Advertisement

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಕ್ರೀಡೆಗೆ ಮಾಡಿದ ಅಪರಾಧವಾಗುತ್ತದೆ: ಸ್ವಾನ್

01:02 PM Jun 26, 2021 | Team Udayavani |

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲಿನ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರುವ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಕ್ಕಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಇಂಗ್ಲೆಂಡ್ ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಭಾರತೀಯ ನಾಯಕನ ಪರವಾಗಿ ಬ್ಯಾಟ್ ಬೀಸಿದ್ದು, ವಿರಾಟ್ ರನ್ನು ಕ್ಯಾಪ್ಟನ್ಸಿ ಹುದ್ದೆಯಿಂದ ಕೆಳಕ್ಕಿಳಿಸಿದರೆ ಅದು ಅಪರಾಧವಾಗುತ್ತದೆ ಎಂದಿದ್ದಾರೆ.

Advertisement

“ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಮತ್ತು ಸೂಪರ್ ಸ್ಟಾರ್. ಅವರು ಭಾರತ ತಂಡವನ್ನು ಬಲಿಷ್ಠಗೊಳಿಸಿದ್ದಾರೆ. ವಿಕೆಟ್ ಹೋದಾಗಲೆಲ್ಲಾ ಅವರ ಉತ್ಸಾಹವನ್ನು, ಮಿಸ್ ಫೀಲ್ಡ್ ಇದ್ದಾಗ ಅವರ ಮುಖವನ್ನು ನೀವು ನೋಡಬೇಕು. ಅವರು ಶೇಕಡಾ 100 ರಷ್ಟು ತನ್ನ ಕೆಲಸಕ್ಕೆ ಬದ್ಧರಾಗಿದ್ದಾರೆ” ಎಂದು ಸ್ವಾನ್ ವೆಬ್ ಸೈಟ್ ಒಂದಕ್ಕೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ:ಜ್ಯೂಡೋ ತಾರೆ ಸುಶೀಲಾದೇವಿ ಒಲಿಂಪಿಕ್ಸ್‌ ಅರ್ಹತೆ ಅಧಿಕೃತ

ಭಾರತ ತಂಡ ಅಂತಹ ಉತ್ತಮ ನಾಯಕನನ್ನು ಹೊಂದಿರುವಾಗ, ಈ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ತೆಗೆದು ಹಾಕುವುದು ಕ್ರಿಕೆಟ್ ವಿರುದ್ಧದ ಅಪರಾಧ. ಬಿಸಿಸಿಐ ಈಗ ನಾಯಕತ್ವಕ್ಕಾಗಿ ಬೇರೆಡೆ ನೋಡಬೇಕೆಂದು ನಾನು ಭಾವಿಸುವುದಿಲ್ಲ. ಫೈನಲ್ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದ ಅಭ್ಯಾಸ ಕಡಿಮೆಯಾಗಿತ್ತು, ಹಾಗಾಗಿ ಅವರು ಪಂದ್ಯವನ್ನು ಕಳೆದುಕೊಂಡರು ಎಂದು ಸ್ವಾನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಟೀಂ ಇಂಡಿಯಾಗೆ ಕೇನ್ ಬಳಗ ಕಬ್ಬಿಣದ ಕಡಲೆಯಾಗುತ್ತಿರುವುದ್ಯಾಕೆ?

Advertisement

ಭಾರತ ಫೈನಲ್ ಪಂದ್ಯಕ್ಕಾಗಿ ಕೇವಲ ನೆಟ್ ಪ್ರಾಕ್ಟಿಸ್ ಮಾಡಿತ್ತು. ಆದರೆ ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿ ಬಂದಿದೆ. ಹೀಗಾಗಿ ಎಲ್ಲವೂ ನ್ಯೂಜಿಲ್ಯಾಂಡ್ ಪರವಾಗಿ ನಡೆಯಿತು ಎಂದು ಗ್ರೇಮ್ ಸ್ವಾನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next