Advertisement
ಕಿನ್ನಿಗೋಳಿ ಪಂಚಾಯತ್‌ನಲ್ಲಿ ಕಳೆದ ವರ್ಷ ನೀರಿನ ಸಮಸ್ಯೆ ಕಂಡು ಬಂದಿತ್ತು. ಆದರೆ ಈ ಬಾರಿ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದರಿಂದಾಗಿ ಕೆಲವೊಂದು ಕಡೆ ಹೊರತುಪಡಿಸಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಪಂಚಾಯತ್ ಎಲ್ಲ ರೀತಿಯಲ್ಲಿ ಸರ್ವ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
Related Articles
ಎಳತ್ತೂರು ನೆಲಗುಡ್ಡೆ ಗುಡ್ಡೆಯಂಗಡಿ ಎತ್ತರದ ಪ್ರದೇಶವಾಗಿದ್ದು, ಕಳೆದ ವರ್ಷದ ಡಿಸೆಂಬರ್ ಅಂತ್ಯದವರೆಗೆ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಅನಂತರ ಬೇಸಗೆಯಲ್ಲಿ ಕೊಳವೆ ಬಾವಿಯಲ್ಲಿ ನೀರಿಲ್ಲವಾದ್ದರಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿತ್ತು. ಈ ಬಾರಿ ನೀರಿನ ಸಮಸ್ಯೆ ಉದ್ಭವಿಸುವ ಲಕ್ಷಣ ಕಂಡು ಬಂದಿದ್ದು ಬಳುRಂಜೆ ಗ್ರಾ.ಪಂ. ವ್ಯಾಪ್ತಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿದರೆ ಪರಿಹಾರ ಸಿಗಬಹುದು. ಈ ಬಗ್ಗೆ ಸ್ಥಳೀಯಾಡಳಿತದಲ್ಲಿ ಮಾತುಕತೆ ನಡೆದಿದೆ. ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತ ಸಿದ್ಧವಾಗಿದೆ.
Advertisement
ಕಿನ್ನಿಗೋಳಿಕಿನ್ನಿಗೋಳಿ ಗ್ರಾ.ಪಂ. ಹತ್ತಿರದ ಟ್ಯಾಂಕ್ ಸಹಿತ ಎಲ್ಲ ಓವರ್ ಹೆಡ್ ಟ್ಯಾಂಕ್‌ಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪಂಚಾಯತ್ ಕೊಳವೆ ಬಾವಿ ಮತ್ತು 2 ತೆರದ ಬಾವಿಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿ ವ್ಯಾಪ್ತಿಯಲ್ಲಿ ಯಾವುದೇ ನೀರಿನ ಸಮಸ್ಯೆ ಉದ್ಭವಿಸುವ ಲಕ್ಷಣ ಕಂಡು ಬಂದಿಲ್ಲ. ಹಾಗೇನೂ ಒಂದು ವೇಳೆ ನೀರಿನ ಸಮಸ್ಯೆ ಕಂಡು ಬಂದರೂ ಪಂಚಾಯತ್‌ನಿಂದ ಪೂರಕ ಕ್ರಮ ತೆಗೆದುಕೊಳ್ಳುವುದು ಎಂದು ತಿಳಿದು ಬಂದಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 10,400 ಜನಸಂಖ್ಯೆ ಇದ್ದು, 967 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇದೆ, 12 ಕೊಳವೆ ಬಾವಿ ಇದೆ, 15 ಜನ ಕೆಲಸಗಾರರು ಇದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುತ್ತಕಾಡಿನಲ್ಲಿ ಪ್ರತ್ಯೇಕ ನೀರಿನ ಸಮಿತಿ ಇದ್ದು ಅದರ ನಿರ್ವಹಣೆ ಅವರೇ ಮಾಡುತ್ತಾರೆ.
