Advertisement

ಪದವಿ ಕಾಲೇಜು ವೇಳಾಪಟ್ಟಿ: ಸುತ್ತೋಲೆ ವಾಪಸ್‌

03:45 AM Jul 12, 2017 | Harsha Rao |

ಬೆಂಗಳೂರು: ರಾಜ್ಯದ ಪದವಿ ಕಾಲೇಜು ತರಗತಿಗಳ ವೇಳಾಪಟ್ಟಿ ಬದಲಾಯಿಸಲು ಹೊರಟಿದ್ದ ರಾಜ್ಯ ಸರಕಾರಕ್ಕೆ ಆರಂಭದಲ್ಲೇ ಮುಜುಗರವಾಗಿದೆ. 

Advertisement

ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಬರಲು ಕಷ್ಟವಾ ಗುತ್ತದೆ, 10 ಗಂಟೆಗೇ ಕಾಲೇಜುಗಳ ಬಾಗಿಲು ತೆರೆದರೆ ಸೂಕ್ತ ಎಂಬ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಬೇಡಿಕೆಗೆ ಮಣಿದಿರುವ ಉನ್ನತ ಶಿಕ್ಷಣ ಇಲಾಖೆ, ಈ ಸಂಬಂಧ ಹೊರಡಿಸಲಾಗಿದ್ದ ಸುತ್ತೋಲೆಯನ್ನು ವಾಪಸ್‌ ಪಡೆದಿದೆ. ಹೀಗಾಗಿ ಹಳೆಯ ವೇಳಾಪಟ್ಟಿಯಂತೆಯೇ ಕಾಲೇಜುಗಳು ನಡೆಯಲಿವೆ. ಒಂದೆರಡು ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆ ಈ ಸಂಬಂಧ ಹೊಸ ಸುತ್ತೋಲೆ ಹೊರಡಿಸಲಿದೆ. 

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ರಾಜ್ಯದ ಪದವಿ ಕಾಲೇಜುಗಳ ವೇಳಾಪಟ್ಟಿ ಬದಲಾವಣೆ ಮಾಡಿ, ಬೆಳಗ್ಗೆ 8 ಗಂಟೆಗೇ ಆರಂಭಿಸುವಂತೆ ಆದೇಶಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸರಕಾರಿ ಪದವಿ ಕಾಲೇಜಿನ ಕೆಲವು ಅಧಿಕಾರಿಗಳು ಮತ್ತು ರಾಜ್ಯ ಸರಕಾರಿ ಪದವಿ ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಹಳೆ ವೇಳಾಪಟ್ಟಿಯನ್ನೇ ಮುಂದು ವರಿಸುವಂತೆ ಮನವಿ ಸಲ್ಲಿಸಿದ್ದರು. ಅಲ್ಲದೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಬದಲಿ ವೇಳಾಪಟ್ಟಿ ಬಗ್ಗೆ ಆಕ್ಷೇಪವೆತ್ತಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಾಯರಡ್ಡಿ ಅವರು ಸುತ್ತೋಲೆಯನ್ನು ವಾಪಸ್‌ ಪಡೆಯುವಂತೆ ಸೂಚನೆ ನೀಡಿದ್ದಾರಲ್ಲದೆ, ಶೀಘ್ರ ಪರಿಷ್ಕೃತ ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆಗಲೇ ಕಾಲೇಜು ಆರಂಭ: ರಾಜ್ಯದಲ್ಲಿರುವ 411 ಸರಕಾರಿ ಪದವಿ ಕಾಲೇಜುಗಳ  ಶೈಕ್ಷಣಿಕ ವರ್ಷ ಜು.10ರಂದು ಆರಂಭವಾಗಿದ್ದು, ಮೊದಲ ದಿನ ಬಹುತೇಕ ವಿದ್ಯಾರ್ಥಿ ಗಳು 8 ಗಂಟೆಗೆ ತರಗತಿಗೆ ಬಂದಿದ್ದರೂ ತರಗತಿಗಳು 10 ಗಂಟೆಯಿಂದಲೇ ಆರಂಭವಾ ಗಿವೆ. ಹೊಸ ವೇಳಾಪಟ್ಟಿಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಬಾರದಿದ್ದುದರಿಂದ ಹಳೆ ವೇಳಾ ಪಟ್ಟಿಯಂತೆ ಕಾಲೇಜು ತರಗತಿಗಳನ್ನು ನಡೆಸಲು ಇಲಾಖೆಗೆ ಸಚಿವರು ಸೂಚನೆ ನೀಡಿದ್ದಾರೆ. ಅದರಂತೆ ತರಗತಿಗಳು ನಡೆಯಲಿವೆ ಎಂದು ಇಲಾಖೆಯ ಉನ್ನತ ಮೂಲ ಸ್ಪಷ್ಟಪಡಿಸಿದೆ.

ಆಧುನಿಕ ಜೀವನ ಪದ್ಧತಿ ಹಾಗೂ ರಾಜ್ಯದ ವಾತಾವರ‌ಣಕ್ಕೆ ಅನುಗುಣವಾಗಿ ಬೆಳಗ್ಗೆ ಎಂಟು ಗಂಟೆಗೆ ತರಗತಿಗೆ ವಿದ್ಯಾರ್ಥಿಗಳು, ಉಪನ್ಯಾಸಕ, ಪ್ರಾಧ್ಯಾಪಕರು ಹಾಜರಾಗುವುದು ಸುಲಭ ಸಾಧ್ಯವಲ್ಲ. ಬೆಂಗಳೂರಿನಂಥ ನಗರ ಗಳಲ್ಲಿ ಇದು ಇನ್ನೂ ಕಷ್ಟ. ಬೆಳಗ್ಗೆ 8 ಗಂಟೆಗೆ ತರಗತಿ ಆರಂಭವಾದರೆ, 7.30 ಅಥವಾ 7.45ರ ಹೊತ್ತಿಗೆ ಕಾಲೇಜಿನಲ್ಲಿ ಇರಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲ  ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ದೂರ ಪ್ರಯಾಣ ಮಾಡಿ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅಂಥ ವಿದ್ಯಾರ್ಥಿಗಳು 5 ಗಂಟೆಗೆ ಮನೆ ಬಿಡಬೇಕಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next