ಮೈಸೂರು: ಜಿಲ್ಲೆಯ 5 ತಾಲೂಕುಗಳಿಗೆ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಡಿ.22ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಪಿರಿಯಾ ಪಟ್ಟಣ, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳ ಒಟ್ಟು 148 ಗ್ರಾಮ ಪಂಚಾಯಿತಿಗಳಿಗೆ 22ರಂದುಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದೆ. 5 ತಾಲೂಕುಗಳ ಒಟ್ಟು 148 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 949 ಕ್ಷೇತ್ರಗಳಿಂದ 2303 ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದೆ. ಇದರಲ್ಲಿ 123 ಸದಸ್ಯ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಹೀಗಾಗಿ 2180 ಸದಸ್ಯ ಸ್ಥಾನಗಳಿಗೆ ಪ್ರಸ್ತುತ ಚುನಾವಣೆ ನಡೆಯಲಿದ್ದು,6165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
1,148 ಮತಗಟ್ಟೆ ಸ್ಥಾಪನೆ: ಮತದಾನ ಯಾವುದೇ ಅಡೆತಡೆ ಇಲ್ಲದೆ ನಡೆಯುವ ಸಲುವಾಗಿ 1,148 ಮತಗಟ್ಟೆ ಸ್ಥಾಪಿಸಲಾಗಿದೆ. ಹುಣಸೂರಿನಲ್ಲಿ 293, ಕೆ.ಆರ್.ನಗರದಲ್ಲಿ 280, ಪಿರಿಯಾಪಟ್ಟಣದಲ್ಲಿ 260, ಎಚ್.ಡಿ.ಕೋಟೆಯಲ್ಲಿ 217, ಸರಗೂರು ತಾಲೂಕಿನಲ್ಲಿ 98 ಮತಗಟ್ಟೆ ಸೇರಿದಂತೆ 148 ಗ್ರಾಪಂಗಳಿಂದ 1148 ಮತಗಟ್ಟೆ ಸ್ಥಾಪಿಸಲಾಗಿದೆ. ಇದರಲ್ಲಿ 174 ಆಕ್ಸಿಲರಿ ಮತಗಟ್ಟೆಗಳು ಸೇರಿವೆ. ಮೊದಲನೇ ಹಂತದ ಚುನಾವಣೆಯಲ್ಲಿ ಈ ಮೇಲ್ಕಂಡ ಪೈಕಿ ಅವಿರೋಧ ಆಯ್ಕೆ , ನಾಮಪತ್ರ ಸಲ್ಲಿಕೆಯಾಗದೇ ಇರುವಕ್ಷೇತ್ರಗಳಿಗೆ ಸಂಬಂಧಿಸಿದ ಮತಗಟ್ಟೆ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಮಾತ್ರ ಮತದಾನ ನಡೆಯಲಿದೆ.
5052 ಮತದಾನಾಧಿಕಾರಿಗಳು ನೇಮಕ: 148 ಗ್ರಾಪಂಗಳ 1148 ಮತಗಟ್ಟೆಗಳಿಗೆ ಒಟ್ಟು 5052 ಅಧಿಕಾರಿ, ಸಿಬ್ಬಂದಿಯನ್ನು ಮತಗಟ್ಟೆ ಅಧಿಕಾರಿಗಳನ್ನಾಗಿನೇಮಿಸಲಾಗಿದೆ.ಮೊದಲನೇಮತದಾನಾಧಿಕಾರಿಗಳನ್ನುಅವರು ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕುಗಳಲ್ಲೇ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂರು ಅಥವಾ ನಾಲ್ಕು ಮತ ದಾನಾಧಿಕಾರಿಗಳಂತೆ ನೇಮಕ ಮಾಡಲಾಗಿದೆ. ಚುನಾವಣೆಯ ಇನ್ನಿತರ ಕೆಲಸಗಳ ನಿರ್ವಹಣೆಗೆ ಕಂದಾಯ ಇಲಾಖಾ ನೌಕರರನ್ನು ಸಹ ತೊಡಗಿಸಿಕೊಳ್ಳಲಾಗಿದೆ. ಈ ಸಿಬ್ಬಂದಿ ಮಸ್ಪರಿಂಗ್ ದಿನದಂದು ಬೆಳಗ್ಗೆ 7 ಗಂಟೆಗೆ ಮೈಸೂರು ತಾಲೂಕು ಕಚೇರಿಯಲ್ಲಿ ಹಾಜರಿರಬೇಕು. ಮೊದಲನೇ ಹಂತದ ಚುನಾವಣೆ ಸಂಬಂಧ ಮತಗಟ್ಟೆ ಸಿಬ್ಬಂದಿ ಯನ್ನು ಮತಗಟ್ಟೆಗಳಿಗೆ ಕಳುಹಿಸಲು ಹಾಗೂ ಕರೆತರಲು 176 ಕೆಎಸ್‌ಆರ್‌ಟಿಸಿ ಬಸ್‌ಗಳು, 17 ಮಿನಿ ಬಸ್, ಮ್ಯಾಕ್ಸಿ ಕ್ಯಾಬ್ ಹಾಗೂ 7 ಜೀಪ್ ಗಳನ್ನು ಬಳಸಿಕೊಳ್ಳಲಾಗಿದೆ.
ಮಸ್ಟರಿಂಗ್, ಡಿ.ಮಸ್ಟರಿಂಗ್ ವ್ಯವಸ್ಥೆ: ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್,ಡಿ. ಮಸ್ಟರಿಂಗ್ ಕೇಂದ್ರಗಳನ್ನುಸ್ಥಾಪಿಸಲಾಗಿದೆ. ಮಸ್ಟರಿಂಗ್ ಕೇಂದ್ರವೇ ಡಿ-ಮಸ್ಟರಿಂಗ್ ಕೇಂದ್ರವಾಗಿರುತ್ತದೆ. ಹುಣಸೂರಿನಲ್ಲಿ ಸಂತ ಜೋಸೆಫರ ವಿದ್ಯಾಸಂಸ್ಥೆ, ಕೆ.ಆರ್.ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್, ಹೆಗ್ಗಡದೇವನಕೋಟೆಯ ಸೇಂಟ್ ಮೇರಿಸ್ ಪ್ರೌಢ ಶಾಲೆ, ಸರಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಡಿ.ಮಸ್ಟರಿಂಗ್ ಈ ಬಾರಿ ಮತ ದಾರರಿಗೆ ಎಡಗೈನ ಹೆಬ್ಬರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುತ್ತದೆ. ಗ್ರಾಮ ಪಂಚಾಯಿತಿಯ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆ ಮಾಡಬೇಕಾದ ಸದಸ್ಯರ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ. ಈ ಬಗ್ಗೆ ಒಬ್ಬ ಮತದಾರನಿಗೆ ಎಷ್ಟು ಮತಗಳಿವೆ ಎಂಬುದನ್ನು ತಿಳಿಸುವ ಸೂಚನೆಯ ಪೋಸ್ಟರ್ ಅನ್ನು ಮತಗಟ್ಟೆಯ ಪ್ರವೇಶದ್ವಾರದಲ್ಲಿ ಹಾಕಲಾಗಿರುತ್ತದೆ.