Advertisement
ಬ್ರಹ್ಮಾವರ: ಹಳ್ಳಿಗಳಲ್ಲಿ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳ ಮೇಲೆ ಜನರ ಅವಲಂಬನೆ ಹೆಚ್ಚಿರುತ್ತದೆ. ಬಡ, ಮಧ್ಯಮ ವರ್ಗದವರು ಗರಿಷ್ಠ ಸಂಖ್ಯೆಯಲ್ಲಿರುವುದರಿಂದ ಸರಕಾರಿ ಸೌಲಭ್ಯಗಳ ಅಗತ್ಯವಿದೆ. ಹಕ್ಕುಪತ್ರ, ಪಡಿತರ, ಪಿಂಚಣಿಗಳನ್ನು ಸಮರ್ಪಕವಾಗಿ ದೊರಕಿಸಿ ಕೊಡುವವರಿಗೆ ನಮ್ಮ ಮತ ಎನ್ನುತ್ತಿದ್ದಾರೆ ಇಲ್ಲಿನ ಮತದಾರರು. ಬಿಜೆಪಿ ಸರಕಾರದ ಅವಧಿಯಲ್ಲಿ ಇಷ್ಟೆಲ್ಲ ಅಭಿವೃದ್ದಿ ಕಾಮಗಾರಿಗಳು ನಡೆದಿವೆ. ಮುಂದೆಯೂ ಇನ್ನಷ್ಟು ಕಾರ್ಯ ಮಾಡುತ್ತೇವೆ ಎನ್ನುವುದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಶ್ವಾಸನೆಯಾದರೆ, ಈ ಹಿಂದಿನ ಕಾಂಗ್ರೆಸ್ ಸರಕಾರದಿಂದ ಬಹಳಷ್ಟು ಸೌಲಭ್ಯ ದೊರೆತಿವೆ. ನಮ್ಮನ್ನು ಬೆಂಬಲಿಸಿ ಮತ್ತೂಮ್ಮೆ ಆರಿಸಿದರೆ ಮತ್ತಷ್ಟು ಸೌಲಭ್ಯ ಕಲ್ಪಿಸುವುದಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಭರವಸೆಯಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾ.ಪಂ.ಗಳಲ್ಲಿ ಇದೇ ತಂತ್ರಗಾರಿಕೆಯಲ್ಲಿ ಚುನಾವಣ ಪ್ರಚಾರ ನಡೆಯುತ್ತಿದೆ.
ಕರ್ಜೆ ಗ್ರಾ.ಪಂ.ನಲ್ಲಿ ಕಳೆದ ಬಾರಿ 12 ಸ್ಥಾನಗಳಲ್ಲಿ 9 ಕಾಂಗ್ರೆಸ್, 3 ಬಿಜೆಪಿ ಬೆಂಬಲಿತರು ಜಯಗಳಿಸಿದ್ದರು. ಕಳೂ¤ರು ಪಂಚಾಯತ್‌ನ 13ರಲ್ಲಿ 9 ಕಾಂಗ್ರೆಸ್, 4 ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಆ ಸ್ಥಾನ ಉಳಿಸಿ, ಮತ್ತಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಬೆಂಬಲಿತರ ಪ್ರಯತ್ನವಾದರೆ, ಹಾಲಿ ಸಂಖ್ಯೆ ಯನ್ನು ವೃದ್ಧಿಸುವುದು ಬಿಜೆಪಿ ಬೆಂಬಲಿತರ ಲೆಕ್ಕಾಚಾರ ಕೊಕ್ಕರ್ಣೆ ಅತಂತ್ರ ಸ್ಥಿತಿ ಕೊಕ್ಕರ್ಣೆ ಪಂಚಾಯತ್‌ನ 21 ಸ್ಥಾನಗಳಲ್ಲಿ ಕಳೆದ ಬಾರಿ 10 ಕಾಂಗ್ರೆಸ್, 11 ಬಿಜೆಪಿ ಬೆಂಬಲಿತರು ಜಯ ಗಳಿಸಿದ್ದರು. ಈ ಬಾರಿಯೂ ಈ ಎರಡೂ ಪಕ್ಷಗಳ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ ಸ್ಥಳೀಯರ ಪ್ರಮುಖ ಬೇಡಿಕೆ. ಹನೆಹಳ್ಳಿ: ಉಪ್ಪು ನೀರಿನ ಸಮಸ್ಯೆ ಹನೆಹಳ್ಳಿ ಗ್ರಾಮ ಪಂಚಾಯತ್‌ನ 11 ಸ್ಥಾನ ಗಳಲ್ಲಿ ಕಳೆದ ಬಾರಿ ಬಿಜೆಪಿಯ 7, ಕಾಂಗ್ರೆಸ್‌ನ 3 ಹಾಗೂ ಓರ್ವರು ಪಕ್ಷೇತರರು ಚುನಾಯಿತ ರಾಗಿದ್ದರು. ಈ ಬಾರಿಯೂ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಉಪ್ಪು ನೀರು ಹಾಗೂ ಕಲುಷಿತ ನೀರಿನ ಸಮಸ್ಯೆಯಿದ್ದು, ನವಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.
