ದಾವಣಗೆರೆ: ಜಿಲ್ಲೆಯ ದಾವಣಗೆರೆ, ಹೊನ್ನಾಳಿ ಮತ್ತು ಜಗಳೂರು ತಾಲೂಕುಗಳ 88 ಗ್ರಾಮ ಪಂಚಾಯತ್‌ಗಳ ಚುನಾವಣಾ ಅಖಾಡ ಸಿದ್ಧಗೊಂಡಿದೆ.
ಆಧಿಕಾರಾವಧಿ ಮುಗಿಯದ ದಾವಣಗೆರೆ ತಾಲೂಕಿನ ಬೇತೂರು, ಮಾಯಕೊಂಡ ಗ್ರಾಮಪಂಚಾಯತ್ ಹಾಗೂ ಈಚೆಗೆ ಹೊನ್ನಾಳಿಪುರಸಭೆ ತೆಕ್ಕೆಗೆ ಸೇರ್ಪಡೆಯಾಗಿರುವ ಎಚ್. ಕಡದಕಟ್ಟೆಹೊರತುಪಡಿಸಿ ಎಲ್ಲಾ ಕಡೆ ಡಿ. 22 ರಂದು ಜಿದ್ದಾಜಿದ್ದಿನ ಲೋಕಲ್ ಫೈಟ್ ನಡೆಯಲಿದೆ. ದಾವಣಗೆರೆ, ಹೊನ್ನಾಳಿ, ಜಗಳೂರು ತಾಲೂಕಿನಗ್ರಾಮ ಪಂಚಾಯತ್ ಚುನಾವಣೆಗೆ ಡಿ. 7 ರಂದುಅಧಿಸೂಚನೆ ಹೊರಡಿಸಲಾಗಿತ್ತು. 11ರವರೆಗೆ ನಾಮಪತ್ರ ಸಲ್ಲಿಕೆಗೆ ಹಾಗೂ ಹಿಂಪಡೆಯಲು 14ರವರೆಗೆಅವಕಾಶ ನೀಡಲಾಗಿತ್ತು. ಮೂರು ತಾಲೂಕುಗಳ 88ಗ್ರಾಮ ಪಂಚಾಯತ್‌ಗಳ 1301 ಸ್ಥಾನಗಳಿಗೆ 4457ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆವೇಳೆ 101 ನಾಮಪತ್ರ ತಿರಸ್ಕೃತಗೊಂಡಿದ್ದವು. 4235 ನಾಮಪತ್ರ ಕ್ರಮಬದ್ಧವಾಗಿದ್ದವು. ಡಿ. 14 ರಂದುನಾಮಪತ್ರ ಸಲ್ಲಿಕೆ ಅವಧಿ ನಂತರ 1087 ಕ್ಷೇತ್ರಗಳಿಗೆ1511 ಪುರುಷರು, 1470 ಮಹಿಳೆಯರು ಸೇರಿದಂತೆ2981 ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಪ್ರವೇಶದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
88 ಗ್ರಾಪಂಗಳ 1301 ಸ್ಥಾನಗಳಲ್ಲಿ 211 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಲೋಕಿಕೆರೆ, ಕೈದಾಳ್ ಒಳಗೊಂಡಂತೆ ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯೇ ಆಗಿಲ್ಲ. ದಾವಣಗೆರೆ ತಾಲೂಕಿನ 38 ಗ್ರಾಮ ಪಂಚಾಯತ್‌ನ 581 ಸ್ಥಾನಗಳಲ್ಲಿ 2 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗಿಲ್ಲ. 80 ಸ್ಥಾನಗಳಿಗೆ ಆವಿರೋಧ ಆಯ್ಕೆಯಾಗಿವೆ.