ಅಲ್ಲಿ ಸುಮಾರು 300ಕ್ಕೂ ಅಧಿಕ ನೀರಿನ ಬಳಕೆದಾರರು ಇದ್ದು ಎರಡು ಟ್ಯಾಂಕ್ ಮೂಲಕ ಅಲ್ಲಿನ ಪರಿಸರದಲ್ಲಿ ನೀರಿನ ಸರಬರಾಜು ಮಾಡಲಾಗುತ್ತಿದೆ. ಅದರ ಲೆಕ್ಕಾಚಾರ ಎಲ್ಲ ಸಮಿತಿಯ ಮೂಲಕ ನಡಯುತ್ತಿದೆ. ಸದ್ಯ ನೀರಿನ ಸಮಸ್ಯೆಯಿಲ್ಲ
ಗ್ರಾಮ ಪಂಚಾಯತ್‌ನಲ್ಲಿ ಕೊಳವೆಬಾವಿ, ಮಳೆಕೊಯ್ಲು ಯೋಜನೆ ಸಿದ್ಧವಾಗಿದೆ. ಕಿನ್ನಿಗೋಳಿ ಗ್ರಾಮ ಪಂಚಾಯತ್‌ನಲ್ಲಿ ಕೊಳವೆಬಾವಿ ಮರುಪೂರಣದ ನೀರು ಇಂಗಿಸುವ ಅನುಷ್ಠಾನದ ಕೆಲಸ ನಡೆದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಬರುತ್ತಿದ್ದು ಸದ್ಯದ ಮಟ್ಟಿಗೆ ದೊಡ್ಡ ನೀರಿನ ಸಮಸ್ಯೆ ಕಂಡು ಬಂದಿಲ್ಲ.
– ಅರುಣ್ ಪ್ರದೀಪ್ ಡಿ’ಸೋಜಾ, ಪಿಡಿಒ, ಕಿನ್ನಿಗೋಳಿ ಗ್ರಾ.ಪಂ. ಸಮರ್ಪಕವಾಗಿ ನೀರು ಸರಬರಾಜು
ಗ್ರಾಮ ಪಂ ಚಾಯ ತ್ ವ್ಯಾಪ್ತಿ ಯಲ್ಲಿ ಕಳೆದ ವರ್ಷ ನೀರಿನ ಸಮಸ್ಯೆ ಜಾಸ್ತಿ ಇತ್ತು, ಈ ಬಾರಿ ಬಹುಗ್ರಾಮ ಕಡಿಯುವ ನೀರಿನ ಯೋಜನೆಯಲ್ಲಿ ಸರಿಯಾಗಿ ನೀರು ಬರುತ್ತಿದ್ದು ಸದ್ಯದ ಮಟ್ಟಿಗೆ ಸಮಸ್ಯೆ ಕಂಡುಬಂದಿಲ್ಲ. ಗ್ರಾಮ ಪಂಚಾಯತ್‌ನಿಂದ ಎಸ್. ಕೋಡಿ , ಪದ್ಮನೂರಿನಲ್ಲಿ ಇನ್ನಿತರ ಕಡೆಗಳಲ್ಲಿ ನೀರಿನ ಸಮಸ್ಯೆಗೆ ಹೊಸ ಪೈಪ್‌ಲೈನ್ ನಿರ್ವಹಣೆ ಹಾಗೂ ದುರಸ್ತಿ ಮಾಡುವ ಮೂಲಕವಾಗಿ ಕೊಳೆವೆ ಬಾವಿಯ ಮೂಲಕವು ಸಮರ್ಪಕವಾಗಿ ನೀರು ಸರಬರಾಜು ನಡೆಯುತ್ತಿದೆ.
– ಫಿಲೋಮಿನಾ ಸಿಕ್ವೇರಾ, ಅಧ್ಯಕ್ಷರು, ಕಿನ್ನಿಗೋಳಿ ಗ್ರಾ.ಪಂ. - ರಘುನಾಥ್ ಕಾಮತ್, ಕೆಂಚನಕೆರೆ