Advertisement
ಬೆಳಗ್ಗೆ 11 ಗಂಟೆಯಿಂದ ಸಂಜೆ 5.30 ರವರೆಗೆ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು, ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾರಣವೇನು? ಕೋಮು ಸೌಹಾರ್ದ ಸಮಾವೇಶಕ್ಕೂ ತಮಗೂ ಸಂಬಂಧವೇನು? ಗೌರಿ ಮೊದಲು ಯಾವ ನಕ್ಸಲ್ ನಾಯಕನನ್ನು ಸಂದರ್ಶನ ಮಾಡಿದ್ದರು. ಗೌರಿ ಲಂಕೇಶ್ ಪತ್ರಿಕೆ ಬಿಡಲು ಕಾರಣವೇನು ಎಂಬುದೂ ಸೇರಿದಂತೆ ಸುಮಾರು 60ಕ್ಕೂ ಅಧಿಕ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ.
ಮಾನನಷ್ಠ ಮೊಕದ್ದಮೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ಗೌರಿ ಜತೆ ಕೆಲಸ ಮಾಡಿದ್ದೇನೆ. ನಂತರ
ಇಂದ್ರಜಿತ್ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆಂದು ತಿಳಿಸಿದ್ದಾರೆ. ಅಲ್ಲದೆ, ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಂದರ್ಶನಕ್ಕೆ ಯಾರ್ಯಾರು ಹೋಗಿದ್ದರು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೂಮ್ಮೆ ಮನೆ ಕೆಲಸದಾಕೆಯ ವಿಚಾರಣೆ: ಗೌರಿ ಮನೆಯಲ್ಲಿ 7-8 ವರ್ಷಗಳಿಂದ ಕೆಲಸ ಮಾಡುತ್ತಿರುವ ಗೌರಮ್ಮ ಅವರನ್ನು 3ನೇ ಬಾರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹತ್ಯೆಗೂ 15 ದಿನ ಮೊದಲು ಬೆಳಗಿನ ಸಂದರ್ಭದಲ್ಲಿ ಗೌರಿ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದರು. ಆದರೆ, ಆ ವ್ಯಕ್ತಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ಗೌರಮ್ಮ ಹೇಳಿಕೆ ದಾಖಲಿಸಿದ್ದರು. ಹೀಗಾಗಿ ಗೌರಿ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಆ ಇಬ್ಬರು ವ್ಯಕ್ತಿಗಳು ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿದ್ದವು. ಅವುಗಳನ್ನು ಇದೀಗ ಅಭಿವೃದ್ಧಿ ಪಡಿಸಿರುವ ಅಧಿಕಾರಿಗಳು, ಬುಧವಾರ ಮತ್ತೂಮ್ಮೆ ಗೌರಮ್ಮ ಅವರನ್ನು ಕರೆಸಿಕೊಂಡು ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ.