Advertisement

ಪದವಿ ಫಲಿತಾಂಶ –ಗೊಂದಲ ಬೇಡ: ವಿ.ವಿ.

12:21 AM Jan 04, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು 2021 ಆಗಸ್ಟ್‌- ಸೆಪ್ಟಂಬರ್‌ ಹಾಗೂ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗಾಗಲಿ, ಪೋಷಕರಿಗಾಗಲಿ ಯಾವುದೇ ಗೊಂದಲ ಬೇಡ ಎಂದು ವಿಶ್ವವಿದ್ಯಾನಿಲಯದ ಪ್ರಕಟನೆ ತಿಳಿಸಿದೆ.

Advertisement

ವಿ.ವಿ. ಸ್ವಂತಿಕೆಯೆಡೆಗೆ ಸಾಗುವ ಉದ್ದೇಶದಿಂದ MuLinx ಎನ್ನುವ Open Source Software ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸಿ ಎಲ್ಲರ ಬೆಂಬಲದೊಂದಿಗೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಒಂದರ ಅನಂತರ ಒಂದಾಗಿ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಿರುವುದರಿಂದ ಹಾಗೂ ಹೊಸ ಸಾಫ್ಟ್‌ವೇರ್‌ನ ಬಳಕೆಯಲ್ಲಿ ಮತ್ತು ಈ ಹಿಂದಿನ ಪರೀಕ್ಷಾ ದತ್ತಾಂಶಗಳು ಹೊಸ ಸಾಫ್ಟ್‌ವೇರ್‌ಗೆ ಹೊಂದಾಣಿಕೆ ಆಗುವ ಹಂತದ ಪ್ರಕ್ರಿಯೆಯಿಂದಾಗಿ ಅಧಿಕ ಸಮಯಾವಕಾಶದ ಅಗತ್ಯವಿದ್ದ ಕಾರಣ ಫಲಿತಾಂಶ ಪ್ರಕಟನೆಯಲ್ಲಿ ವಿಳಂಬವಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.

ಇದನ್ನೂ ಓದಿ:ಈ ವರ್ಷವಾದರೂ ಮಾಸ್ಕ್ ತೆಗೆದು ಓಡಾಡುವ ದಿನಗಳು ಬರಲಿ: ಸಿಜೆ ಆಶಯ

ಯಾವ ವಿದ್ಯಾರ್ಥಿಯೂ ಆತಂಕಕ್ಕೆ ಒಳಗಾಗಬೇಕಿಲ್ಲ. ಪ್ರಕಟಿತ ಫಲಿತಾಂಶದ ಬಗ್ಗೆ ಗೊಂದಲವಿದ್ದಲ್ಲಿ ತಮ್ಮ ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಕಾಲೇಜು ಪ್ರಾಂಶುಪಾಲರ ಮುಖಾಂತರ ಪರೀûಾಂಗ ಕುಲಸಚಿವರ ಕಚೇರಿಗೆ ಪತ್ರ ಬರೆದು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next