Advertisement

5ಕ್ಕಿಂತ ಹೆಚ್ಚು ಮಂದಿ ಪ್ರಚಾರಕ್ಕೆ ಹೋಗುವಂತಿಲ್ಲ !

07:25 AM Dec 05, 2020 | mahesh |

ಮಂಗಳೂರು: ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷರಹಿತವಾಗಿ ನಡೆಯುವುದರಿಂದ ಅಭ್ಯರ್ಥಿಗಳು ಚುನಾವಣ ಪ್ರಚಾರದಲ್ಲಿ ಪಕ್ಷದ ಚಿಹ್ನೆ ಬಳಸಲು ನಿರ್ಬಂಧವಿದ್ದರೆ, ಅತ್ತ ರಾಜಕೀಯ ನಾಯಕರ ಭಾವಚಿತ್ರಗಳನ್ನು ಉಪಯೋಗಿಸಿ ಕೂಡ ಪ್ರಚಾರ ನಡೆಸುವಂತಿಲ್ಲ. ಇನ್ನೊಂದೆಡೆ ಕೊರೊನಾ ಮಾರ್ಗಸೂಚಿಯನ್ವಯ ಮನೆ-ಮನೆ ಪ್ರಚಾರದ ವೇಳೆ ಗರಿಷ್ಠ 5 ಮಂದಿ ಮಾತ್ರ ಇರಲು ಅವಕಾಶ ನೀಡಲಾಗಿದೆ.

Advertisement

ಚುನಾವಣೆ ಆಯೋಗ ಹೊರಡಿಸಿರುವ ನೀತಿ ಸಂಹಿತೆಯನ್ವಯ ಯಾವುದೇ ಅಭ್ಯರ್ಥಿಯು ರಾಜಕೀಯ ನಾಯಕರ ಭಾವಚಿತ್ರ ಬಳಸಿಕೊಂಡು ಪ್ರಚಾರ ನಡೆಸಿದಲ್ಲಿ ಅಂತಹ ಕರಪತ್ರ, ಪೋಸ್ಟರ್‌ ಅಥವಾ ಇನ್ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದೆ.

ಮಾರ್ಗಸೂಚಿ ಪಾಲನೆ ಕಡ್ಡಾಯ
ಕೊರೊನಾ ಹಿನ್ನಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದ್ದು ಇದರನ್ವಯ ಗುಂಪು, ಗುಂಪಾಗಿ ಚುನಾವಣ ಪ್ರಚಾರ ನಡೆಸುವಂತಿಲ್ಲ. ಕಡಿಮೆ ಬೆಂಬಲಿಗರೊಂದಿಗೆ ಗರಿಷ್ಠ ಐದು ಮಂದಿಗೆ
ಸೀಮಿತಗೊಳಿಸಿ ಸಾಮಾಜಿಕ ಅಂತರ ಕಾಯ್ದು
ಕೊಂಡು ಮನೆ-ಮನೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರ ಸಂದರ್ಭ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಫೇಸ್‌ಮಾಸ್ಕ್ ಧರಿಸಿರ
ಬೇಕು. ಕರಪತ್ರಗಳನ್ನು ಹಂಚುವವರು ಕಡ್ಡಾಯವಾಗಿ ಫೇಸ್‌ಮಾಸ್ಕ್ ಹ್ಯಾಂಡ್‌ಗ್ಲೌಸ್‌ ಧರಿಸಬೇಕು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಉಪಯೋಗಿಸಬೇಕು. ಸಭೆ ಸಮಾರಂಭಗಳನ್ನು ತಮ್ಮ ಕ್ಷೇತ್ರಗಳಲ್ಲಿ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ಮಾಡಲು ಅವಕಾಶವಿದೆ. ಕೊರೊನಾ ಪಾಸಿಟಿವ್‌ ಇರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರಚಾರ ನಡೆಸಬಹುದು. ಖುದ್ದಾಗಿ ಪ್ರಚಾರ ಮಾಡಲು ಅವಕಾಶವಿಲ್ಲ.

ಬೆಂಬಲಿತ ಅಭ್ಯರ್ಥಿಗಳು
ಚುನಾವಣೆಯಲ್ಲಿ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಕಾರ್ಯ
ಕರ್ತರೇ ಆಗಿದ್ದು, ಬೆಂಬಲಿತ ಅಭ್ಯರ್ಥಿಗಳಾಗಿ ಚುನಾವಣ ಕಣಕ್ಕಿಳಿಯುತ್ತಾರೆ. ಪ್ರಥಮ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಡಿ. 7ರಿಂದ ಆರಂಭಗೊಂಡು, ಡಿ. 11ರ ವರೆಗೆ ಅವಕಾಶವಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಹೆಸರು ಡಿ.8ರ ವೇಳೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಸೋಂಕಿತರಿಗೆ
ಕೊನೆಯಲ್ಲಿ ಅವಕಾಶ
ಚುನಾವಣೆಯಲ್ಲಿ ಕೋವಿಡ್‌ ಸೋಂಕಿತರು ಹಾಗೂ ಕೋವಿಡ್‌ ಶಂಕಿತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಚುನಾವಣ ಆಯೋಗ ಅವಕಾಶ ಕಲ್ಪಿಸಿದೆ.

Advertisement

ಜಾಗೃತಿ ಅಗತ್ಯ
ಗ್ರಾ. ಪಂ. ಚುನಾವಣೆಯಲ್ಲಿ ಯುವಜನತೆ ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಗತ್ಯ. ಸಾರ್ವತ್ರಿಕ ಚುನಾವಣೆಗಳ ಸಂದರ್ಭ ಆಯೋಗದ ವತಿಯಿಂದ ಸ್ವೀಪ್‌ ಕಾರ್ಯಕ್ರಮಗಳು ನಡೆಯುತ್ತವೆ. ಇಂತಹ ಕಾರ್ಯಕ್ರಮಗಳು ಗ್ರಾ. ಪಂ. ಚುನಾವಣೆಯಲ್ಲೂ ಅಳವಡಿಸಿದರೆ ಯುವಜನತೆಯಲ್ಲಿ ಮತದಾನದ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರಸ್ತುತ ಕೊರೊನಾ ಸನ್ನಿವೇಶದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಎಲೆಕ್ಟ್ರಾನಿಕ್ಸ್‌, ಮುದ್ರಣ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸ್ವೀಪ್‌ ಮಾದರಿಯ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.

ಕಟ್ಟುನಿಟ್ಟಿನ ನಿಗಾ
ಗ್ರಾ. ಪಂ. ಚುನಾವಣೆ ಹಿನ್ನಲೆಯಲ್ಲಿ ಚುನಾವಣ ಆಯೋಗದ ನೀತಿ ಸಂಹಿತೆ ಡಿ.30 ರಿಂದ ಜಾರಿಗೆ ಬಂದಿದ್ದು ಡಿ.31ರವರೆಗೆ ಅನುಷ್ಠಾನದಲ್ಲಿರುತ್ತದೆ. ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲಾಗುವುದು. ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡ ಇದರ ಮೇಲೆ ನಿಗಾ ಇರಿಸಲಿದೆ.
– ಡಾ| ಕೆ.ವಿ.ರಾಜೇಂದ್ರ, ದ.ಕ.ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next