ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಮತ್ತು ಕಸ ಸಾಗಾಣಿಕೆಯಲ್ಲಿನ ಲೋಪ ಸರಿಪಡಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಕಸ ಸಂಗ್ರಹಿಸುವ ಕಾಂಪ್ಯಾಕ್ಟರ್ ಹಾಗೂ ಎಲ್ಲ ಆಟೋಗಳಿಗೆ ಜಿಪಿಎಸ್ ಅಳವಡಿಸುವ ಕೆಲಸಕ್ಕೆ ಪಾಲಿಕೆ ಚಾಲನೆ ನೀಡಿದೆ. ನಗರದಲ್ಲಿ 4,200 ಆಟೋಗಳು ಹಾಗೂ 550 ಕಾಂಪ್ಯಾಕ್ಟರ್‌ಗಳ ನ್ನು ಕಸ ವಿಲೇ ವಾರಿಗೆ ಬಳಸಿಕೊಳ್ಳಲಾಗುತ್ತಿದೆ.
ಇಷ್ಟು ವಾಹನಗಳಿಗೂ ಜಿಪಿಎಸ್ ಟ್ರ್ಯಾಕರ್‌ಗಳನ್ನು (ವಾಹನ ಎಲ್ಲಿದೆ ಎಂದು ಪತ್ತೆ ಹಚ್ಚುವ ಸಾಧನ)ಅಳವಡಿಸಲಾಗುವುದು. ಮೊದಲ ಹಂತದಲ್ಲಿ ಹೆಬ್ಟಾಳ, ಯಲಹಂಕ, ದಾಸರಹಳ್ಳಿ ಹಾಗೂ ಪುಲಕೇಶಿ ನಗರದಲ್ಲಿ ತ್ಯಾಜ್ಯ ಸಂಗ್ರಹ ಕಾಂಪ್ಯಾಕ್ಟರ್ ಹಾಗೂ ಆಟೋಗಳಿಗೆ ಜಿಪಿಎಸ್ ಅಳವಡಿಸಲು ರಂಭಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 355 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ಬಿಬಿಎಂಪಿ (ಘನತ್ಯಾಜ್ಯ ವಿಭಾಗ) ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಎಐಎಸ್‌ಐ140 ಮಾದರಿಯ ಜಿಪಿಎಸ್ ಅಳವಡಿಸಲಾಗುತ್ತಿದ್ದು, ಪ್ರತಿ ಜಿಪಿಎಸ್‌ಗೆ 8,500 ರೂ. ವೆಚ್ಚವಾಗಲಿದೆ. ಈ ಮೊತ್ತವನ್ನು ಗುತ್ತಿಗೆದಾರರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಮೊದಲ ಹಂತದ ಬಳಿಕ ಹಂತ ಹಂತವಾಗಿ ನಗರದ ಎಂಟು ವಲಯಗಳಲ್ಲಿನ ಆಟೋ – ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಜು.15ರ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಒಮ್ಮೆ ಎಲ್ಲ ಆಟೋ ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಜೆಪಿಎಸ್ ಅಳವಡಿಸುವುದು ಪೂರ್ಣಗೊಂಡರೆ, ಯಾವ ವಲಯದಿಂದ ಎಷ್ಟು ಕಸ ಸಂಗ್ರಹವಾಗುತ್ತಿದೆ, ಯಾವ ಕಾಂಪ್ಯಾಕ್ಟರ್‌ಗಳು ಎಲ್ಲಿವೆ ಎನ್ನುವುದು ತಿಳಿಯಲಿದೆ. ಅಲ್ಲದೆ, ಮುಖ್ಯವಾಗಿ ನಗರದಲ್ಲಿ ಎಷ್ಟು ಕಾಂಪ್ಯಾಕ್ಟರ್ ಹಾಗೂ ಆಟೋಗಳನ್ನು ಗುತ್ತಿಗೆದಾರರು ಬಳಸುತ್ತಿದ್ದಾರೆ ಎನ್ನುವುದು ತಿಳಿಯಲಿದ್ದು, ಅವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದರು.
ಇಂದೋರ್ ಮಾದರಿ ಸದ್ಯಕ್ಕೆ ಇಲ್ಲ: ನಗರದಲ್ಲಿ ಕಸ ಸಂಗ್ರಹಕ್ಕೆ ಪ್ರಾಯೋಗಿಕವಾಗಿ ಇಂದೋರ್ ಮಾದರಿಯನ್ನು ನಗರದ ಐದು ವಾರ್ಡ್‌ಗಳಲ್ಲಿ ಪರಿಚಯಿಸಲಾಗಿತ್ತು. ಸದ್ಯ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಇಂದೋರ್ ಮಾದರಿಯನ್ನು ತಾತ್ಕಾಲಿಕ ನಿಲ್ಲಿಸಲಾಗಿದೆ. ಕೋವಿಡ್ 19 ತುರ್ತು ಪರಿಸ್ಥಿತಿ ತಿಳಿಯಾದ ಮೇಲೆ ಈ ಬಗ್ಗೆ ಮೇಯರ್ ಹಾಗೂ ಆಯುಕ್ತರೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಂದೀಪ್ ತಿಳಿಸಿದರು.