Advertisement

ಗ್ರೇಡ್‌-1 ಗ್ರಾ.ಪಂ. ಕಾರ್ಯದರ್ಶಿಗಳಿಗೆ PDO ಭಡ್ತಿ: ಆದೇಶ ವಾಪಸ್‌

10:56 PM Oct 08, 2023 | Team Udayavani |

ಬೆಂಗಳೂರು: ಜಿಲ್ಲಾ ಪಂಚಾಯತ್‌ ಹಂತದಲ್ಲಿ ಮಾ.29ರ ಬಳಿಕ ಗ್ರೇಡ್‌-1 ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗೆ ನೀಡಿದ್ದ ಭಡ್ತಿಯನ್ನು ಹಿಂಪಡೆಯಲು ಪಂಚಾಯತ್‌ರಾಜ್‌ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಆದೇಶಿಸಿದ್ದಾರೆ.

Advertisement

ಮೊದಲು ಜಿಲ್ಲಾ ವೃಂದದಲ್ಲಿದ್ದ ಪಿಡಿಒ ಹುದ್ದೆಗಳನ್ನು ರಾಜ್ಯ ವೃಂದವೆಂದು ಪರಿಗಣಿಸಲಾಗಿದ್ದು, ಮಾ.29ರಿಂದಲೇ ಈ ಆದೇಶ ಜಾರಿಗೆ ಬಂದಿದೆ. ಅಂದಿನಿಂದ ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿ ಸರಕಾರವಿದ್ದರೆ, ಇನ್ನುಳಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕ ಹಾಗೂ ಶಿಸ್ತು ಪ್ರಾಧಿಕಾರವಾಗಿ ಪಂಚಾಯತ್‌ರಾಜ್‌ ಆಯುಕ್ತರನ್ನು ನೇಮಿಸಲಾಗಿದೆ. ಅದರಂತೆ ಗ್ರೇಡ್‌-1 ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹುದ್ದೆಯಿಂದ ಪಿಡಿಒ ಹುದ್ದೆಗೆ ಭಡ್ತಿ ನೀಡುವ ಅಧಿಕಾರವೂ ಆಯುಕ್ತರದ್ದೇ ಆಗಿರುತ್ತದೆ.

ಜಿಲ್ಲಾ ಪಂಚಾಯತ್‌ಗಳ ಗ್ರೇಡ್‌-1 ಪಂಚಾಯತ್‌ ಕಾರ್ಯದರ್ಶಿಗಳ ಜ್ಯೇಷ್ಠತೆ ಆಧರಿಸಿ, ಅರ್ಹರಿಗೆ ಭಡ್ತಿ ಕೊಡಬೇಕಾಗಿರುತ್ತದೆ. ಆದರೆ ಮಾ.29ರ ಬಳಿಕವೂ ಕೆಲವು ಜಿ.ಪಂ.ಗಳಲ್ಲಿ ಗ್ರೇಡ್‌ 1 ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹುದ್ದೆಯಿಂದ ಪಿಡಿಒ ಹುದ್ದೆಗೆ ಪದೋನ್ನತಿ ನೀಡಿದ್ದು, ಇದು ಸರಕಾರಿ ಅದೇಶದ ಉಲ್ಲಂಘನೆಯಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತ್‌ಗಳು ಕೂಡಲೇ ಅಂತಹ ಆದೇಶಗಳನ್ನು ಹಿಂಪಡೆದು, ಪಂಚಾಯತ್‌ರಾಜ್‌ ಆಯುಕ್ತಾಲಯಕ್ಕೆ ಸಲ್ಲಿಸಬೇಕು. ಇನ್ನು ಮುಂದೆ ಭಡ್ತಿ ವಿಚಾರದಲ್ಲಿ ಜಿಲ್ಲಾ ಪಂಚಾಯತ್‌ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next