Advertisement

ಗ್ರಾಮ್‌ ಕಿ ಬಾತ್‌: ಹ್ವಾಯ್‌ ಈ ಬಾರಿ ಟಿಕೆಟ್‌ ಯಾರಿಗ್‌ ಅಂಬ್ರೆ…

12:11 AM Apr 05, 2023 | Team Udayavani |

ಬೈಂದೂರು: ಬೇಸಗೆಯ ತಾಪದ ಜತೆಗೆ ಚುನಾವಣೆಯ ಕಾವು ಕೂಡ ಏರುತ್ತಿದೆ. ಚುನಾವಣೆಯ ದಿನ ಕೂಡ ನಿಗದಿ ಆಗಿದೆ. ಆಯಾಯ ಕ್ಷೇತ್ರಗಳಲ್ಲಿ ದಿನಕ್ಕೊಂದು ಕುತೂಹಲದ ನಿರೀಕ್ಷೆಯಾದರೆ ಬೈಂದೂರು ಭಾಗದಲ್ಲಿ ಸದ್ಯ ಕೇಳಿಬರುವ ಒಂದೇ ಒಂದು ಪ್ರಶ್ನೆ ಅಂದರೆ ಹ್ವಾಯ್‌ ಸೀಟ್‌ ಯಾರಿಗ್‌ ಅಂಬ್ರೆ..
ಬೈಂದೂರು ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲಾ ರಾಜಕೀಯ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.

Advertisement

ಅನೇಕ ಜನ ಶಾಸಕರಾದರೂ ಕೂಡ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಇಷ್ಟರವರೆಗೆ ಮಂತ್ರಿ ಸ್ಥಾನ ದೊರೆತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆ ಕುಂದಾಪುರ ತಾಲೂಕಿಗೆ ಬಹುನಿರೀಕ್ಷೆ ಇದೆ. ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಂಡಿದೆ. ಆದರೆ ಬಿಜೆಪಿ ಪಾಳಯದಲ್ಲಿ ಇದುವರೆಗೆ ಅಭ್ಯರ್ಥಿಯ ಹೆಸರು ಅಂತಿಮಗೊಂಡಿಲ್ಲ. ಹೀಗಾಗಿ ನಾಲ್ಕೈದು ಆಕಾಂಕ್ಷಿಗಳು ಪ್ರಚಾರದಲ್ಲಿ ತೊಡಗಿದ್ದು ಹೈಕಮಾಂಡ್‌ ಯಾರನ್ನು ಅಂತಿಮಗೊಳಿಸುತ್ತಾರೆ ಅನ್ನೋದೆ ಕುತೂಹಲ. ಹೀಗಾಗಿ ಇಷ್ಟರವರೆಗೆ ಚುನಾವಣೆಯ ಕಾವು ಏರಿದಂತಿಲ್ಲ. ಎರಡು ಪಕ್ಷದ ಅಭ್ಯರ್ಥಿಗಳ ಹೆಸರು ಪೈನಲ್‌ ಆದರೆ ಕಾರ್ಯಕರ್ತರಲ್ಲಿ ಹುರುಪು ಕಾಣಬಹುದಾಗಿದೆ. ಸದ್ಯದ ಮಟ್ಟಿಗೆ ಎಲ್ಲರಿಗೂ ಒಂದು ಕುತೂಹಲ ಈ ಬಾರಿ ಟಿಕೆಟ್‌ ಯಾರಿಗೆ ಸಿಗುತ್ತೆ ಅನ್ನೋದಾಗಿದೆ.

ಕರಾವಳಿ ಹಾಗೂ ಮಲೆನಾಡು ಜತಗೆ ಗ್ರಾಮೀಣ ಭಾಗ ಹೆಚ್ಚಾಗಿರುವ ಬೈಂದೂರಿನಲ್ಲಿ ಕೃಷಿಯೇ ಪ್ರಧಾನವಾಗಿದೆ. ಬೃಹತ್‌ ಉದ್ಯಮ ಕೈಗಾರಿಕೆಗಳು ಇದುವರಗೆ ಸ್ಥಾಪನೆಯಾಗಿಲ್ಲ. ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿದ್ದರೂ ಯೋಜನೆಗಳ ಕನಸು ಕಡತದಲ್ಲೇ ಖಾಯಂ ಆಗಿದೆ. ಇದರ ವ್ಯಾಪ್ತಿ ಶಿರೂರಿನಿಂದ ಪ್ರಾರಂಭವಾಗಿ ತಲ್ಲೂರು ತನಕ ವಿಸ್ತರಿಸಿದೆ. 65 ಗ್ರಾಮ ಹಾಗೂ 246 ಬೂತ್‌ಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next