Advertisement

ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆ ಖರೀದಿ ಜೋರು :ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದ ಬೇಡಿಕೆ

03:04 PM Nov 30, 2020 | sudhir |

ಕುಷ್ಟಗಿ: ಪ್ರಸಕ್ತ ವರ್ಷ ಸಕ್ಕರೆಗೊಂಬೆಗೆ ಬೇಡಿಕೆ ಹೆಚ್ಚುತ್ತಿದ್ದು, ಗೊಂಬೆಗಳ ತಯಾರಕರ ಬಾಳನ್ನು ಬೆಳಗಿಸಿದೆ. ಕೊರೊನಾ ವೈರಸ್‌ ಭೀತಿಯಿಂದ ಹಬ್ಬಗಳೆಲ್ಲವನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ. ಇದೀಗ ಕೊರೊನಾ ಸೋಂಕು ತಗ್ಗಿದೆ ಎನ್ನುವಾಗ ಗೌರಿ ಹುಣ್ಣಿಮೆ ಬಂದಿದ್ದು, ಉತ್ತಮ ಮಳೆ ಬೆಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮಕ್ಕೇನು ಕೊರತೆ ಇಲ್ಲ.

Advertisement

ಉತ್ತರ ಕರ್ನಾಟಕ ಈ ಭಾಗದ ಮಹಿಳೆಯರು, ಮಕ್ಕಳು ಕೂಡಿ ಗೌರಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಲಕ್ಷ್ಮೀ ಸ್ವರೂಪಿ ಗೌರಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಸಕ್ಕರೆ ಗೊಂಬೆಗಳಿಂದ ಆರತಿ ಮಾಡುವುದು ಈ ಹಬ್ಬದ ವೈಶಿಷ್ಟತೆಯಾಗಿದೆ. ಶೀಗೆ ಹುಣ್ಣಿಮೆಯಲ್ಲಿ ಸಕ್ಕರೆ ಗೊಂಬೆಗಳಿಗೆ ಬೇಡಿಕೆ ಕಡಿಮೆ. ಇನ್ನೂ ಗೌರಿ ಹುಣ್ಣಿಮೆಗೆ ವಾರ ಮೊದಲೇ
ಸಕ್ಕರೆಗೊಂಬೆ ತಯಾರಿಕರು ಬಿಡುವಿಲ್ಲದೇ ಕೆಲಸ ಮಾಡುತ್ತಾರೆ. ಇಲ್ಲಿನ ಹಳೆ ಬಜಾರ ಓಣಿಯಲ್ಲಿ ಐದು ದಶಕಗಳಿಂದ ಗೋಪಾಲ ಶ್ರೇಷ್ಠಿ ಅವರ ಮನೆಯಲ್ಲಿ ಸಕ್ಕರೆ ಗೊಂಬೆ ತಯಾರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಸಕ್ಕರೆ ಗೊಂಬೆಗಳ ಬೇಡಿಕೆ ಹೆಚ್ಚಿದ್ದರಿಂದ ದಿನವೂ 1 ಕ್ವಿಂಟಲ್‌ ಸಕ್ಕರೆಯಿಂದ ಗೊಂಬೆ ತಯಾರಿಸಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. 100 ರೂ. ಗೆ ಮಾರಾಟ
ಮಾಡುತ್ತಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಸರ್ಕಾರಿ ಸೇವೆ ವಿಳಂಬಕ್ಕೆ ಪರಿಹಾರ ಪಡೆಯುವುದು ಜನರ ಹಕ್ಕು: ಸುರೇಶ್ ಕುಮಾರ್

ಇತ್ತೀಚಿನ ದಿನಮಾನಗಳಲ್ಲಿ ಬಣ್ಣದ ಸಕ್ಕರೆ ಗೊಂಬೆಗಳಲ್ಲಿ ರಾಸಾಯನಿಕ ಬಣ್ಣ ಬಳಸುತ್ತಿರುವ ಕಾರಣ ಬಿಳಿ ಬಣ್ಣದ ಸಕ್ಕರೆಗೊಂಬೆಗಳಿಗೆ ಬೇಡಿಕೆ ಇದೆ. ಶುದ್ಧತೆಗೆ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತಾರೆ ಗೊಂಬೆ ತಯಾರಕಿ ವಾಸವಿ ಶ್ರೇಷ್ಠಿ.
ಆರಂಭದಲ್ಲಿ ಸಕ್ಕರೆ ಗೊಂಬೆಗಳ ಬೇಡಿಕೆ ಕೆ.ಜಿ.ಗೆ 80 ರೂ. ಇದ್ದರೆ ಬೇಡಿಕೆ ಹೆಚ್ಚಾದಂತೆ ಕೆ.ಜಿ. 120 ರೂ. ವರೆಗೆ ಮಾರಾಟವಾಗಿದೆ. ಆದರೂ ಸಕ್ಕರೆ ಗೊಂಬೆಗಳ ಬೇಡಿಕೆ ಹೆಚ್ಚಿದಂತೆ, ಸಕ್ಕರೆ ಗೊಂಬೆಗಳ ಮನೆಗಳಿಗೆ ತೆರಳಿ ಖರೀದಿಸುತ್ತಿರುವುದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next