Related Articles
ಕಾಡೂರು ಗ್ರಾ.ಪಂ.ನಲ್ಲಿ ಕಳೆದ ಬಾರಿ ಎಲ್ಲ 11 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದಿ ದ್ದರು. ಈ ಬಾರಿ ರಾಜಿ ಸೂತ್ರ ಅನುಸರಿಸಿದರೂ ಆಮೇಲೆ ನಾಮಪತ್ರ ಸಲ್ಲಿಕೆಯಾಗಿ ಸ್ವಲ್ಪ ಮಟ್ಟಿನ ಗೊಂದಲ ನಿರ್ಮಾಣವಾಗಿದೆ. ಈ ಬಾರಿ ಹೊಸ ಮುಖಗಳು, ಪಕ್ಷೇತರ ಉಮೇದುವಾರರ ಸಂಖ್ಯೆಯೂ ಹೆಚ್ಚಿದೆ.
Advertisement
ನೆರೆ ಪೀಡಿತ ಉಪ್ಪೂರುಬಹುತೇಕ ನೆರೆಪೀಡಿತ ಪ್ರದೇಶಗಳನ್ನು ಉಪ್ಪೂರು ಗ್ರಾ.ಪಂ. ಒಳಗೊಂಡಿದೆ. 20 ಸ್ಥಾನ ಗಳಿರುವ ಪಂಚಾಯತ್‌ನಲ್ಲಿ ಕಳೆದ ಬಾರಿ 11ಬಿಜೆಪಿ, 9 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಈ ಬಾರಿಯೂ ಈ ಎರಡು ಪಕ್ಷಗಳ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆಂಬುದೇ ಇಲ್ಲಿನ ಜನರ ಪ್ರಮುಖ ಬೇಡಿಕೆ. ಹಾವಂಜೆ: ಬಂಡಾಯದ ಬಿಸಿ
10 ಸ್ಥಾನಗಳಿರುವ ಹಾವಂಜೆ ಗ್ರಾ.ಪಂ.ನಲ್ಲಿ ಕಳೆದ ಬಾರಿ 7 ಬಿಜೆಪಿ, 3 ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು.
ಈ ಬಾರಿ ಬಿಜೆಪಿ ಬೆಂಬಲಿತರಿಗೆ ಬಂಡಾಯದ ಬಿಸಿ ತಟ್ಟಿದೆ. ಸಂಪರ್ಕ ರಸ್ತೆಗಳ ಅಭಿವೃದ್ದಿ ಗ್ರಾಮಸ್ಥರ ಬೇಡಿಕೆಯಾಗಿದೆ. ನಾಲ್ಕೂರು ಏಕಸ್ವಾಮ್ಯ
ಕಳೆದ ಬಾರಿ ನಾಲ್ಕೂರು ಪಂಚಾಯತ್‌ನ 17 ಸ್ಥಾನಗಳಲ್ಲಿ 16ರಲ್ಲಿ ಜಯ ಗಳಿಸುವ ಮೂಲಕ ಬಿಜೆಪಿ ಬೆಂಬಲಿಗರು ಏಕಸ್ವಾಮ್ಯ ಸಾಧಿಸಿದ್ದರು. ಈ ಬಾರಿ ಈಗಾಗಲೇ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಎಲ್ಲ ಸ್ಥಾನಗಳಲ್ಲೂ ಗೆಲುವು ಸಾಧಿಸುವ ನಿರೀಕ್ಷೆ ಬಿಜೆಪಿ ಬೆಂಬಲಿಗರದ್ದಾದರೆ, ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಕಾಂಗ್ರೆಸ್ ಬೆಂಬಲಿಗರ ದ್ದಾಗಿದೆ. ಹೆಗ್ಗುಂಜೆಯಲ್ಲಿ ಬಂಡಾಯ
15 ಸ್ಥಾನಗಳಿರುವ ಹೆಗ್ಗುಂಜೆ ಗ್ರಾ.ಪಂ.ನಲ್ಲಿ ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಅನಂತರ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಗೆ ಸೇರ್ಪಡೆಯಾದ್ದರಿಂದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದರಿಂದಾಗಿ ಈ ಬಾರಿ ಮೂಲ ಮತ್ತು ವಲಸಿಗರ ನಡುವೆಯೇ ಸ್ಪರ್ಧೆ ಏರ್ಪಟ್ಟಿದ್ದು, ಇದರ ಲಾಭ ಪಡೆಯುವ ನಿರೀಕ್ಷೆ ಕಾಂಗ್ರೆಸ್ ಬೆಂಬಲಿತರದ್ದಾಗಿದೆ.