Advertisement

ಕಾನ್‌ಸ್ಟೆಬಲ್‌ ಹುದ್ದೆಗೆ ಉನ್ನತ ಶಿಕ್ಷಣದವರ ಆಸಕ್ತಿ: 8 ಮಂದಿ ಪಿಜಿ,18 ಬಿಇ,49 ಪದವೀಧರರು!

12:08 AM Feb 25, 2022 | Team Udayavani |

ಉಡುಪಿ: ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಪೊಲೀಸ್‌ ಇಲಾಖೆ ಸೇರಲು ಯತ್ನಿಸುವ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಹೊಡೆಯುತ್ತಿದೆ. ಬಿಇ, ಎಂಎಸ್ಸಿ ಮಾಡಿದ ಪದವೀಧರರು ಕಾನ್‌ಸ್ಟೆಬಲ್‌ಗ‌ಳಂತಹ ಸರಕಾರಿ ಹುದ್ದೆಗಳನ್ನು ಅರಸಿ ಬರುತ್ತಿದ್ದಾರೆ.

Advertisement

ಜಿಲ್ಲೆಯ ತಾತ್ಕಾಲಿಕ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 13ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳ ನಿರ್ಗಮನ ಪಥಸಂಚಲನ ಫೆ. 25ರಂದು ನಡೆಯಲಿದ್ದು, ಎಎಸ್ಸಿ (2 ಮಂದಿ), ಎಂಎ (2), ಎಂಕಾಂ (3), ಎಂಬಿಎ (1), ಬಿಇ (18), ಸಾಮಾನ್ಯ ಪದವಿ (49), ಡಿಪ್ಲೊಮಾ ಐಟಿಐ (1), ಪಿಯುಸಿ (20), ಎಸೆಸೆಲ್ಸಿ (4) ವ್ಯಾಸಂಗ ಮಾಡಿದ ಒಟ್ಟು 100 ಮಂದಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ವಿವಿಧ ಜಿಲ್ಲೆಗಳಿಂದ ಆಗಮನ :

ಒಟ್ಟು 100 ಮಂದಿ ತರಬೇತಿ ಪಡೆದಿದ್ದು, ಕೋಲಾರದಿಂದ 25, ಬೆಂಗಳೂರು ಗ್ರಾಮಾಂತರ 16, ಚಿಕ್ಕಬಳ್ಳಾಪುರ 14, ಬೀದರ್‌ 12, ದ.ಕ. 7, ಮಂಡ್ಯ, ಚಿತ್ರದುರ್ಗ, ಚಾಮರಾಜನಗರದಿಂದ ತಲಾ 6, ಬೆಳಗಾವಿ 4, ಯಾದಗಿರಿ ಮತ್ತು ತುಮಕೂರಿನಿಂದ ತಲಾ ಇಬ್ಬರು ತರಬೇತಿ ಪಡೆದಿದ್ದಾರೆ.

ದೈಹಿಕ ಕಸರತ್ತುಗಳ ಜತೆಗೆ ಪೊಲೀಸ್‌ ಇಲಾಖೆಯ ವಿವಿಧ ಅಧಿಕಾರಿಗಳಿಂದ ಮನಃಶಾಸ್ತ್ರ, ಮನೋಕೌಲಶ ತರಬೇತಿಯನ್ನೂ ನೀಡಲಾಗುತ್ತದೆ. ಇದುವರೆಗೆ ಈ ಕೇಂದ್ರದಲ್ಲಿ ಸಾವಿರಕ್ಕೂ ಅಧಿಕ ಮಂದಿ ವಿವಿಧ ಜಿಲ್ಲೆಯ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ತರಬೇತಿ ಪಡೆದುಕೊಂಡಿದ್ದಾರೆ.

Advertisement

ವಿವಿಧ ತರಬೇತಿ :

ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದಗೆ ನೇಮಕಾತಿ ಆದ ಬಳಿಕ ಅವರಿಗೆ ತರಬೇತಿ ನೀಡುವ ಬಗ್ಗೆ ಬೆಂಗಳೂರಿನಿಂದ ನಿರ್ದೇಶನ ನೀಡಲಾಗುತ್ತದೆ. ಅದರಂತೆ ಕೆಲವೊಂದು ಜಿಲ್ಲೆಗೆ ಅಭ್ಯರ್ಥಿಗಳನ್ನು ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಅವರಿಗೆ ದೈಹಿಕ ತರಬೇತಿ ಸಹಿತ ತರಗತಿಗಳನ್ನು ನಡೆಸಿ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ.ರಾಘವೇಂದ್ರ, ಡಿವೈಎಸ್‌ಪಿ,  ಡಿಆರ್‌ ಪೊಲೀಸ್‌, ಉಡುಪಿ

 

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next