Advertisement

ಹೈನುಗಾರಿಕೆಯಿಂದ ಗ್ರಾಮೀಣರ ಬದುಕು ಹಸನು

07:00 AM Jan 14, 2019 | |

ತಿ.ನರಸೀಪುರ: ಹಾಲಿಗೆ ಮಾರುಕಟ್ಟೆಯಲ್ಲಿ ನಿಖರವಾದ ಬೆಲೆ ಖಚಿತವಾಗಿ ಸಿಗುವುದರಿಂದ ರೈತರು ಹೈನುಗಾರಿಕೆಯಲ್ಲಿ ತೊಡಗಿ ಅಭಿವೃದ್ಧಿ ಹೊಂದಬೇಕು ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಅಧ್ಯಕ್ಷ ಕೆ.ಜಿ.ಮಹೇಶ್‌ ಹೇಳಿದರು.

Advertisement

ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ ಸದೃಢರಾಗಲು ಹೈನುಗಾರಿಕೆ ಉಪ ಕಸುಬನ್ನಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಹೈನುಗಾರಿಕೆಗೆ ಉತ್ತೇಜನ ನೀಡಲು ಒಕ್ಕೂಟದಿಂದ ಹಾಲಿನ ಬೆಲೆಯನ್ನು 1 ರೂ. ಏರಿಕೆ ಮಾಡಿದ್ದೇವೆ. ಲೀಟರ್‌ ಹಾಲಿಗೆ ಕನಿಷ್ಠ ಬೆಲೆ 23.50 ರೂ. ನೀಡಲಾಗುತ್ತಿತ್ತು. ಈಗ 24.50 ರೂ. ಲಭಿಸಲಿದೆ ಎಂದರು. ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಮಾತನಾಡಿ,

ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವಲ್ಲಿ ಹೈನುಗಾರಿಕೆ ಸಹಕಾರಿಯಾಗಿದ್ದು, ಸರ್ಕಾರ ನೀಡುವ ಸಹಾಯಧನವನ್ನು ರೈತರ ಕುಟುಂಬದ ಆರೋಗ್ಯ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಪ್ರಗತಿಯ ಹಾದಿಯಲ್ಲಿರುವ ಹೆಗ್ಗೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸ್ವ ಸಾಮರ್ಥ್ಯದಿಂದ ಕಟ್ಟಡ ನಿರ್ಮಾಣ: ಹೆಗ್ಗೂರು ಗ್ರಾಮದಲ್ಲಿ ಯಾವುದೇ ಚುನಾಯಿತ ಜನಪ್ರತಿನಿಧಿಗಳ ಅನುದಾನವಿಲ್ಲದೆ, ಕೆಎಂಎಫ್ ಅಥವಾ ಜಿಲ್ಲಾ ಒಕ್ಕೂಟದ ನೆರವಿಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಿರುವುದು ವಿಶೇಷವಾಗಿದೆ.

Advertisement

ಈ ವೇಳೆ ಜಿಪಂ ಸದಸ್ಯ ಎಸ್‌.ಜಯಪಾಲ್‌ ಭರಣಿ, ತಾಪಂ ಅಧ್ಯಕ್ಷ ಆರ್‌.ಚಲುವರಾಜು, ಎಚ್‌.ಜವರಯ್ಯ, ಮೈಮುಲ್‌ ನಿರ್ದೇಶಕರಾದ ಕೆ.ಸಿ.ಬಲರಾಮ್‌, ಲೀಲಾ, ಮಾಜಿ ನಿರ್ದೇಶಕ ಕೆ.ಬಿ.ಪ್ರಭಾಕರ, ಉಪ ವ್ಯವಸ್ಥಾಪಕ ಡಾ.ಕೆ.ಬಿ.ಪ್ರಭಾಕರ್‌, ವಿಸ್ತರಣಾಧಿಕಾರಿ ಆರ್‌.ವಿನುತಾ, ನಿವೃತ್ತ ಸಹಾಯಕ ವ್ಯವಸ್ಥಾಪಕರಾದ  ಕಾ.ನಂ.ಗಣೇಶ್‌, ಎಂ.ರವೀಂದ್ರನಾಥ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ನಿರ್ದೇಶಕ ಎನ್‌.ಆರ್‌.ರಾಜೇಶ್‌, ಗ್ರಾಪಂ ಅಧ್ಯಕ್ಷ ಸಿ.ರಾಜು,

ಮಾಜಿ ಅಧ್ಯಕ್ಷ ಟಿ.ಕೆ.ಲಕ್ಷ್ಮೀ, ಸದಸ್ಯರಾದ ಎಚ್‌.ಎನ್‌.ಸತೀಶ್‌, ಶೋಭಾ, ನಾಗರಾಜಚಾರಿ, ಪಿಎಸಿಸಿಎಸ್‌ ಅಧ್ಯಕ್ಷ ಎಚ್‌.ಕೆ.ಶಿವಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ಎಂ.ಅಂಕರಾಜೇಗೌಡ, ದಾಸಯ್ಯ, ಸಂಘದ ಅಧ್ಯಕ್ಷ ಎಚ್‌.ಪಿ.ಮಧುವರ್ಧನ್‌, ಸಿಇಒ ಎಚ್‌.ಆರ್‌.ನಿಂಗರಾಜು, ಉಪಾಧ್ಯಕ್ಷ ಬಸವೇಗೌಡ, ನಿರ್ದೇಶಕರಾದ ರಾಮಲಿಂಗೇಗೌಡ, ಎಚ್‌.ಎನ್‌.ನಾಗರಾಜು, ಎಚ್‌.ಎನ್‌.ನಂಜೇಗೌಡ, ಚಿಕ್ಕಸಿದ್ದಯ್ಯ, ಗೌರಮ್ಮ,ರತ್ನಮ್ಮ, ಕೆಂಪಮ್ಮ, ನಿಂಗಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next