Advertisement

ಮುದ್ದೇಬಿಹಾಳದಲ್ಲಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆ ರದ್ದು

03:36 PM Apr 24, 2021 | Adarsha |

ಮುದ್ದೇಬಿಹಾಳ: ಮುಂಬರುವ ಮೇ 28ರಂದುನಡೆಸಲು ತೀರ್ಮಾನಿಸಲಾಗಿದ್ದ ಪಟ್ಟಣದಲ್ಲಿಪ್ರತಿ 3 ವರ್ಷಕ್ಕೊಮ್ಮೆ 5 ದಿನಗಳವರೆಗೆವಿಜೃಂಭಣೆಯಿಂದ ಆಚರಿಸಲ್ಪಡುವಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆಯನ್ನುಹೆಚ್ಚುತ್ತಿರುವ ಕೊರೊನಾ 2ನೇ ಅಲೆ ಹಿನ್ನೆಲೆರದ್ದುಪಡಿಸಲಾಗಿದೆ.

Advertisement

ಅದರ ಬದಲಿಗೆ 5ಶುಕ್ರವಾರಗಳಂದು ವಾರ ಆಚರಿಸಲು ಪಟ್ಟಣದಪ್ರಥಮ ಪ್ರಜೆಯೂ ಆಗಿರುವ ಪುರಸಭೆ ಅಧ್ಯಕ್ಷೆಪ್ರತಿಭಾ ಅಂಗಡಗೇರಿ ಹಾಗೂ ಜಾತ್ರಾ ಕಮೀಟಿಮುಖಂಡ ಅಶೋಕ ನಾಡಗೌಡ ಜನತೆಗೆ ಕರೆನೀಡಿದ್ದಾರೆ.ಈ ಕುರಿತು ಇಲ್ಲಿನ ಪುರಸಭೆ ಸಭಾಭವನದಲ್ಲಿ ಸದಸ್ಯರು, ಗಣ್ಯರು, ಸಮಾನಮನಸ್ಕರೊಂದಿಗೆ ಸಮಾಲೊಚಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದಅವರು, 2020ರ ಮೇ ತಿಂಗಳಲ್ಲೇ ಜಾತ್ರೆಸಂಪ್ರದಾಯದ ಪ್ರಕಾರ ನಡೆಯಬೇಕಿತ್ತು.

ಆದರೆ ಆಗ ಕೊರೊನಾದ ಮೊದಲ ಅಲೆಹೆಚ್ಚಾಗಿದ್ದುದನ್ನು ಪರಿಗಣಿಸಿ ಜಾತ್ರೆಯನ್ನುಮುಂದೂಡಲಾಗಿತ್ತು. ಮೊದಲ ಅಲೆಯಹಾವಳಿ ಕಡಿಮೆಯಾದಾಗ ದೈವದವರೆಲ್ಲರೂಸಭೆ ಸೇರಿ ಇದೇ ಮೇ 28ರಂದು ಜಾತ್ರೆ ನಡೆಸಲುತೀರ್ಮಾನಿಸಿದ್ದರು. ಆದರೆ ಈಗ 2ನೇ ಅಲೆತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಜಾತ್ರೆ ರದ್ದುಮಾಡುವುದು ಅನಿವಾರ್ಯ ಎನ್ನಿಸಿದ್ದರಿಂದ ಈತೀರ್ಮಾನಕ್ಕೆ ಬರಬೇಕಾಯಿತು ಎಂದರು.

ಜಾತ್ರೆ ಬದಲು ಏ. 23ರ ಮೊದಲಶುಕ್ರವಾರದಿಂದ ಮೇ 21ರವರೆಗೆ ಬರುವ5 ಶುಕ್ರವಾರಗಳನ್ನು ವಾರ ಎಂದು ಪಟ್ಟಣದಜನತೆ ಆಚರಿಸಬೇಕು. ಈ ಬಗ್ಗೆ ಪಟ್ಟಣದ ಎಲ್ಲಬಡಾವಣೆಗಳಲ್ಲು ಪ್ರಚಾರ ಮಾಡಲಾಗುತ್ತದೆ.ಈಗಾಗಲೇ ಮೊದಲ ಶುಕ್ರವಾರವನ್ನು ಭಕ್ತರುಆಚರಿಸಿದ್ದಾರೆ. ಮುಂದಿನ 4 ಶುಕ್ರವಾರದೇವಿಯ ಹೆಸರಲ್ಲಿ ನೇಮ ನಿತ್ಯ ಪಾಲಿಸಿ ವಾರಆಚರಿಸಬೇಕು ಎಂದರು.

