿಲ್ಲದೆ ನಡೆಯುತ್ತಿದೆ. ರಾಜಕೀಯ ಪಕ್ಷಗಳಚಿಹ್ನೆ ಇಲ್ಲದ ಚುನಾವಣೆಯಾಗಿದ್ದರೂ ಸಹ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಚುನಾವಣೆಗೆ ಸ್ಪರ್ಧಿಸಲು ಸಜ್ಜುಗೊಳಿಸುತ್ತಿವೆ. ಅಲ್ಲಲ್ಲಿ ರಾಜಕೀಯ ಪಕ್ಷಗಳ ಸಭೆ ನಡಯುತ್ತಿದೆ.

ನ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಜಾತಿ ಮತ್ತು ಆದಾಯಪ್ರಮಾಣ ಪತ್ರ ಪಡೆಯಲು ಚುನಾವಣಾಆಕಾಂಕ್ಷಿಗಳು ತಾಲೂಕು ಕಚೇರಿಯಮುಂಭಾಗದಲ್ಲಿ ಜಮಾಯಿಸಿದ್ದಾರೆ.ಇದಕ್ಕಾಗಿಯೇ ವಿಶೇಷವಾದ ಕೌಂಟರ್‌ತೆರೆದು ಅರ್ಜಿಗಳನ್ನು ಸ್ವೀಕರಿಸಿ ಆಕಾಂಕ್ಷಿಗಳಿಗೆಪ್ರಮಾಣ ಪತ್ರ ನೀಡಲಾಗುತ್ತಿದೆ. ಜಾತಿಪ್ರಮಾಣ ಪತ್ರ ಪಡೆಯಲು ಹಲವಾರುರೀತಿಯ ದಾಖಲೆಗಳನ್ನು ಕೇಳುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಏಕಕಾಲಕ್ಕೆ ನೀಡುವುದು ಕಷ್ಟಕರವಾದ ಕೆಲಸ.ನಮ್ಮ ತಾಲೂಕಿನ ಚುನಾವಣೆ ಎರಡನೇ ಹಂತದಲ್ಲಿ ನಡೆಯುವುದೆಂದು ಎಂದು ಭಾವಿಸಿದ್ದೆವು. ಆದರೆ ಚುನಾವಣಾ ಆಯೋಗ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದ್ದು ನಾವು ದಾಖಲೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದನಮಗೆ ಅನ್ಯಾಯವಾಗುತ್ತಿದೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next