ಬೆಂಗಳೂರು: ಪದವಿ ಮತ್ತು ಡಿಪ್ಲೊಮಾಕೋರ್ಸ್‌ಗಳ ಬೆಸ ಸೆಮಿಸ್ಟರ್‌ನ ಬಾಕಿ ಇರುವಪರೀಕ್ಷೆಗಳನ್ನು ಆಗಸ್ಟ್ ಮತ್ತು ಅಕ್ಟೋಬರ್‌ನ ಒಳಗಾಗಿ ಮುಗಿಸಲು ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆಬಂದು ಪರೀಕ್ಷೆ ಬರೆಯಲಿದ್ದಾರೆ.ಪರೀಕ್ಷೆಗಳು ಹಾಗೂ ಕಾಲೇಜುಗಳನ್ನುತೆರೆಯುವ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂಉನ್ನತ ಶಿಕ್ಷಣಮಂಡಳಿ ಸದಸ್ಯರ ಜತೆ ಶುಕ್ರವಾರಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವರೂಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ,ಬೆಸ ಸೆಮಿಸ್ಟರ್ (1,3,5,) ಡಿಪ್ಲೊಮಾಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28ಮತ್ತು ಉಳಿದ ವಿಷಯಗಳ ಥಿಯರಿ ಪರೀಕ್ಷೆಗಳು ಆಗಸ್ಟ್ 2ರಿಂದ 21ರವರೆಗೆ ನಡೆಯಲಿದೆ.
ಸಮ ಸೆಮಿಸ್ಟರ್ (2,4,6) ಡಿಪ್ಲೊಮಾಪ್ರಾಯೋಗಿಕಪರೀಕ್ಷೆಗಳನ್ನು ನವೆಂಬರ್2ರಿಂದ12ರವರೆಗೆ ಹಾಗೂ ಥಿಯರಿ ಪರೀಕ್ಷೆಗಳನ್ನುನ.17ರಿಂದ ಡಿಸೆಂಬರ್ 6ರವರೆಗೆ ನಡೆಸಲುಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆಕಡ್ಡಾಯವಾಗಿರಲಿದೆ.
ಯಾವುದೇವಿದ್ಯಾರ್ಥಿಗೆ ಕೊರೊನಾಪಾಸಿಟಿವ್ ಬಂದಿದ್ದರೆಅಂತವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಕೋವಿಡ್‌ಲಾಕ್‌ಡೌನ್ ಕಾರಣಕ್ಕೆಕರ್ನಾಟಕವಿವಿ,ಕಲಬುರಗಿವಿವಿ,ಬೆಂಗಳೂರುವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ.ಅವುಗಳನ್ನು ಅಕ್ಟೋಬರ್ ತಿಂಗಳ ಒಳಗೆನಡೆಸಲು ಸೂಚಿಸಲಾಗಿದೆ ಎಂದು ಮಾಹಿತಿನೀಡಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಡಾ.ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಕುಮಾರ ನಾಯಕ್, ಉನ್ನತ ಶಿಕ್ಷಣ ಮಂಡಳಿಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತುತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತಪಿ.ಪ್ರದೀಪ್ ಇದ್ದರು.