ಭೀಮಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಜ.16ರಂದು ಅಡಿಗಲ್ಲು ಸಮಾರಂಭ ಆಯೋಜಿಸಲಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ತಿಳಿಸಿದರು.
Advertisement
ಪಟ್ಟಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನ ಕೋಳಕೂರಹಾಗೂ ಆಂದೋಲಾ ಜಿಪಂ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಹೈದ್ರಾಬಾದ, ಚಿತ್ತಾಪುರ, ಸೇಡಂ ಹಾಗೂ ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸಲು ಈ ಸೇತುವೆ ಅನುಕೂಲವಾಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದೆ. 50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. 18 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕೋನಾಹಿಪ್ಪರಗಾ-ಸರಡಗಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಶೀಘ್ರದಲ್ಲಿ ಹೊನ್ನಾಳ-ತುನ್ನೂರ ಸೇತುವೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗುವುದು ಎಂದು ತಿಳಿಸಿದರು. ಮುಖಂಡರಾದ ರಾಜಶೇಖರ ಸೀರಿ, ವಸಂತ ನರಿಬೋಳ, ಕಾಶಿರಾಯಗೌಡ ಯಲಗೋಡ, ಯುವ ಕಾಂಗ್ರೆಸ್ ಘಟಕದ
ಅಧ್ಯಕ್ಷ ಮಲ್ಲಿಕಾರ್ಜುನ ಬೂದಿಹಾಳ, ನೀಲಕಂಟ ಅವುಂಟಿ, ಅಬ್ದುಲ್ ರಹೇಮಾನ್ ಪಟೇಲ, ಮಹಿಮೂದ್ ನೂರಿ, ಪ್ರಕಾಶ ಹಳಿಮನಿ, ಸುರೇಶ ಗುಡೂರ, ಶರಣು ಗುತ್ತೇದಾರ, ಮರೆಪ್ಪ ಸರಡಗಿ ಸುದ್ದಿಗೋಷ್ಠಿಯಲ್ಲಿದ್ದರು.
Related Articles
Advertisement