ದೇವದುರ್ಗ: ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜಾತಿ ಪ್ರಮಾಣ ಪತ್ರ, ಮಿನಿ ವಿಧಾನಸೌಧ ಇ-ಸ್ಪಾಂಪಿಂಗ್ ಅಂಗಡಿಗಳ ಮುಂದೆ ಮುಗಿಬಿದ್ದ ಸ್ಪರ್ಧೆ ಆಕಾಂಕ್ಷಿಗಳು ಛಾಪಾ ಕಾಗದ ಪಡೆಯಲು ಪರದಾಡುವಂತಾಗಿದೆ.
28 ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಹೆಚ್ಚಿರುವಕಾರಣ ಛಾಪಾ ಕಾಗದ ಪಡೆಯಲುಸಂಜೆವರೆಗೆ ಹರಸಾಹಸ ಪಡುವಂತಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಜಾತಿ ಪ್ರಮಾಣ ಪತ್ರ ಸೌಲಭ್ಯಕ್ಕಾಗಿ ಮುಗಿಬಿದ್ದ ದೃಶ್ಯ ಸಾಮಾನ್ಯ ಎಂಬಂತಾಗಿದೆ. ಮಿನಿ ವಿಧಾನಸೌಧ ಒಳಗೆ ಹೊರಗಡೆಜನಜಂಗುಳಿ ಡಿ.11ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದರಿಂದಆದಷ್ಟು ಬೇಗ ದಾಖಲಾತಿ ಸೌಲಭ್ಯಗಳು ಪಡೆಯಲು ಆಕಾಂಕ್ಷಿಗಳು ಎದ್ದುಬಿದ್ದುಅಲೆದಾಡುವಂತಾಗಿದೆ.
ಆನ್‌ಲೈನ್ ವಿದ್ಯುತ್ ಸಮಸ್ಯೆ: ಚುನಾವಣೆ ನಿಮಿತ್ತ ಜಾತಿ ಪ್ರಮಾಣಪತ್ರ ಕೈಬರಹ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಗಳು ಝರಾಕ್ಸ್ ಮಾಡಿಸಲು ವಿದ್ಯುತ್ ಸಮಸ್ಯೆ ಬಿಸಿ ತಟ್ಟಿದೆ. ಮಿನಿವಿಧಾನಸೌಧ ಸುತ್ತಲೂ ಹತ್ತಾರುಝರಾಕ್ಸ್ ಅಂಗಡಿಗಳು ಇದ್ದು, ಎಲ್ಲೆಂದರಲ್ಲಿ ಮುಗಿಬಿದ್ದು ದೃಶ್ಯ ಸಾಮಾನ್ಯವಾಗಿದೆ. ಇ-ಸ್ಪಾಂಪಿಂಗ್ ಆನ್ ಲೈನ್ ಮೂಲಕ ಪಡೆಯಬೇಕು. ಆಗಾಗನೆಟೆವರ್ಕ್ ಸಮಸ್ಯೆ ಎದುರಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಅಂಗಡಿಗಳ ಮುಂದೆ ಸರದಿ ಸಾಲು ನಿಲ್ಲಬೇಕು. ವಿದ್ಯುತ್, ನೆಟ್‌ವರ್ಕ್ ಸಮಸ್ಯೆ ಹಿನ್ನೆಲೆ ಬಹುತೇಕ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.
ಝರಾಕ್ಸ್‌ಗೆ ಡಿಮ್ಯಾಂಡ್: ಗ್ರಾಪಂ ಚುನಾವಣೆಗೆ ದಾಖಲಾತಿ ಪ್ರತಿಗಳು ಝರಾಕ್ಸ್ ಮಾಡಿಸಲು ಅಂಗಡಿಮಾಲೀಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ವಿದ್ಯುತ್ ಸ್ಥಗಿತಗೊಂಡಾಗ ಬ್ಯಾಟರಿ ಮೂಲಕ ಝರಾಕ್ಸ್‌ಗೆ ಒಂದು ಪ್ರತಿಗೆ 5 ರೂ. ಪಡೆಯಲಾಗುತ್ತಿದೆ. ನಾಮಪತ್ರ ಸಲ್ಲಿಸಲು ಎರಡ್ಮೂರುದಿನ ಬಾಕಿ ಈರುವಾಗಲೇಆಕಾಂಕ್ಷಿಗಳು ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ಝರಾಕ್ಸ್ ಮಾಡಿಸಿಕೊಳ್ಳಬೇಕಾಗಿದೆ. ಹೀಗಾಗಿ ಝರಾಕ್ಸ್ ಅಂಗಡಿ ಮಾಲೀಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ಕೊಪ್ಪರು ಗ್ರಾಮದ ಸ್ಪರ್ಧೆ ಆಕ್ಷಾಂಕ್ಷಿ ಹನುಮಂತ ತಿಳಿಸಿದರು.