Advertisement

ಪದವಿ ತರಗತಿಗಳು ಇಂದು ಆರಂಭ

11:52 PM Jan 14, 2021 | Team Udayavani |

ಬೆಂಗಳೂರು: ಎಸೆಸೆಲ್ಸಿ  ಮತ್ತು ದ್ವಿತೀಯ ಪಿಯುಸಿಯ ಭೌತಿಕ ತರಗತಿ ಗಳು ಆರಂಭವಾಗಿರುವ ಬೆನ್ನಲ್ಲೆ  ಜ.15ರಿಂದ ಎಲ್ಲ ಪದವಿ, ಸ್ನಾತಕೋ ತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಆರಂಭ ವಾಗಲಿವೆ.

Advertisement

ಈಗಾಗಲೇ ಆರೋಗ್ಯ ಇಲಾಖೆ ಹೊರಡಿಸಿರುವ ಕೋವಿಡ್ ಮಾರ್ಗ ಸೂಚಿಯಂತೆ ಮೊದಲ ಮತ್ತು ಎರಡನೆ ವರ್ಷದ ಪದವಿ, ಮೊದಲ ವರ್ಷದ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಎಲ್ಲ ತರಗತಿಗಳು ಆರಂಭವಾಗಲಿವೆ.  ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿ ಗಳು ಪೋಷಕರಿಂದ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಈ ಪತ್ರ ತರದಿದ್ದರೆ ನೇರ ತರಗತಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಆನ್‌ಲೈನ್‌ ಮೂಲಕವೂ ಹಾಜರಾಗಬಹುದು: ಬೋಧನೆ, ಪ್ರಾಕ್ಟಿಕಲ್‌, ಪ್ರಾಜೆಕ್ಟ್ ತರಗತಿಗಳನ್ನು ಅಗತ್ಯ ಬಿದ್ದರೆ ಪಾಳಿ ಆಧಾರದಲ್ಲಿ ಮಾಡಬಹುದು. ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next