Advertisement

ಸರಕಾರಿ ಶಾಲೆಗೆ ಗ್ರಾ.ಪಂ. ನಿಂದಲೇ ಉಚಿತ ವಾಹನ ಸೌಕರ್ಯ

06:00 AM Jul 01, 2018 | |

ವಿಶೇಷ ವರದಿ- ಕೋಟೇಶ್ವರ: ರಾಜ್ಯದಲ್ಲೇ ಪ್ರಥಮ ಎಂಬಂತೆ ಗೋಪಾಡಿ ಗ್ರಾ. ಪಂ. ಸ್ವಂತ ಖರ್ಚಿನಲ್ಲೇ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿದ್ದು ಫ‌ಲ ನೀಡಿದೆ. 

Advertisement

1 ಲಕ್ಷ ರೂ. ವಿನಿಯೋಗ 
ವಿದ್ಯಾರ್ಥಿಗಳ ಸಂಚಾರಕ್ಕೆ ಗೋಪಾಡಿ ಗ್ರಾ.ಪಂ 1 ಲಕ್ಷ ರೂ. ಮೊತ್ತವನ್ನು ತೆಗೆದಿರಿಸಿ ಉಚಿತ ಸಾರಿಗೆಗೆ ಯೋಜನೆ ರೂಪಿಸಿದೆ. ಇದರೊಂದಿಗೆ ಆಯಾ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಗಳು, ಎಸ್‌.ಡಿ.ಎಮ್‌.ಸಿ., ವಿವಿಧ ಸಂಘಟನೆಗಳು ವಿವಿಧ ರೀತಿಯ ಸೌಕರ್ಯ ಒದಗಿಸಲು ಮುಂದೆ ಬಂದಿವೆ. 

2 ಶಾಲೆಗಳಿಗೆ ವಾಹನ ಸೌಕರ್ಯ 
ಪಡು ಗೋಪಾಡಿ ಮತ್ತು ಮೂಡು ಗೋಪಾಡಿ ಶಾಲೆಗೆ ಅನುಕೂಲವಾಗಲು ಎರಡು ವಾಹನಗಳನ್ನು ಗ್ರಾ.ಪಂ. ಗುತ್ತಿಗೆ ಪಡೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ನಿತ್ಯ ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು ಮತ್ತು ಅಲ್ಲಿಂದ ಮನೆಗೆ ಬಿಡುವ ಕೆಲಸ ಮಾಡಲಿದೆ. ಇದರೊಂದಿಗೆ ವಾಹನ ನಿರ್ವಹಣೆ ವೆಚ್ಚ, ಚಾಲಕರ ಸಂಬಳಕ್ಕೂ ಅದು ಯೋಜನೆ ರೂಪಿಸಿದ್ದು, ಹೆಚ್ಚುವರಿ ಖರ್ಚುಗಳನ್ನು ಬೇರೆಯ ಅನುದಾನದಲ್ಲಿ ಸರಿದೂಗಿಸಿಕೊಳ್ಳಲು ಉದ್ದೇಶಿಸಿದೆ.

ಸರಕಾರಿ ಶಾಲೆಗಳಲ್ಲಿ ಸವಲತ್ತು ವೃದ್ಧಿ ಗ್ರಾ.ಪಂ.ನಿಂದ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈಗ ಸಾರಿಗೆ ಸೌಲಭ್ಯ ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. 
– ಸರಸ್ವತಿ ಪುತ್ರನ್‌, 
ಅಧ್ಯಕ್ಷೆ ಗೋಪಾಡಿ ಗ್ರಾ.ಪಂ.

ಗ್ರಾ.ಪಂ. ನ ವರ್ಗ 1 ರ ಅನುದಾನದಡಿಯಲ್ಲಿ 2 ಸರಕಾರಿ ಶಾಲೆಗಳಿಗೆ ವಾಹನ ಸೌಲಭ್ಯ ಒದಗಿಸಲಾಗಿದೆ. ಅದರ ಸಂಪೂರ್ಣ ವೆಚ್ಚ ಗ್ರಾ.ಪಂ. ಭರಿಸಲಿದೆ. 
–  ಗಣೇಶ್‌, ಪಿ.ಡಿ.ಒ. ಗೋಪಾಡಿ 

Advertisement

ವಾಹನ ವ್ಯವಸ್ಥೆ ಯಾದ್ದರಿಂದ ಪಡು ಗೋಪಾಡಿಯ ಶಾಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆ ಹೆಚ್ಚಾಗಿದೆ.  
– ಶ್ರೀನಿವಾಸ ಶೆಟ್ಟಿ, 
ಮುಖ್ಯ ಶಿಕ್ಷಕ ಪಡು ಗೋಪಾಡಿ ಶಾಲೆ

ವಾಹನ ವ್ಯವಸ್ಥೆಯಿಂ ಮೂಡುಗೋಪಾಡಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. 
– ನಿರ್ಮಲಾದೇವಿ, ಮುಖ್ಯ ಶಿಕ್ಷಕಿ, ಮೂಡು ಗೋಪಾಡಿ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next