Advertisement

ಗೃಹ ಚೈತನ್ಯ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ

11:34 PM Jun 29, 2019 | sudhir |

ಕಾಸರಗೋಡು: ಔಷಧ ಸಂಪತ್ತನ್ನು ಸಂರಕ್ಷಿಸಬೇಕು ಎಂಬ ಸಂದೇಶದೊಂದಿಗೆ ರಾಜ್ಯ ಔಷಧ ಸಸ್ಯ ಮಂಡಳಿ ನೇತೃತ್ವದಲ್ಲಿ ಜಾರಿಗೊಳಿಸುವ ಗೃಹ ಚೈತನ್ಯ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಾಗಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿತು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಔಷಧ ಸಸ್ಯಗಳನ್ನು ಮನೆಯಂಗಳದಲ್ಲೇ ನೆಟ್ಟು ಬೆಳೆಸಲು ನಾವೆಲ್ಲರೂ ಬದ್ಧರಾಗಬೇಕು. ಸರಕಾರ ಘೋಷಿಸುವ ಅನೇಕ ಯೋಜನೆಗಳು ಕೃಷಿಕರ ಗಮನಕ್ಕೆ ಬಾರದೇ ಹೋಗುವ ಸ್ಥಿತಿ ಇಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಅಧ್ಯಕ್ಷರು ವಿಶೇಷ ಗಮನ ಹರಿಸಬೇಕು ಎಂದವರು ಆಗ್ರಹಿಸಿದರು.

ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆಯ ಸಹಕಾರದೊಂದಿಗೆ ಜಿಲ್ಲೆಯ ಎಲ ್ಲಮನೆಗಳಲ್ಲೂ ಔಷಧ ಸಸ್ಯ ಬೆಳೆಸುವ ಯೋಜನೆ ಆರಂಭಿಸಲಾಗುವುದು ಎಂದವರು ತಿಳಿಸಿದರು.

ರಾಜ್ಯ ಔಷಧ ಮಂಡಳಿ ಸದಸ್ಯ ಕೆ.ವಿ.ಗೋವಿಂದನ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಸದಸ್ಯ ಮತ್ತು ಮೆಂಬರ್‌ ಸೆಕ್ರಟರಿ ಡಾ| ವಿ.ಬಾಲಕೃಷ್ಣನ್‌ ಪ್ರಧಾನ ಭಾಷಣ ಮಾಡಿದರು. ನೌಕರಿ ಖಾತರಿ ಯೋಜನೆ ಜಿಲ್ಲಾ ಯೋಜನೆ ನಿರ್ದೇಶಕ ಕೆ.ಪ್ರದೀಪ್‌ ಸ್ವಾಗತಿಸಿದರು. ಕಾಸರಗೊಡು, ಮಂಜೇಶ್ವರ, ಕಾರಡ್ಕ ಬ್ಲಾಕ್‌ಗಳ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಕಾರ್ಯದರ್ಶಿಗಳು, ಕೃಷಿ ಭವನ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next