2015ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ತಾಲೂಕಿನಶ್ರೀರಾಮನಗರ ಗ್ರಾಮ ಪಂಚಾಯತ್‌ನ 5 ಸ್ಥಾನಗಳಿಗೂ ಅವಿರೋಧ ಅಯ್ಕೆಯಾಗಿದೆ. ಬಹುಸಂಖ್ಯೆಯಲ್ಲಿರುವ ಒಂದೇ ಸಮುದಾಯದ ಎಲ್ಲಾ ಮುಖಂಡರು ಒಗ್ಗೂಡಿ ಸಾಕಷ್ಟು ಪರಾಮರ್ಶೆನಡೆಸಿ ಒಮ್ಮತದಿಂದ ಐವರನ್ನು ಆವಿರೊಧ ಆಯ್ಕೆ ಮಾಡಿದ್ದಾರೆ. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪರಾಭವಗೊಂಡವರನ್ನೇ ಗುರುತಿಸಿ ಈ ಬಾರಿ ಅವಿರೋಧ ಆಯ್ಕೆಮಾಡಿರುವುದು ವಿಶೇಷ. ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಪಂನ ಒಂದನೇ ವಾರ್ಡ್‌ನಿಂದಪತ್ರಕರ್ತರೊಬ್ಬರ ಪತ್ನಿ ಸಹ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊನ್ನಾಳಿ ತಾಲೂಕಿನ 28 ಗ್ರಾಪಂಗಳ ಪೈಕಿ 323 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗಿಲ್ಲ. 31ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.ಜಗಳೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 100 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.ತಾಲೂಕಿನ 22 ಗ್ರಾಮ ಪಂಚಾಯತ್‌ಗಳ 397ಸ್ಥಾನಗಳಲ್ಲಿ 100 ಸ್ಥಾನಗಳಿಗೆ ಅವಿರೋಧ ಆಯ್ಕೆನಡೆದಿದೆ. ಮೂರು ತಾಲೂಕುಗಳ 211 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿರುವ ಹಿನ್ನೆಲೆಯಲ್ಲಿ ಬಾಕಿ ಇರುವ 1087 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದಾವಣಗೆರೆ ತಾಲೂಕಿನ 38 ಗ್ರಾಪಂಗಳ 499, ಹೊನ್ನಾಳಿ ತಾಲೂಕಿನ 28 ಗ್ರಾಪಂಗಳ 291, ಜಗಳೂರು ತಾಲೂಕಿನ 22 ಗ್ರಾಪಂಗಳ 297 ಸ್ಥಾನಗಳಿಗಾಗಿ ಅಭ್ಯರ್ಥಿಗಳಲ್ಲಿ ಪೈಪೋಟಿ ಏರ್ಪಟ್ಟಿದೆ.
ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು :
ದಾವಣಗೆರೆ ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ 413, ಹೊನ್ನಾಳಿ ತಾಲೂಕಿನಲ್ಲಿ 242, ಜಗಳೂರು ತಾಲೂಕಿನಲ್ಲಿ 239, ದಾವಣಗೆರೆ ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ 179, ಹೊನ್ನಾಳಿಯಲ್ಲಿ 81,ಜಗಳೂರಿನಲ್ಲಿ 188, ದಾವಣಗೆರೆ ತಾಲೂಕಿನಲ್ಲಿ ಹಿಂದುಳಿದ ವರ್ಗ-ಅ 121, ಹೊನ್ನಾಳಿಯಲ್ಲಿ 77, ಜಗಳೂರಿನಲ್ಲಿ 16, ದಾವಣಗೆರೆ ತಾಲೂಕಿನಲ್ಲಿ ಹಿಂದುಳಿದ ವರ್ಗ-ಬ 21, ಹೊನ್ನಾಳಿಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಗಳೂರಿನಲ್ಲಿ ಯಾರು ಇಲ್ಲ. ದಾವಣಗೆರೆ ತಾಲೂಕಿನಲ್ಲಿ ಸಾಮಾನ್ಯ ವರ್ಗದ715, ಹೊನ್ನಾಳಿಯಲ್ಲಿ 415, ಜಗಳೂರಿನಲ್ಲಿ 318 ಜನರು ಆಕಾಂಕ್ಷಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.-
-ರಾ. ರವಿಬಾಬು