ಹುಡ್ಕೊ ಗಾರ್ಡನ್‌ ಬಂದ್‌ ಸೂಕ್ತ: ಪುರಸಭೆಸದಸ್ಯರಾದ ಸಂಗಮ್ಮ ದೇವರಳ್ಳಿ, ವೀರೇಶಹಡಲಗೇರಿ ಮಾತನಾಡಿ, ಹೆಚ್ಚುತ್ತಿರುವಕೊರೊನಾ 2ನೇ ಅಲೆ ಹಾವಳಿಯಿಂದಮಕ್ಕಳು, ವಯೋವೃದ್ಧರನ್ನು ರಕ್ಷಿಸಲುಹುಡ್ಕೊàದಲ್ಲಿರುವ ಗಾರ್ಡನ್‌ ಅನ್ನು ಮುಂದಿನಆದೇಶದವರೆಗೆ ಬಂದ್‌ ಮಾಡುವುದು ಸೂಕ್ತತೀರ್ಮಾನವಾಗಿದ್ದು ಇದನ್ನು ಪಾಲಿಸಬೇಕು.ಇಡಿ ಪಟ್ಟಣಕ್ಕೆ ಇರುವುದು ಇದೊಂದೇಸುಸಜ್ಜಿತ ಗಾರ್ಡನ್‌.

Advertisement

ಇಲ್ಲಿ ಮಕ್ಕಳಿಗೆ ಆಟಿಕೆಸಾಮಾನುಗಳು ಇವೆ. ಬೆಳಗ್ಗೆ, ಸಂಜೆ ಮಕ್ಕಳು,ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಕಾಲ ಕಳೆಯುತ್ತಾರೆ. ಇವರು ಕೊರೊನಾಗೆಬಲಿಯಾಗಬಾರದು ಎನ್ನುವ ಸದುದ್ದೇಶದಿಂದಪುರಸಭೆ ಆಡಳಿತ ಈ ತೀರ್ಮಾನ ಕೈಗೊಳ್ಳಬೇಕುಎಂದರು.

ಉಡಿ ತುಂಬುವ ಮಾರ್ಗಸೂಚಿಗೆ ತೀರ್ಮಾನ:ಈ ವೇಳೆ ಉದಯವಾಣಿಯೊಂದಿಗೆ ಪ್ರತ್ಯೇಕವಾಗಿಮಾತನಾಡಿದ ಅಶೋಕ ನಾಡಗೌಡ ಅವರು,ಮೇ 21ರ ಕೊನೆ ವಾರದೊಳಗೆ ಊರ ದೈವದವರಸಭೆ ಕರೆದು ಕೊನೆ ವಾರದ ನಂತರ ಶ್ರೀದೇವಿಗೆಉಡಿ ತುಂಬುವ ಕಾರ್ಯ ನಡೆಸಲು ಮತ್ತುಉಡಿ ತುಂಬುವ ವೇಳೆ ಜನದಟ್ಟಣೆ ಆಗದಂತೆನೋಡಿಕೊಳ್ಳಲು, ಭಕ್ತರು ತರುವ ಎಡೆ, ನೈವೇದ್ಯನಿರುಪಯುಕ್ತವಾಗದಂತೆ ನೋಡಿಕೊಳ್ಳುವಕುರಿತು ಕೆಲ ಪ್ರಮುಖ ತೀರ್ಮಾನಗಳನ್ನುಕೈಗೊಂಡು ಜನತೆಗೆ ಅವುಗಳನ್ನು ಪಾಲಿಸುವಂತೆಮನವಿ ಮಾಡುವುದಾಗಿ ತಿಳಿಸಿದರು.

ಪುರಸಭೆಸದಸ್ಯರಾದ ಅಶೋಕ ವನಹಳ್ಳಿ, ಯಲ್ಲಪ್ಪನಾಯಕಮಕ್ಕಳ, ಮಹಿಬೂಬ ಗೊಳಸಂಗಿ,ಸದಾಶಿವ ಮಾಗಿ, ಬಸಪ್ಪ ತಟ್ಟಿ, ಸಹನಾಬಡಿಗೇರ, ಮಹ್ಮದರμàಕ್‌ ದ್ರಾಕ್ಷಿ ಮತ್ತಿತರರುಪಾಲ್ಗೊಂಡಿದ್ದು ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next