Advertisement
ರವಿವಾರ ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ನಡೆದ 4ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿ, ಆಶೀರ್ವಚನ ನೀಡಿದರು.
Related Articles
ಕಾರಿ/ ನಿರ್ದೇಶಕ ರಮೇಶ್ ಯು. ಮಾತನಾಡಿ, ಪದವೀಧರರು ಸಾಮಾ ಜಿಕ ಜವಾಬ್ದಾರಿಯನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಅಲ್ಲದೇ ದೇಶದ ಪ್ರಗತಿಗೆ ಕಾರಣರಾಗಬೇಕು. ಪದವೀಧರರು ತಾವು ಕಲಿತ ಸಂಸ್ಥೆಯ ರಾಯಭಾರಿ ಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ವರ್ಷದಲ್ಲಿ ಕನಿಷ್ಠ ಒಮ್ಮೆಯಾ ದರೂ ತಾವು ಕಲಿತ ಸಂಸ್ಥೆಗೆ ಭೇಟಿ ನೀಡುವ ಪರಿಪಾಠ ಬೆಳೆಸಬೇಕು ಎಂದರು.
Advertisement
ಶ್ರೀ ಸೋದೆ ವಾದಿರಾಜ ಮಠಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಪಾಡಿಗಾರುಶ್ರೀನಿವಾಸ ತಂತ್ರಿ, ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗದ ಶ್ವೇತಾ ಎಚ್., ಸಿವಿಲ್ ವಿಭಾಗದ ಗೀತಾ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರತೀಕ್ಷಾ ಮತ್ತು ಯಂತ್ರ ಶಿಲ್ಪ ವಿಭಾಗದ ಸುಜಿತ್ ಕುಮಾರ್ ಇವರಿಗೆ ಮಂಗಳೂರಿನ ಪ್ರತಿಷ್ಠಿತ ಮೆ| ಎಸ್.ಎಲ್. ಶೇಟ್ ಜುವೆಲರ್ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್ ಅವರಿಂದ ಪ್ರಾಯೋಜಿಸಲ್ಪಟ್ಟ ಚಿನ್ನದ ಪದಕಗಳನ್ನು ಪ್ರದಾನಿಸಲಾಯಿತು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರತ್ನ ಕುಮಾರ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರೊ| ಡಾ| ತಿರುಮಲೇಶ್ವರ ಭಟ್ ಪ್ರಮಾಣ ವಚನ ಬೋಧಿಸಿದರು. ಅನುಜ್ಞಾ ರಾವ್, ಕಾರ್ತಿಕ್ ಪರಿಚಯಿಸಿದರು. ಡಾ| ರೀನಾ ಕುಮಾರಿ ವಂದಿಸಿದರು. ಅನಂತ್ ಮಲ್ಯ, ಶರೀನ್ ನೊರೊನ್ಹಾ ನಿರೂಪಿಸಿದರು.