Advertisement

ಗ್ರಾಪಂ: ಅಂತಿಮ ಕಣದಲ್ಲಿ 169 ಅಭ್ಯರ್ಥಿಗಳು

04:39 PM Dec 15, 2020 | Suhan S |

ನಾಲತವಾಡ: ಗ್ರಾಪಂ ಮೊದಲ ಹಂತದ ಚುನಾವಣೆಯ ನಾಮಪತ್ರ ಹಿಂಪಡೆಯುವಕೊನೆ ದಿನವಾದ ಸೋಮವಾರ 92 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಅಂತಿಮವಾಗಿ 169 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Advertisement

ಬಿಜ್ಜೂರ ಗ್ರಾಪಂ: ಬಿಜ್ಜೂರ ಗ್ರಾಪಂ ಒಟ್ಟು 16 ಸ್ಥಾನಕ್ಕೆ 53 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲರ ನಾಮಪತ್ರಕ್ರಮಬದ್ಧವಾಗಿವೆ. ಸೋಮವಾರ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.

ಅಯ್ಯನಗುಡಿ ಮತಕ್ಷೇತ್ರ 2ಅಭ್ಯರ್ಥಿ ಕಾನಿಕೇರಿ ನಿವಾಸಿ ಶ್ವೇತಾ ಯಮನಪ್ಪಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ. 15 ಸ್ಥಾನಕ್ಕೆ 36 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ರಕ್ಕಸಗಿ ಗ್ರಾಪಂ: ರಕ್ಕಸಗಿ ಗ್ರಾಪಂನ ಒಟ್ಟು 14 ಸ್ಥಾನಕ್ಕೆ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು 13 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬಲದಿನ್ನಿಯ ಸಾಮಾನ್ಯ ಸ್ಥಾನದ ಅಭ್ಯರ್ಥಿ ಶಾಂತಲಿಂಗ ಭೂಪಾಲ ನಾಡಗೌಡ ಹಾಗೂಹುನಕುಂಟಿಯ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಯಲ್ಲವ್ವ ಚಂದ್ರಾಮಪ್ಪ ಕಾನಿಕೇರಿ ಅವಿರೋಧ ಆಯ್ಕೆಯಾಗಿದ್ದಾರೆ.

ನಾಗರಬೆಟ್ಟ ಗ್ರಾಪಂ: ಒಟ್ಟು 12 ಸ್ಥಾನಕ್ಕೆ 43 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಲ್ಕು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ನಾಗರಬೆಟ್ಟ ಗ್ರಾಮದ ಅ.ಜಾ.ಮಹಿಳೆ ಸ್ಥಾನಕ್ಕೆ ಪ್ರೇಮಾ ಚಲವಾದಿ, ಮಲಗಲದಿನ್ನಿ ಗ್ರಾಮದ ಸಾಮಾನ್ಯ ಮಹಿಳಾ ಅಭ್ಯರ್ಥಿ ಪರಮವ್ವ ಪಾಟೀಲ, ಮಲಗಲದಿನ್ನಿ ಗ್ರಾಮದ ಹಿ.ಬ ವರ್ಗಕ್ಕೆ ಸಿದ್ರಾಮಪ್ಪ ಪ್ಯಾಟಿ, ಜೈನಾಪುರ ಗ್ರಾಮದ ಅ.ಪಂಗಡ ಅಭ್ಯರ್ಥಿ ಗದ್ದೆಮ್ಮ ನಾಯ್ಕೋಡಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 8 ಸ್ಥಾನಕ್ಕೆ 17 ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆಯಲಿದೆ.

Advertisement

ನಾಗಬೇನಾಳ ಗ್ರಾಪಂ: ಒಟ್ಟು 13 ಸ್ಥಾನಕ್ಕೆ 42 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ನಾಗಬೇನಾಳ ಗ್ರಾಮಕ್ಕೆ 12 ಅಭ್ಯರ್ಥಿ, ವೀರೇಶನಗರ 10 ಅಭ್ಯರ್ಥಿ, ಆರೇಶಂಕರ ಮತಕ್ಷೇತ್ರಕ್ಕೆ 4 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಒಟ್ಟು 13 ಸ್ಥಾನಗಳಪೈಕಿ ನಾಗಬೇನಾಳ ಅ.ಪಂಗಡ ಅಭ್ಯರ್ಥಿಹಾಗೂ ಸಿದ್ದಾಪುರ ಪಿ.ಎನ್‌ ಗ್ರಾಮದಮೂವರು ಅಭ್ಯರ್ಥಿಗಳು ಅವಿರೋಧ

ಆಯ್ಕೆಯಾಗಿದ್ದಾರೆ.

ಅಡವಿಸೋಮನಾಳ ಗ್ರಾಪಂ: ಒಟ್ಟು 15 ಸ್ಥಾನಕ್ಕೆ 56 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ 18 ಅಭ್ಯರ್ಥಿಗಳುನಾಮಪತ್ರ ಹಿಂಪಡೆದಿದ್ದಾರೆ. ಒಂದು ನಾಮಪತ್ರ ತಿರಸ್ಕೃತವಾಗಿದ್ದು 31 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಚವನಭಾವಿ ಗ್ರಾಮ ಯಮನಪ್ಪ ಸಿದ್ದಪ್ಪ ಚಲವಾದಿ ಅವಿರೋಧ ಆಯ್ಕೆಯಾಗಿದ್ದಾರೆ.

ಆಲೂರ ಗ್ರಾಪಂ: ಒಟ್ಟು 21 ಸ್ಥಾನಕ್ಕೆ 3 ನಾಮಪತ್ರ ತಿರಸ್ಕೃತವಾಗಿ 57 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 10 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಯರಗಲ್ಲ ಒಂದು ಹಾಗೂ ಹಡಗಲಿ ಗ್ರಾಮದ ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 19 ಸ್ಥಾನಕ್ಕೆ 44 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next